ಸಿನಿವಾಣಿ

ಲಾಕ್​ಡೌನ್​ ನಡುವೆಯೂ ಬಿಗ್​ಬಿ ಮೊಮ್ಮಗಳ ಘಟಿಕೋತ್ಸವ ಸಂಭ್ರಮ!

ನವದೆಹಲಿ: ಕರೊನಾ ಪಿಡುಗು ವಿಶ್ವವ್ಯಾಪಿಯಾಗಿರುವ ಎಲ್ಲೆಡೆ ಲಾಕ್​ಡೌನ್​ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ವಿಶ್ವವಿದ್ಯಾಲಯಗಳು ಆಯೋಜಿಸುವ ಘಟಿಕೋತ್ಸವಗಳಿಗೂ ಲಾಕ್​ಡೌನ್​ ಅನ್ವಯವಾಗುವುದರಿಂದ, ಆ ಕಾರ್ಯಕ್ರಮಗಳು ಕೂಡ ಸ್ಥಗಿತಗೊಂಡಿವೆ. ಹೀಗಿದ್ದೂ ಬಿಗ್​ಬಿ ಎಂದೇ ಖ್ಯಾತರಾದ ಬಾಲಿವುಡ್​ನ ಶೆಹನ್​ಷಾ ಅಮಿತಾಭ್​ ಬಚ್ಚನ್​ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಘಟಿಕೋತ್ಸವದ ಸಂಭ್ರಮ ಆಚರಿಸಿದ್ದಾರೆ!

ಹೌದು, ಬಿಗ್​ಬಿ ಮೊಮ್ಮಗಳು ಅಂದರೆ ಅಮಿತಾಭ್​ ಬಚ್ಚನ್​ ಅವರ ಹಿರಿಯ ಪುತ್ರಿ ಶ್ವೇತಾ ಬಚ್ಚನ್​ ಮತ್ತು ನಿಖಿಲ್​ ನಂದಾ ಅವರ ಪುತ್ರಿ ನವ್ಯಾ ನವೇಲಿ ನಂದಾ ಅಮೆರಿಕದ ನ್ಯೂಯಾರ್ಕ್​ನ ಫೋರ್ಡ್​ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಇತ್ತೀಚೆಗೆ ವಿಶ್ವವಿದ್ಯಾಲಯದ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿತ್ತು. ಆದರೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಘಟಿಕೋತ್ಸವವನ್ನು ರದ್ದುಗೊಳಿಸಿತ್ತು.

ಆದರೆ, ಪದವೀಧರರಾದ ತಮ್ಮ ಸಂಭ್ರಮದ ಕ್ಷಣವನ್ನು ಮಿಸ್​ ಮಾಡಿಕೊಳ್ಳದಿರಲು ನವ್ಯಾ ನಿರ್ಧರಿಸಿದರು. ಇದಕ್ಕಾಗಿ ಬಿಗ್​ಬಿ ಅವರ ಟೇಲರ್​ ಸಹಾಯದಿಂದ ಘಟಿಕೋತ್ಸವದ ಗೌನ್​ ಮತ್ತು ಹ್ಯಾಟ್​ ಅನ್ನು ಸಿದ್ಧಪಡಿಸಿಕೊಂಡರು.

ಬಳಿಕ ಅದನ್ನು ಧರಿಸಿ, ಮುಂಬೈನಲ್ಲಿರುವ ಬಿಗ್​ಬಿ ಬಂಗ್ಲೆ ಜಲ್ಸಾದ ಉದ್ಯಾನದಲ್ಲಿ ಕುಣಿದು ಕುಪ್ಪಳಿಸಿ, ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡು ಘಟಿಕೋತ್ಸವದ ಸಂಭ್ರಮ ಆಚರಿಸಿದರು. ಆಕೆಯ ಸಂಭ್ರಮವನ್ನು ಬಿಗ್​ಬಿ ಹಾಗೂ ಅವರ ಪುತ್ರ ಅಭಿಷೇಕ್​ ಬಚ್ಚನ್​ ಹೆಮ್ಮೆಯಿಂದ ಕಣ್ತುಂಬಿಕೊಂಡರು. ಬಳಿಕ ಟ್ವಿಟರ್​ನಲ್ಲಿ ಆಕೆಯ ಸಂತಸವನ್ನು ಹಂಚಿಕೊಂಡರು.

ಮೊಮ್ಮಗಳು ನವ್ಯಾ.. ಯುವ ವಿದ್ಯಾರ್ಥಿನಿಯ ಜೀವನದ ಮಹತ್ವದ ಘಟ್ಟ ಘಟಿಕೋತ್ಸವ, ನ್ಯೂಯಾರ್ಕ್​ನ ಕಾಲೇಜಿನಲ್ಲಿ ಆಕೆ ಪದವಿ ವ್ಯಾಸಂಗ ಪೂರ್ಣಗೊಳಿಸಿದ್ದಾಳೆ... ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಘಟಿಕೋತ್ಸವ ಕಾರ್ಯಕ್ರಮ ರದ್ದಾಗಿತ್ತು... ಹಾಗಾಗಿ ಕಾರ್ಯಕ್ರಮವನ್ನು ಆಕೆ ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದಳು... ಈ ಸಂದರ್ಭದಲ್ಲಿ ನಾವೆಲ್ಲರೂ ಅಮೆರಿಕಕ್ಕೆ ತೆರಳಿ ಆಕೆಯ ಸಂಭ್ರಮದಲ್ಲಿ ಭಾಗಿಯಾಗಲು ನಿರ್ಧರಿಸಿದ್ದೆವು... ಆದರೆ... ಆಕೆಯ ಜೀವನದ ಪ್ರಮುಖ ಕ್ಷಣಗಳಲ್ಲಿ ಒಂದಾದ ಘಟಿಕೋತ್ಸವದ ಗೌನ್​ ಮತ್ತು ಹ್ಯಾಟ್​ ಧರಿಸಲು ಬಯಸಿದಳು... ಹಾಗಾಗಿ ನಮ್ಮ ಸಿಬ್ಬಂದಿ ಗೌನ್​ ಮತ್ತು ಹ್ಯಾಟ್​ ಅನ್ನು ಸಿದ್ಧಪಡಿಸಿಕೊಟ್ಟರು... ಅದನ್ನು ಧರಿಸಿದ ಆಕೆ ಜಲ್ಸಾದಲ್ಲಿ ಸಂಭ್ರಮಿಸಿದಳು... ನವ್ಯಾ ನಿನ್ನ ಸಾಧನೆ ಹೆಮ್ಮೆಯುಂಟು ಮಾಡುತ್ತಿದೆ... ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ... ಅಮೋಘವಾದ ಸಕಾರಾತ್ಮಕ ಮತ್ತು ಸಂತೋಷದ ಮನೋಭಾವ... ಎಂದು ಬಿಗ್​ಬಿ ಟ್ವೀಟ್​ ಮಾಡಿದ್ದಾರೆ.