ಸಿನಿವಾಣಿ

‘ಘೋಸ್ಟ್’ನಲ್ಲಿ ಮತ್ತೊಮ್ಮೆ ಬದಲಾವಣೆ; ಅಮಲಾ ಪಾಲ್ ಬದಲು ಸೋನಲ್ ಚೌಹಾನ್​

Webdesk - Ravikanth

ನಾಗಾರ್ಜುನ ಅಭಿನಯದ ‘ಘೋಸ್ಟ್’ ಚಿತ್ರದಲ್ಲಿ ಮತ್ತೊಮ್ಮೆ ಬದಲಾವಣೆಯಾಗಿದೆ. ಈ ಚಿತ್ರಕ್ಕೆ ಅಮಲಾ ಪಾಲ್ ನಾಯಕಿಯಾಗಿ ಕೆಲವೇ ದಿನಗಳ ಹಿಂದಷ್ಟೇ ಸೇರಿಕೊಂಡಿದ್ದರು. ಈಗ ಅವರು ಹೊರನಡೆದಿದ್ದು, ಅವರ ಜಾಗಕ್ಕೆ ಸೋನಲ್ ಚೌಹಾನ್ ಬಂದಿದ್ದಾರೆ. ಈ ಸೋನಲ್ ಯಾರು ಗೊತ್ತಾಗಲಿಲ್ವಾ? ಕನ್ನಡದ ‘ಚೆಲುವೆಯೇ ನಿನ್ನೇ ನೋಡಲು’ ನೆನಪಿಸಿಕೊಳ್ಳಿ.

ಈ ಚಿತ್ರದಲ್ಲಿ ಶಿವರಾಜಕುಮಾರ್​ಗೆ ನಾಯಕಿಯಾಗಿದ್ದರು ಸೋನಲ್. ಈಗ ತೆಲುಗಿನಲ್ಲಿ ನಾಗಾರ್ಜುನಗೆ ನಾಯಕಿಯಾಗುತ್ತಿದ್ದಾರೆ. ‘ಘೋಸ್ಟ್’ ಚಿತ್ರದ ನಾಯಕಿ ಬದಲಾಗುತ್ತಿರುವುದು ಇದು ಮೊದಲಲ್ಲ, ಎರಡನೆಯ ಬಾರಿಗೆ ಎಂಬುದು ಗೊತ್ತಿರಲಿ. ಮೊದಲಿಗೆ ಚಿತ್ರದ ನಾಯಕಿಯಾಗಿದ್ದವರು ಕಾಜಲ್ ಅಗರ್​ವಾಲ್.

ಒಂದು ವಾರ ಕಾಲ ಚಿತ್ರೀಕರಣದಲ್ಲೂ ಭಾಗವಹಿಸಿದ್ದರಂತೆ ಕಾಜಲ್. ಅದೇನಾಯಿತೋ ಏನೋ, ಅವರು ಚಿತ್ರತಂಡದಿಂದ ಹೊರಬಂದರು. ಆ ನಂತರ ಚಿತ್ರತಂಡಕ್ಕೆ ಸೇರ್ಪಡೆಯಾದವರು ಅಮಲಾ ಪಾಲ್. ಒಂದಿಷ್ಟು ದಿನ ಚಿತ್ರೀಕರಣದಲ್ಲಿ ಭಾಗವಹಿಸಿ ಅವರು ಸಹ ಚಿತ್ರತಂಡದಿಂದ ಹೊರನಡೆದಿದ್ದು, ಅ ಜಾಗಕ್ಕೆ ಸೋನಲ್ ಬಂದಿದ್ದಾರೆ. -ಏಜೆನ್ಸೀಸ್