ಯಶ್ ಅಭಿನಯದ 'ಟಾಕ್ಸಿಕ್' ಟ್ರೇಲರ್ ರಿಲೀಸ್! ' 
ಬಾಲಿವುಡ್

'ಟಾಕ್ಸಿಕ್'​ ಟ್ರೇಲರ್​ ರಿಲೀಸ್​: ರಾ ಆ್ಯಕ್ಷನ್​ಗೆ ಎಮೊಷನಲ್​​​​​ ಟಚ್​; ಹಸಿ-ಬಿಸಿ ದೃಶ್ಯಕ್ಕೆ ಕಡಿವಾಣ; 'ರಾಯ' ನ ಪಾತ್ರದಲ್ಲಿ ಯಶ್​ ರೌದ್ರಾವತಾರ! Toxic Trailer

ಪ್ರಮುಖ ಮುಖ್ಯಾಂಶಗಳು

  • ಯಶ್ ಅಭಿನಯದ 'ಟಾಕ್ಸಿಕ್' ಟ್ರೇಲರ್ ರಿಲೀಸ್! '
  • 'ರಾಯ'ನಾಗಿ ರಾ ಆ್ಯಕ್ಷನ್ ಜೊತೆ ಎಮೋಷನಲ್ ಟಚ್
  • ಹಸಿ-ಬಿಸಿ ದೃಶ್ಯಗಳಿಗೆ ಕಡಿವಾಣ
ಬೆಂಗಳೂರು: ಕಳೆದ ಕೆಲ ದಿನಗಳಿಂದ ಕೇವಲ ಕನ್ನಡದ ಮಾತ್ರವಲ್ಲದೇ ಪ್ರಪಂಚದ ಸಿನಿ ಪ್ರೇಮಿಗಳು ತೀವ್ರ ಆಸಕ್ತಿಯಿಂದ ಕಾಯುತ್ತಿದ್ದ ಕ್ಷಣ ಇಂದು ನನಸಾಗಿದೆ. 
ಹೌದು, ರಾಕಿಂಗ್​ ಸ್ಟಾರ್​ ಯಶ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ, ಗೀತು ಮೋಹನ್​ದಾಸ್​ ನಿರ್ದೇಶನದ ಹಾಗೂ ಕೆವಿಎನ್​ ನಿರ್ಮಾಣದ ಟಾಕ್ಸಿಕ್​: ಎ ಫೇರಿ ಟೇಲ್​ ಫಾರ್​ ಗ್ರೋನ್ಪ್ಸ್​​​ ಸಿನಿಮಾದ ಟ್ರೇಲರ್ (Toxic Trailer)​ ಇಂದು (ಶನಿವಾರ, ಆ.8) ಬಿಡುಗಡೆಯಾಗಿದೆ.

ರಾ ಆ್ಯಕ್ಷನ್​, ಎಮೊಷನಲ್​ ಕಥೆ!

ಭರ್ತಿ 4 ನಿಮಿಷ 36 ಸೆಕೆಂಡ್​ ಇರುವ ಈ ಟ್ರೇಲರ್​ನಲ್ಲಿ ಮಾಫಿಯಾದ ಕತೆಯೊಂದನ್ನು ನಿರ್ದೇಶಕಿ ಗೀತು ಮೋಹನ್​ದಾಸ್​ ಹೇಳ ಹೊರಟಿದ್ದಾರೆಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ಸಿನಿಮಾದಲ್ಲಿ ರಾಯಾ ಹಾಗೂ ಟಿಕೆಟ್​ ಪಾತ್ರದಲ್ಲಿ ರಾಕಿಂಗ್​ ಸ್ಟಾರ್​ ಯಶ್​ ಕಾಣಿಸಿಕೊಂಡಿದ್ದು, ಸಿನಿಮಾ ತುಂಬಾ ರಾ ಆ್ಯಕ್ಷನ್​ ಸೀನ್​ಗಳು ಇವೆ.
ಆ್ಯಕ್ಷನ್​ ಜೊತೆಗೆ ಕತೆಗೆ ತಕ್ಕನಾದ ಎಮೊಷನಲ್​ ಆ್ಯಂಗಲ್​ ಅನ್ನು ನಿರ್ದೇಶಕಿ ನೀಡಿದ್ದು, ಕಿಯಾರಾ ಅಡ್ವಾನಿ ತಾಯಿಯ ಭಾವನೆಯನ್ನು ಮನಮುಟ್ಟುವಂತೆ ಕಾಣಿಸಿಕೊಂಡಿದ್ದಾರೆ. ಹಾಗೆಯೇ ನಯನತಾರಾ, ರುಕ್ಮಿಣಿ ವಸಂತ್​, ತಾರಾ ಸುತಾರಿಯಾ ಹಾಗೂ ಹುಮಾ ಖುರೇಶಿ ಈ ಸಿನಿಮಾದಲ್ಲಿ ಏನು ಮ್ಯಾಜಿಕ್​ ಮಾಡಲಿದ್ದಾರೆಂದು ಆಗಸ್ಟ್​ 26 ರಂದು ಉತ್ತರ ದೊರೆಯಲಿದೆ.

