More

    ಸಿಲ್ಕ್ ಸ್ಮಿತಾ ಹುಟ್ಟುಹಬ್ಬದಂದು ಮತ್ತೊಂದು ಬಯೋಪಿಕ್ ಅನೌನ್ಸ್; ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿ ಯಾರು ಗೊತ್ತಾ?

    ಮುಂಬೈ: ಸಿಲ್ಕ್ ಸ್ಮಿತಾ.. ಒಂದು ಕಾಲದಲ್ಲಿ ಸುಂದರ ನಟಿ.. ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿದ ಸುಂದರ ತಾರೆ. ವಿಜಯಲಕ್ಷ್ಮಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ತೆಲುಗು ನಟಿ ಸಿಲ್ಕ್ ಸ್ಮಿತಾ ಎಂದು ಹೆಸರು ಬದಲಿಸಿಕೊಂಡು ಸ್ಟಾರ್ ನಟಿಯಾದರು. ಅನಿರೀಕ್ಷಿತವಾದ ಕೆಲವು ಸನ್ನಿವೇಶಗಳಿಂದ ಹೊರ ಬರಲಾರದೆ ಆತ್ಮಹತ್ಯೆ ಮಾಡಿಕೊಂಡಳು. ಇದೀಗ ಈ ನಟಿಯ ಜೀವನಾಧಾರಿತ ಕಥೆ ಸಿನಿಮಾವಾಗಿ ನಿರ್ಮಾಣವಾಗುತ್ತಿದೆ.

    ಸಿಲ್ಕ್ ಸ್ಮಿತಾ ದೂರವಾಗಿದ್ದರೂ ಅವರ ಸಿನಿಮಾಗಳು ಇಂದಿಗೂ ನಮ್ಮನ್ನು ರಂಜಿಸುತ್ತಿವೆ. ಈ ಹಿಂದೆ ವಿದ್ಯಾ ಬಾಲನ್ ಅಭಿನಯದ ‘ದಿ ಡರ್ಟಿ ಪಿಕ್ಚರ್’ ಸಿನಿಮಾ ಈಗಾಗಲೇ ಸಿಲ್ಕ್ ಸ್ಮಿತಾ ಅವರ ಜೀವನಾಧಾರಿತ ಚಿತ್ರವಾಗಿದ್ದು, ಭಾರೀ ಯಶಸ್ಸು ಕಂಡಿತ್ತು. ಆದರೆ ಆ ಸಿನಿಮಾದಲ್ಲಿ ವಿದ್ಯಾ ಸಿಲ್ಕ್ ಸ್ಮಿತಾಳಂತೆ ಕಾಣಿಸದಿದ್ದರೂ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.  ಡಿಸೆಂಬರ್ 2 ರಂದು ಸಿಲ್ಕ್ ಸ್ಮಿತಾ ಅವರ ಹುಟ್ಟುಹಬ್ಬದ ದಿನವಾಗಿದ್ದು, ಅವರ ಜೀವನ ಕಥೆಯನ್ನು ಆಧರಿಸಿದ ಮತ್ತೊಂದು ಬಯೋಪಿಕ್ ಅನ್ನು ಘೋಷಿಸಲಾಗಿದೆ. ‘ಸಿಲ್ಕ್ ಸ್ಮಿತಾ-ದಿ ಅನ್‌ಟೋಲ್ಡ್ ಸ್ಟೋರಿ’ ಎಂಬ ಶೀರ್ಷಿಕೆಯೊಂದಿಗೆ ಚಿತ್ರ ಬಿಡುಗಡೆಯಾಗಲಿದೆ.

    ಇಂದು ಸಿಲ್ಕ್ ಸ್ಮಿತಾ ಅವರ ಜನ್ಮದಿನ.  ಸಿಲ್ಕ್ ಸ್ಮಿತಾ ಅವರ ಜೀವನ ಕಥೆಯನ್ನಾಧರಿಸಿ ಈಗ ಸಿನಿಮಾವೊಂದು ತಯಾರಾಗುತ್ತಿದೆ. ಆಕೆಯ ಜೀವನದಲ್ಲಿ ನಡೆದ ಕೆಲವು ಅಂಶಗಳನ್ನು ಚಿತ್ರದಲ್ಲಿ ತೋರಿಸಲಿದೆ. ಈ ಸಿನಿಮಾದಲ್ಲಿ ಚಂದ್ರಿಕಾ ರವಿ ಸಿಲ್ಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಸಿಲ್ಕ್ ಸ್ಮಿತಾ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ನಲ್ಲಿ ಚಂದ್ರಿಕಾ ರವಿ ಸಿಲ್ಕ್ ಲುಕ್‌ನಲ್ಲಿ ಸಂಪೂರ್ಣವಾಗಿ ಸೆಟ್ ಆಗಿದ್ದಾರೆ.

    ಈ ಚಿತ್ರವು ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ . ಈ ಚಿತ್ರವನ್ನು ಜಯರಾಮ್ ನಿರ್ದೇಶನ ಮಾಡುತ್ತಿದ್ದು, ಸ್ತ್ರಿ ಸಿನಿಮಾಸ್ ಅಡಿಯಲ್ಲಿ ಎಸ್ ಬಿ ವಿಜಯ್ ನಿರ್ಮಿಸುತ್ತಿದ್ದಾರೆ.  ಈ ಚಿತ್ರ ಯಾವ ರೀತಿಯ ಯಶಸ್ಸು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.

    ಪ್ರಿಯಾಂಕಾ ಚೋಪ್ರಾಗೆ ಇಂಗ್ಲಿಷ್ ಬರುವುದಿಲ್ಲವೇ? ಫ್ಯಾನ್ಸ್​​ ಇಂಗ್ಲಿಷ್ ಪಾಠ ಮಾಡುವಷ್ಟು ತಪ್ಪು ಮಾಡಿದ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts