ಸಿನಿವಾಣಿ

ಕರೊನಾ ಬಂದು ಸಾಯಿರಿ ಎಂದು ಹೇಳಿದವನಿಗೆ ಅಮಿತಾಭ್​ ಕೊಟ್ಟ ಉತ್ತರ ಇದು ...

manjunathktgns

ಸೋಮವಾರವಷ್ಟೇ ತಮ್ಮ ಸೊಸೆ ಮತ್ತು ಮೊಮ್ಮಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿರುವ ಬಗ್ಗೆ ಅಮಿತಾಭ್​ ಬಚ್ಚನ್​ ಬಹಳ ಖುಷಿಯಾಗಿದ್ದಾರೆ. ಐಶ್ವರ್ಯಾ ರೈ ಮತ್ತು ಆರಾಧ್ಯಾ ಇಬ್ಬರೂ ಮನೆಗೆ ಹೋಗಿರುವ ಸಂತೋಷದ ವಿಷಯ ಕೇಳಿ ಕಣ್ಣಲ್ಲಿ ನೀರು ಬಂತು ಎಂದು ಹೇಳಿಕೊಂಡಿದ್ದಾರೆ.

ಈ ಮಧ್ಯೆ, ಅವರು ಬಹಳ ಬೇಸರದಲ್ಲಿದ್ದಾರೆ. ಅದಕ್ಕೆ ಕಾರಣ, ಅವರನ್ನು ಯಾರೋ ಬಹಳ ಕೆಟ್ಟದಾಗಿ ಟ್ರೋಲ್​ ಮಾಡಿರುವುದು. ಕರೊನಾ ಪಾಸಿಟಿವ್​ ಆಗಿ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮಿತಾಭ್​ ಬಚ್ಚನ್​ ಅವರಿಗೆ, ಅನಾಮದೇಯ ವ್ಯಕ್ತಿಯೊಬ್ಬ, ಕರೊನಾದಿಂದ ಸಾಯಿರಿ ಎಂದು ಹೇಳಿರುವುದು ಸಿಟ್ಟು ತರಿಸಿದೆ.

ಹಾಗೆ ಬರೆದವರು ಯಾರು ಮತ್ತು ಯಾಕೆ ಎಂಬುದು ಗೊತ್ತಾಗಿಲ್ಲ. ಹಾಗೆ ಬರೆದವರು ಎಲ್ಲೂ ಹೆಸರು ನಮೂದಿಸಿಲ್ಲ. ಆದರೆ, 'ಐ ಹೋಪ್​ ಯೂ ಡೈ ವಿಥ್​ ಕೋವಿಡ್​' ಎಂದು ಸೋಷಿಯಲ್​ ಮೀಡಿಯಾದಲ್ಲಿ ಬರೆದು ಹಾಕಿರುವುದು ಅವರಿಗೆ ಸಿಟ್ಟು ತರಿಸಿದೆ.

ಈ ಕುರಿತು ಅವರು ತಮ್ಮ ಬ್ಲಾಗ್​ನಲ್ಲಿ ಸುದೀರ್ಘವಾದ ಪತ್ರ ಬರೆದಿದ್ದಾರೆ. 'ಯಾರೋ ಅನಾಮಧ್ಯೇಯರೊಬ್ಬರು ನನಗೆ ಪತ್ರ ಬರೆದಿದ್ದಾರೆ. ನೀವು ನಿಮ್ಮ ತಂದೆಯ ಹೆಸರನ್ನೂ ಬರೆದಿಲ್ಲ. ನಿಮಗೆ ನಿಮ್ಮ ತಂದೆ ಯಾರು ಅಂತ ಗೊತ್ತೋ, ಇಲ್ಲವೋ ಗೊತ್ತಿಲ್ಲ. ಇಲ್ಲಿ ಎರಡು ವಿಷಯಗಳಿವೆ. ಒಂದೋ ನಾನು ಕರೊನಾದಿಂದ ಸಾಯಬಹುದು, ಇಲ್ಲ ಬದುಕಬಹುದು. ಸತ್ತರೆ ಸಮಸ್ಯೆ ಬಗೆಹರಿದಂತೆ. ಆದರೆ, ಒಬ್ಬ ಸೆಲೆಬ್ರಿಟಿಯ ಹೆಸರು ಹೇಳಿಕೊಂಡು ಜನಪ್ರಿಯತೆ ಪಡೆಯುವುದಕ್ಕೆ ನಿನಗೆ ಮುಂದೆ ಸಾಧ್ಯವಾಗುವುದಿಲ್ಲ. ಒಂದು ಪಕ್ಷ ನಾನು ಬದುಕಿದರೆ, ಸುಮ್ಮನಿರುವುದಿಲ್ಲ. ನಾನಷ್ಟೇ ಅಲ್ಲ, ನನ್ನ 90 ಪ್ಲಸ್​ ಮಿಲಿಯನ್​ ಹಿಂಬಾಲಕರು ಸುಮ್ಮನೆ ಬಿಡುವುದಿಲ್ಲ' ಎಂದು ಅಮಿತಾಭ್​ ಬಚ್ಚನ್​ ಹೇಳಿಕೊಂಡಿದ್ದಾರೆ.