‘ರಾಮ್ಸೇತು’ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಅಕ್ಷಯ್ ಕುಮಾರ್ಗೆ ಕರೊನಾ ಸೋಂಕು ಇರುವುದು ಭಾನುವಾರವಷ್ಟೇ ದೃಢಪಟ್ಟಿದೆ. ಈಗ ಅವರಷ್ಟೇ ಅಲ್ಲ, ಚಿತ್ರತಂಡದ 45 ಜನರಿಗೆ ಕರೊನಾ ಸೋಂಕಿರುವುದು ಗೊತ್ತಾಗಿ, ಬಾಲಿವುಡ್ ಶಾಕ್ ಆಗಿದೆ. ‘ರಾಮ್ಸೇತು’ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಸೋಮವಾರ, ಮಧ್ ಐಲ್ಯಾಂಡ್ನಲ್ಲಿ ಶುರುವಾಗಬೇಕಿತ್ತು. 100 ಜನರ ತಂಡ ಈ ಚಿತ್ರೀಕರಣದಲ್ಲಿ ಭಾಗವಹಿಸಬೇಕಿತ್ತು. ಶೂಟಿಂಗ್ಗೂ ಮುನ್ನ ಎಲ್ಲರೂ ಒಮ್ಮೆ ಚೆಕ್ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ತೀರ್ವನವಾಗಿತ್ತು. ಮೊದಲು ಅಕ್ಷಯ್ಗೆ ಕರೊನಾ ಪಾಸಿಟಿವ್ ಇರುವುದು ಗೊತ್ತಾಯಿತು.
ಅವರು ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ, 45 ಜ್ಯೂನಿಯರ್ ಆರ್ಟಿಸ್ಟ್ಗಳಿಗೂ ಕರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಈಗ ಅವರೆಲ್ಲರೂ ಕ್ವಾರಂಟೈನ್ನಲ್ಲಿದ್ದು, ಸದ್ಯ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಮುಂಬೈನಲ್ಲಿ ಕರೊನಾ ಎರಡನೆ ಅಲೆ ಸ್ವಲ್ಪ ತಗ್ಗಿದ ನಂತರ ಮತ್ತೆ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದೆ. -ಏಜೆನ್ಸೀಸ್