More

    ಅಧಿಪತ್ರ ಹೊರಡಿಸಲು ಮುಹೂರ್ತ; ಚಯನ್ ಚೊಚ್ಚಲ ಸಿನಿಮಾದಲ್ಲಿ ರೂಪೇಶ್, ಜಾಹ್ನವಿ

    ಬೆಂಗಳೂರು: ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿರುವ ಹಾಗೂ ನಿರೂಪಕಿ, ನಟಿ ಜಾಹ್ನವಿ ನಾಯಕಿಯಾಗಿರುವ ಚಿತ್ರ ‘ಅಧಿಪತ್ರ’. ಇತ್ತೀಚೆಗಷ್ಟೆ ಚಿತ್ರದ ಟೈಟಲ್ ಹಾಗೂ ಮೊದಲ ನೋಟವನ್ನು ಅನಾವರಣ ಮಾಡಲಾಯಿತು.

    ಈ ಚಿತ್ರದ ಮೂಲಕ ಚಯನ್ ಶೆಟ್ಟಿ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದು, ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಈ ಹಿಂದೆ ಕಾಣಿಸಿಕೊಂಡಿದ್ದಕ್ಕಿಂತಲೂ ವಿಭಿನ್ನವಾಗಿ ರೂಪೇಶ್ ಕಾಣಿಸಿಕೊಳ್ಳಲಿದ್ದಾರೆ. ವರಮಹಾಲಕ್ಷ್ಮೀ ಹಬ್ಬಕ್ಕೂ ಮುನ್ನ ಮುಹೂರ್ತ ಮಾಡಿದ್ದೇವೆ, ಗಣೇಶ ಹಬ್ಬದ ಬಳಿಕ ಶೂಟಿಂಗ್ ಪ್ರಾರಂಭಿಸಲಿದ್ದೇವೆ’ ಎಂದು ಮಾಹಿತಿ ನೀಡಿದರು. ‘ಸರ್ಕಸ್’ ಎಂಬ ತುಳು ಸಿನಿಮಾದ ಸಕ್ಸಸ್ ಬಳಿಕ ಸ್ಯಾಂಡಲ್‌ವುಡ್ ಸಿನಿಮಾದತ್ತ ಗಮನ ಹರಿಸಿರುವ ರೂಪೇಶ್ ಶೆಟ್ಟಿ, ‘ಅಧಿಪತ್ರ’ ಟೈಟಲ್ ವಿಭಿನ್ನವಾಗಿದೆ. ಇದರಲ್ಲಿರುವ ಪ್ರತಿ ಅಕ್ಷರಕ್ಕೂ ಒಂದೊಂದು ಅರ್ಥವಿದೆ. ಕರಾವಳಿ ಭಾಗದ ಒಂದು ಸಾಂಸ್ಕೃತಿಕ ಹಿನ್ನೆಲೆಯನ್ನು ತೋರಿಸುವ ಜತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೆಣೆಯಲಾಗಿದೆ. ಈ ಚಿತ್ರದಲ್ಲಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಹೇಳಿಕೊಂಡರು.

    ನಾಯಕಿ ಜಾಹ್ನವಿ, ‘ಟೈಟಲ್ ತುಂಬಾ ಕ್ಯಾಚಿಯಾಗಿದೆ. ನನ್ನ ಪಾತ್ರದ ಹೆಸರು ಬೃಹತಿ. ನನ್ನ ಪಾತ್ರದ ರೀತಿಯೇ ಎಲ್ಲ ಪಾತ್ರಗಳ ಹೆಸರು ಕೂಡ ವಿಭಿನ್ನವಾಗಿದೆ. ಈ ಸಿನಿಮಾ ತುಂಬಾ ಪಾಸಿಟಿವ್ ಆಗಿದೆ’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts