ಸಿನಿವಾಣಿ

ನಾನು ಎಲ್ಲಿಗೇ ಹೋದರೂ ಕನ್ನಡತಿ ಎಂದು ಗುರುತಿಸಿಕೊಳ್ಳುತ್ತೇನೆ ಎಂದ ನಟಿ ರಾಗಿಣಿ ದ್ವಿವೇದಿ ! ಅದಕ್ಕೆ ಕಾರಣ ಹೀಗಿದೆ...

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ದಿನವಾದರೂ, ಆ ತಿಂಗಳು ಪೂರ್ತಿ ರಾಜ್ಯಾದ್ಯಂತ ಕನ್ನಡ ಹಬ್ಬವನ್ನು ಆಚರಿಸಲಾಗುತ್ತದೆ. ಅದರಂತೆಯೇ ಗುರುವಾರ (ನ. 30) ನಟಿ ರಾಗಿಣಿ ದ್ವಿವೇದಿ ಅಭಿನಯದ ‘ರಾಜ್ಯೋತ್ಸವ ದಿ ಆಂಥಮ್’ ವಿಡಿಯೋ ಸಾಂಗ್ ಬಿಡುಗಡೆ ಮಾಡಲಾಯಿತು. ಮಧು ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಹಾಡಿಗೆ ಮೇಘನಾ ಭಟ್ ಧ್ವನಿಯಾಗಿದ್ದಾರೆ.

ನಟಿ ರಾಗಿಣಿ ಜತೆ ನಟ ಶ್ರೀಮುರಳಿ

ಪುನೀತ್ ರಾಜಕುಮಾರ್ ಅಭಿನಯದ ‘ವಂಶಿ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ವಿಜಯ್ ಕೌಂಡಿನ್ಯ ಸಹೋದರ ವಿಕ್ರಮ್ ಶ್ರೀನಿವಾಸ್ ಈ ಹಾಡನ್ನು ನಿರ್ಮಿಸಿದ್ದು, ಸಿಂಗಾಪುರ ಮೂಲದ ಕನ್ನಡಿಗ ಕಿಶನ್ ಮೂರ್ತಿ ಸಂಗೀತ ನೀಡಿದ್ದಾರೆ. ಈ ರಾಜ್ಯೋತ್ಸವ ಹಾಡನ್ನು ಬಿಡುಗಡೆ ಮಾಡಿದ ಶ್ರೀಮುರಳಿ, ‘ಕನ್ನಡದ ಕೆಲಸಕ್ಕೆ ನಾನು ಎಂದಿಗೂ ಸಿದ್ದ. ಇಂತಹ ಪ್ರಯತ್ನಗಳು ಮತ್ತಷ್ಟು ಆಗಲಿ’ ಎಂದು ತಂಡಕ್ಕೆ ಶುಭಹಾರೈಸಿದರು.

ಐಪ್ಲೆಕ್ಸ್​ ಮಾಲೀಕರಾದ ಗಿರೀಶ್​ ಮತ್ತು ಅವರ ಪತ್ನಿ

ನಟಿ ರಾಗಿಣಿ, ‘ಕನ್ನಡಿಗರಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. ನನ್ನನ್ನು ಎಲ್ಲರೂ ಗುರುತಿಸುತ್ತಿದ್ದಾರೆ ಎಂದರೆ ಅದು ಕನ್ನಡ ಚಿತ್ರಗಳಿಂದ. ನಾನು ಎಲ್ಲಿಗೇ ಹೋದರೂ ಕನ್ನಡತಿಯಾಗಿಯೇ ಗುರುತಿಸುಕೊಳ್ಳುತ್ತೇನೆ’ ಎಂದು ಹೇಳಿಕೊಂಡರು.