ಸಿನಿವಾಣಿ

ಅಕ್ಷರ ಹುಡುಕಾಟದಲ್ಲಿ ಚಿತ್ರತಂಡ ; ಭುವನ್​, ಅಲ್ಮಾಸ್​ ಮೋತಿವಾಲ ನಟಿಸಿರುವ ಸಿನಿಮಾ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ನರೇಂದ್ರ ಬಾಬು ಕಥೆ ಬರೆದು ನಿರ್ದೇಶಿಸಿರುವ ಹಾರರ್​ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ "ಅಕ್ಷರ'. ಇತ್ತೀಚೆಗಷ್ಟೆ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಯಿತು. ಚಿತ್ರಕ್ಕೆ ಭುವನ್​ ಚಂದ್ರ ನಾಯಕನಾಗಿದ್ದು, ಅಲ್ಮಾಸ್​ ಮೋತಿವಾಲ ಅವರಿಗೆ ನಾಯಕಿಯಾಗಿದ್ದಾರೆ.

ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯೆಯಾಗಿ ಕೆಲಸ ಮಾಡುವ ನಾಯಕಿ ಅಕ್ಷರ, ಹುಟ್ಟೂರು ಶನಿವಾರ ಸಂತೆಯಲ್ಲಿ ವೈದ್ಯಕಿಯ ಶಿಬಿರ ನಡೆಸಲು ಮುಂದಾಗುತ್ತಾಳೆ. ಆದರೆ, ಶಿಬಿರ ನಡೆಸಲು ಹೋದ ಅಕ್ಷರ ನಾಪತ್ತೆಯಾಗುತ್ತಾಳೆ. ಆಕೆಯ ಹುಡುಕಾಟದ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ. ಹಾರರ್​ ಸಸ್ಪೆನ್ಸ್​ ಥ್ರಿಲ್ಲರ್​ ಅಂಶಗಳಿಂದ ಕೂಡಿರುವ ಟೀಸರ್​ ಕೊಂಚ ಮಟ್ಟಿಗೆ ಕುತೂಹಲ ಕೆರಳಿಸಿದೆ.

ಭುವನ್​, ಅಲ್ಮಾಸ್​ ಜತೆ ರಮೇಶ್​ ಪಂಡಿತ್​, ಭಜರಂಗಿ ಪ್ರಸನ್ನ, ರಾಜ್​ ಉದಯ್​, ನಿರ್ಮಾಪಕ ಕಿಶೋರ್​ ಕುಮಾರ್​ .ಜಿ, ರತ್​ ದೊಡ್ಡೇರಾ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಜೀವಾ ಆ್ಯಂಟೋನಿ ಛಾಯಾಗ್ರಹಣ, ಲೋಕೇಶ್​ ಪುಟ್ಟೇಗೌಡ ಸಂಕಲನ, ಆನಂದ್​ ರಾಜ್​ ವಿಕ್ರಮ್​ ಸಂಗೀತ, ಸ್ಯಾಮ್​ ಸೈಮನ್​ ಜಾರ್ಜ್​ ಹಿನ್ನೆಲೆ ಸಂಗೀತ, ಕುಂಗ್​ು ಚಂದ್ರು ಸಾಹಸವಿರಲಿದೆ.