ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಬಿಗ್ಬಾಸ್ ಸೀಸನ್ 8 ಅದ್ಧೂರಿ ಆರಂಭವಾಗಿದೆ. ನಟ ಸುದೀಪ್ ಸಾರಥ್ಯದಲ್ಲಿ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿ ತೆಗೆದುಕೊಳ್ಳಲಾರಂಭಿಸಿದ್ದಾರೆ.
ಎಲ್ಲರ ಊಹೆಯಂತೆ ಟಿಕ್ಟಾಕ್ ಸ್ಟಾರ್ ಧನುಶ್ರೀ ಬಿಗ್ಬಾಸ್ ಮನೆಗೆ ಮೊದಲ ಎಂಟ್ರಿ ಪಡೆದಿದ್ದಾರೆ. ಪರಾರಿ, ಕಂಠೀರವ, ಮೊಗ್ಗಿನ ಮನಸ್ಸು ಹೀಗೆ ಹಲವು ಸಿನಿಮಾಗಳ ಮೂಲಕ ಕನ್ನಡಿಗರನ್ನು ರಂಜಿಸಿರುವ ನಟಿ ಶುಭಾ ಪೂಂಜಾ ಎರಡನೇ ಸ್ಪರ್ಧಿಯಾಗಿ ಮನೆಯೊಳಗೆ ತೆರಳಿದ್ದಾರೆ. ಹಿರಿಯ ನಟ ಶಂಕರ್ ಅಶ್ವಥ್ ಕೂಡ ಸ್ಪರ್ಧಿಯಾಗಿ ಮನೆ ಸೇರಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಮೂಡಿಬಂದ “ಹಾಡು ಕರ್ನಾಟಕ” ರಿಯಾಲಿಟಿ ಶೋನಲ್ಲಿ ತಮ್ಮ ಪ್ರತಿಭೆ ಮೂಲಕ ಖ್ಯಾತಿ ಪಡೆದಿದ್ದ ಗಾಯಕ, ಧಾರವಾಡದ ವಿಶ್ವನಾಥ್ ನಾಲ್ಕನೇ ಸ್ಪರ್ಧಿಯಾಗಿ ಮನೆ ಸೇರಿದ್ದಾರೆ.
ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿರುವ ಕಿರುತೆರೆ ನಟಿ ವೈಷ್ಣವಿ ಇದೀಗ ಬಿಗ್ಬಾಸ್ ಮನೆ ಸೇರಿದ್ದಾರೆ. ಸೀಸನ್ 8ರ ಐದನೇ ಸ್ಪರ್ಧಿಯಾಗಿ ವೈಷ್ಣವಿ ಗ್ರ್ಯಾಂಡ್ ಎಂಟ್ರಿ ತೆಗೆದುಕೊಂಡಿದ್ದಾರೆ.