ಫೋರ್ಬ್ಸ್ ಸಂಸ್ಥೆಯು ಪ್ರತೀ ವರ್ಷ, ಜಗತ್ತಿನ 100 ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಸಮೀಕ್ಷೆ ನಡೆಸುತ್ತಿದೆ. ಕಳೆದ ವರ್ಷದ ಪಟ್ಟಿಯಲ್ಲಿ ಭಾರತದಿಂದ ಅಕ್ಷಯ್ ಕುಮಾರ್ ಸ್ಥಾನ ಪಡೆದಿದ್ದರು.
ಇದೀಗ ಫೋರ್ಬ್ಸ್ ಸಂಸ್ಥೆಯು ಇನ್ನೊಂದು ಪಟ್ಟಿ ಬಿಡುಗಡೆ ಮಾಡಿದೆ. 2020ರಲ್ಲಿ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ 10 ಜನರ ಪಟ್ಟಿ ಮಾಡಿದ್ದು, ಈ ಪಟ್ಟಿಯಲ್ಲೂ ಅಕ್ಷಯ್ ಕುಮಾರ್ ಅವರು ಸ್ಥಾನ ಪಡೆದಿದ್ದಾರೆ ಎನ್ನುವುದು ವಿಶೇಷ. ಮಂಗಳವಾರ, ಈ ಪಟ್ಟಿ ಬಿಡುಗಡೆಯಾಗಿದ್ದು, ಟಾಪ್ 10 ಪೈಕಿ, ಅಕ್ಷಯ್ ಕುಮಾರ್ ಅವರು ಆರನೇ ಸ್ಥಾನದಲ್ಲಿದ್ದಾರೆ.
ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಕುಸ್ತಿಪಟು ಕಂ ನಟ ಡಾನ್ ಜಾನ್ಸನ್ ಇದ್ದು, ಸತತ ಎರಡನೇ ವಷರ್ ಅವರ ಮೊದಲ ಸ್ಥಾನದಲ್ಲಿದ್ದಾರೆ ಎನ್ನುವುದು ವಿಶೇಷ. ದಿ ರಾಕ್ ಎಂಬ ಹೆಸರಿನಲ್ಲೇ ಜನಪ್ರಿಯವಾಗಿರುವ ಅವರು ಜೂನ್ 1 2019ರಿಂದ ಜೂನ್ 1 2020ರವರೆಗೂ 87.5 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಅಕ್ಷಯ್ ಕುಮಾರ್ ಅವರು ಒಂದು ವರ್ಷದ ಅಂತರದಲ್ಲಿ 48.5 ಮಿಲಿಯನ್ ಡಾಲರ್ ಸಂಪಾದಿಸಿದ್ದು, ಆರನೇ ಸ್ಥಾನದಲ್ಲಿದ್ದಾರೆ. ಇಷ್ಟೆಲ್ಲಾ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಬರಬಹುದು. ಹೇಗೆಂದರೆ, ಅಮೇಜಾನ್ ಪ್ರೈಮ್ ವಿಡಿಯೋದ ‘ದಿ ಎಂಡ್’ ಎಂಬ ವೆಬ್ ಸೀರೀಸ್‌ನಲ್ಲಿ ಕಾಣಿಸಿಕೊಳ್ಳುವುದಕ್ಕೆ ಅಕ್ಷಯ್ ಕುಮಾರ್ 75 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಅವರ ಮುಂಬರುವ ಚಿತ್ರಗಳಾದ ‘ಬೆಲ್ ಬಾಟಮ್’ ಮತ್ತು ‘ಬಚ್ಚನ್ ಪಾಂಡೆ’ಯಲ್ಲಿ ಅಭಿನಯಿಸುವುದಕ್ಕೆ ತಲಾ 100 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇನ್ನು ಜಾಹೀರಾತು, ನಿರ್ಮಾಣದಿಂದ ಅವರು, ಒಟ್ಟಾರೆ ಒಂದು ವರ್ಷದಲ್ಲಿ 366 ಕೋಟಿ ಸಂಪಾದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Photos: ಯಶ್-ರಾಧಿಕಾ ಮಗನ ಕೃಷ್ಣಾವತಾರ
ಸದ್ಯ ಅಕ್ಷಯ್ ಕುಮಾರ್ ಅವರು ಸ್ಕಾಟ್ಲ್ಯಾಂಡ್ನಲ್ಲಿ 'ಬೆಲ್ ಬಾಟಮ್' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.