ಸಿನಿವಾಣಿ

ಕರೊನಾ ಸೋಂಕಿತನ ಸುಳಿವು ನೀಡುತ್ತೆ ಅಕ್ಷಯ್​ ಕುಮಾರ್​ ನೀಡಿದ ಈ ಸಾಧನ !!

ಲಾಕ್​ಡೌನ್​ ಶುರುವಾದಾಗಿನಿಂದ ಒಂದಲ್ಲ ಒಂದು ರೀತಿ ಸಹಾಯಕ್ಕೆ ಧಾವಿಸುತ್ತಿರುವ ನಟರಲ್ಲಿ ಅಕ್ಷಯ್​ ಕುಮಾರ್ ಸಹ ಕಾಣಿಸುತ್ತಾರೆ. ಬಾಲಿವುಡ್​ನಲ್ಲಿ ಮೊದಲ ಬಾರಿಗೆ ಪಿಎಂ ಕೇರ್ಸ್​ಗೆ 25 ಕೋಟಿ ರೂ ನೀಡಿ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದರು ಈ ಬಾಲಿವುಡ್​ ಕಿಲಾಡಿ. ಇದೀಗ ಕರೊನಾ ವಾರಿಯರ್ಸ್​ ಬೆನ್ನಿಗೆ ನಿಂತಿದ್ದಾರೆ. ಕರೊನಾ ಸೋಕಿಂತರನ್ನು ಪತ್ತೆ ಮಾಡುವ ಯಂತ್ರವೊಂದನ್ನು ಮುಂಬೈ ಪೊಲೀಸರಿಗೆ ವಿತರಿಸಿದ್ದಾರೆ.

ತಾಂತ್ರಿಕವಾಗಿ ರೋಗದ ಲಕ್ಷಣವನ್ನು ಪತ್ತೆ ಹಚ್ಚುವ ಕೈಗೆ ಧರಿಸುವ ಸಾಧನವನ್ನ ಮುಂಬೈನ 1000ಕ್ಕೂ ಅಧಿಕ ಪೊಲೀಸ್​ ಸಿಬ್ಬಂದಿಗೆ ನೀಡಿದ್ದಾರೆ. ಜರ್ಮನ್​ ಮೂಲದ ಆರೋಗ್ಯಕ್ಕೆ ಸಂಬಂಧಿಸಿದ ಸ್ಟಾರ್ಟ್​ಅಪ್​ ಕಂಪನಿಯೊಂದು ಈ ಯಂತ್ರವನ್ನು ಸಿದ್ಧಪಡಿಸಿದ್ದು, ಅದು ಜಿಒಕ್ಯೂಐಐ ಸಂಸ್ಥೆ ಜತೆಗೆ ಪಾಲುದಾರಿಕೆ ಹೊಂದಿದೆ. ಆ ಜಿಒಕ್ಯೂಐಐ ಸಂಸ್ಥೆಗೆ ಅಕ್ಷಯ್​ ಕುಮಾರ್ ರಾಯಭಾರಿಯಾಗಿದ್ದು, ಅದನ್ನೇ ಬಳಸಿಕೊಂಡು ಕೈಗೆ ಧರಿಸುವ ಸಾಧನವನ್ನು ವಿತರಿಸಿದ್ದಾರೆ.

ಈ ಸಾಧನದ ಕೆಲಸವೇನು? ದೇಹದ ಉಷ್ಣತೆ, ಹೃದಯ ಬಡಿತ, ರಕ್ತದೊತ್ತಡ, ನಡಿಗೆ, ಕ್ಯಾಲೋರಿಸ್​ ಕೌಂಟ್​ ಹೀಗೆ ಹಲವು ಉಪಯುಕ್ತಕಾರಿ ಅಂಶಗಳ ಬಗ್ಗೆ ಮಾಹಿತಿ ನೀಡಲಿದೆ. ಕರೊನಾ ರೋಗಲಕ್ಷಣಗಳನ್ನೂ ಇದು ಪತ್ತೆಮಾಡಲಿದೆ. ಈಗಾಗಲೇ ವಿದೇಶದಲ್ಲಿ ಈ ಸಾಧನ ಲಭ್ಯವಿದ್ದು, ಭಾರತದಲ್ಲಿ ಮುಂದಿನ ದಿನಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಕೇವಲ ಕರೊನಾ ವಾರಿಯರ್ಸ್​ಗಷ್ಟೇ ಅಲ್ಲದೆ, ಸಾರ್ವಜನಿಕವಾಗಿಯೂ ಇದನ್ನು ಧರಿಸಬಹುದಂತೆ. (ಏಜೆನ್ಸೀಸ್​)