ಸಿನಿವಾಣಿ

ಕಚ್ಚಾ ಬಾದಾಮ್ ಹಾಡಿಗೆ ಕುಣಿದ ಅಲ್ಲು ಪುತ್ರಿ ಅರ್ಹಾ! ವಿಡಿಯೋ ವೈರಲ್...

ಇತ್ತೀಚೆಗೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಟ್ವಿಟರ್​​ನಲ್ಲಿ 'ಕಚ್ಚಾ ಬಾದಾಮ್' ಹಾಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಟ್ರೆಂಡಿಂಗ್​ನಲ್ಲಿರುವ ಈ ಹಾಡಿಗೆ ಬಹಳಷ್ಟು ಟಿವಿ ಸೆಲೆಬ್ರಿಟಿಗಳು, ಸಿನಿಮಾ ಸೆಲೆಬ್ರಿಟಿಗಳು, ಕ್ರಿಕೆಟಿಗರು ಡ್ಯಾನ್ಸ್ ಮಾಡಿ ರೀಲ್ಸ್ ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ದಿಲ್ ಖುಷ್ ಆಗುತ್ತಿದ್ದಾರೆ. ಇದೀಗ, ಟಾಲಿವುಡ್​ನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಮಗಳು ಅರ್ಹಾ ಕೂಡಾ ಈ ಹಾಡಿಗೆ ಕುಣಿದು ಕುಪ್ಪಳಿಸಿದ್ದು, ಅದನ್ನು ಕಂಡ ನೆಟ್ಟಿಗರು ಅರ್ಹಾಗೆ ಫಿದಾ ಆಗಿದ್ದಾರೆ. 
ಮಗಳು ಅರ್ಹಾ ಡಾನ್ಸ್ ವಿಡಿಯೋವನ್ನು ಅಲ್ಲು ಅರ್ಜುನ್ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ‌. ಹಾಗಾಗಿ, ಅರ್ಹಾಳ ಈ ರೀಲ್ಸ್ ಡಾನ್ಸ್ ವಿಡಿಯೋ ಕೂಡಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಗಳ ವಿಡಿಯೋಗೆ "ನನ್ನ ಪುಟ್ಟ ಬಾದಾಮ್ ಅರ್ಹಾ" ಎಂಬ ಕ್ಯಾಪ್ಷನ್ ಕೊಟ್ಟದ್ದಾರೆ ಅಲ್ಲು. ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಡಿಯೋಗೆ ಬರೋಬ್ಬರಿ 2.4 ಮಿಲಿಯನ್ ಲೈಕ್ಸ್ ಇದ್ದು, 20,000ಕ್ಕೂ ಹೆಚ್ಚು ಕಾಮೆಂಟ್​ಗಳು ಇವೆ.