ಅಶ್ಲೀಲ ದೃಶ್ಯಗಳಿಗೆ ಕಡಿವಾಣ!

ಈ ಮೊದಲು ಬಿಡುಗಡೆಯಾಗಿದ್ದ, ನಟಿಯರ ಪರಿಚಯ, ತಬಾಯಿ ಹಾಡು ಹಾಗೂ ಯಶ್​ನ ಪಾತ್ರ ಪರಿಚಯ ಎಂದು ಬಿಡುಗಡೆ ಮಾಡಿದ್ದ ವಿಡಿಯೋಗಳಲ್ಲಿ ಮಿತಿ ಮೀರಿದ ಅಶ್ಲೀಲ ದೃಶ್ಯಗಳನ್ನು ಸೇರಿಸಲಾಗಿದೆ ಎಂದು ವೀಕ್ಷಕರಿಂದ ಆಕ್ರೋಶ ಹೊರಬಿದ್ದ ಹಿನ್ನಲೆಯಲ್ಲಿ ಟ್ರೇಲರ್​ನಲ್ಲಿ ಯಾವುದೇ ರೀತಿಯ ಅಶ್ಲೀಲ ಎನ್ನುವಂತ ದೃಶ್ಯಾವಳಿಗಳನ್ನು ಸೇರಿಸಿಲ್ಲ.
ಸಿನಿಮಾ ತಂಡದ ಈ ಬೆಳವಣಿಗೆ ಮಡಿವಂತ ಪ್ರೇಕ್ಷಕರ ಸಂತೋಷಕ್ಕೆ ಕಾರಣವಾಗಿದ್ದರೆ, ಇನ್ನು ಕೆಲ ವೀಕ್ಷಕರು ಸಿನಿಮಾ ಎಂದ ಮೇಲೆ ಎಲ್ಲವೂ ಇರಬೇಕಪ್ಪಾ, ಇಷ್ಟು ದಿನ ಬಿಡುಡೆಯಾದ ವಿಡಿಯೋಗಳಲ್ಲಿ ಹಸಿ-ಬಿಸಿ ಸನ್ನಿವೇಶ ತೋರಿಸಿ ಟ್ರೇಲರ್​ನಲ್ಲಿ ನಿರಾಸೆ ಮಾಡಿದ್ದಾರೆಂಬ ದೂರು ಕೂಡ ಕೇಳಿಬರುತ್ತಿದೆ. 

ಆದರೆ, ಸಿನಿಮಾದಲ್ಲಿ ಏನು ಇರಲಿದೆ? ಏನು ಇರಲ್ಲ? ಹಾಗೂ ಒಟ್ಟಾರೆ ಸಿನಿಮಾ ಹೇಗಿದೆ ಎನ್ನುವುದು ಆಗಸ್ಟ್​​ 26 ರಂದೇ ತಿಳಿದು ಬರಬೇಕಿದೆ, (ಏಜನ್ಸೀಸ್​).