ಬಾಲಿವುಡ್ ನಟಿ ನುಶ್ರತ್ ಭರೂಚಾ, 14 ವರ್ಷಗಳ ಕರಿಯರ್ನಲ್ಲಿ 20ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ರಿಲೀಸ್ ಆದ "ಡ್ರೀಮ್ಗರ್ಲ್'ನಲ್ಲಿ ಆಯುಷ್ಮಾನ್ ಖುರಾನಾಗೆ ನಾಯಕಿಯಾಗಿದ್ದರು. ಆದರೆ, ಇದೀಗ "ಡ್ರೀಮ್ಗರ್ಲ್ 2'ನಲ್ಲಿ ಅವರಿಗೆ ಕೊಕ್ ನೀಡಿರುವ ಚಿತ್ರತಂಡ, ಅನನ್ಯಾ ಪಾಂಡೆಗೆ ಅವಕಾಶ ನೀಡಿದೆ.
ಮೊದಲ ಭಾಗದಲ್ಲಿ ನಟಿಸಿದ್ದ ನಾಯಕ ಆಯುಷ್ಮಾನ್ ಹಾಗೂ ಮಂಜೋತ್ ಸಿಂಗ್, ಅನ್ನು ಕಪೂರ್, ವಿಜಯ್ ರಾಜ್ ಸೇರಿ ಹಲವರು ಸೀಕ್ವಲ್ನಲ್ಲೂ ಮುಂದುವರಿದಿದ್ದು, ನಾಯಕಿಯನ್ನು ಮಾತ್ರ ಬದಲಿಸಿರುವುದು, ನುಶ್ರತ್ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಮೌನ ಮುರಿದಿರುವ ಅವರು, "ಅವರು ನನ್ನನ್ನು ಏಕೆ ಆಯ್ಕೆ ಮಾಡಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು. ಆದರೆ, ಚಿತ್ರತಂಡದ ಜತೆ ಕೆಲಸ ಮಾಡುವುದನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಈ ಬದಲಾವಣೆಗೆ ಲಾಜಿಕ್ ಇಲ್ಲ, ಉತ್ತರವೂ ಇಲ್ಲ. ನಾನೂ ಮನುಷ್ಯಳು. ಹೀಗಾಗಿ ಈ ಬದಲಾವಣೆ ಬೇಸರ ಮೂಡಿಸಿದೆ' ಎಂದು ಹೇಳಿಕೊಂಡಿದ್ದಾರೆ.
ಅಂದಹಾಗೆ, ರಾಜ್ ಶಾಂಡಿಲ್ಯ ನಿರ್ದೇಶನದ "ಡ್ರೀಮ್ಗರ್ಲ್ 2' ಆ.25ರಂದು ರಿಲೀಸ್ ಆಗಲಿದ್ದು, ಅಂದೇ ನುಶ್ರತ್ ಅಭಿನಯದ "ಅಕೇಲಿ' ಚಿತ್ರವೂ ಬಿಡುಗಡೆಯಾಗಲಿದೆ. ಜತೆಗೆ "ಛೋರಿ 2' ಚಿತ್ರದಲ್ಲೂ ನುಶ್ರತ್ ಕಾಣಿಸಿಕೊಳ್ಳಲಿದ್ದಾರೆ.
-ಏಜೆನ್ಸೀಸ್