ಚೆನ್ನೈ: ಅಭಿಮಾನಿ ಕೇಳಿದ ಪ್ರಶ್ನೆಗೆ ಹಸ್ತಮೈಥುನವೇ ಸಾಕು, ಪತಿಯ ಅವಶ್ಯಕತೆ ಇಲ್ಲವೆಂದು ಉತ್ತರ ನೀಡಿ ಎಲ್ಲರ ಹುಬ್ಬೇರಿಸಿದ್ದ ನಟಿ ಓವಿಯಾ ಹೆಲೆನ್ ಇದೀಗ ಮತ್ತೊಂದು ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡು ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ಹೊಸ ವಿವಾದ ಏನಪ್ಪಾ ಅಂದರೆ, ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ಬಾಸ್ನಲ್ಲಿ ತಾವೇ ಭಾಗವಹಿಸಿ, ಇದೀಗ ಬಿಗ್ಬಾಸ್ ಬ್ಯಾನ್ ಮಾಡಿ ಎಂದು ಒತ್ತಾಯಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ. ಶೋ ಇಲ್ಲದಿದ್ದರೆ ಅವರು ಏನೇನು ಅಲ್ಲ ಎಂದು ಕೆಲವರು ಓವಿಯಾ ವಿರುದ್ಧ ಕಿಡಿಕಾರಿದ್ದಾರೆ.
ಅಂದಹಾಗೆ ಓವಿಯಾ ಕಮಲ್ ಹಾಸನ್ ನಿರೂಪಣೆಯ 2017ರ ತಮಿಳು ಬಿಗ್ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದರು. ಓವಿಯಾ ಶೋನ ಪ್ರಮುಖ ಕೇಂದ್ರ ಬಿಂದು ಸಹ ಆಗಿದ್ದರು. ಶೋನಲ್ಲಿ ಬಿಗ್ಬಾಸ್ ವಿನ್ನರ್ ಅರವ್ ಹಾಗೂ ಒವಿಯಾ ನಡುವಿನ ತೆರೆಯ ಮೇಲಿನ ರೊಮ್ಯಾನ್ಸ್ ಹಾಗೂ ವೈಮನಸ್ಸುಗಳು ಶೋಗೆ ಒಂದು ರೀತಿಯ ಕಿಚ್ಚು ಹಚ್ಚಿತ್ತು. ಇದರ ನಡುವೆ ಖಿನ್ನತೆಯಿಂದ ಬಳಲುತ್ತಿದ್ದೇನೆಂದು ಕಾರಣ ಹೇಳಿ ಬಿಗ್ಬಾಸ್ ಮನೆಯಿಂದ ಓವಿಯಾ ಹೊರಬಂದಿದ್ದರು. ಇದರ ಬೆನ್ನಲ್ಲೇ ಆವರು ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ವದಂತಿಯು ಹರಡಿತ್ತು.
ಮಲಯಾಳಂ, ಕನ್ನಡ, ತಮಿಳು ಹಾಗೂ ತೆಲುಗು ಸೇರಿದಂತೆ ಸುಮಾರು 30 ಸಿನಿಮಾಗಳಲ್ಲಿ ನಟಿಸಿರುವ ಓವಿಯಾ, ಬಿಗ್ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ತನ್ನ ಜಿಪುಣತನದ ನಡುವಳಿಕೆಯಿಂದ ಓವಿಯಾ ಮನೆ ಮನೆ ಮಾತಾಗಿದ್ದರು. ಇದೇ ಆಕೆಯ ಮಾನಸಿಕ ಕಿರುಕುಳಕ್ಕೂ ಕಾರಣವಾಗಿತ್ತು ಎನ್ನಲಾಗಿದೆ.
ಶೋನಿಂದ ಹೊರ ಬಂದ ಬೆನ್ನಲ್ಲೇ ಬೇರೆ ಕಾರಣಗಳಿಂದ ಸುದ್ದಿಯಾಗಿರುವ ಓವಿಯಾ, ನಿನ್ನೆ ರಾತ್ರಿ ತಮ್ಮ ಟ್ವಿಟರ್ ಖಾತೆಯಲ್ಲಿ ಬಿಗ್ಬಾಸ್ ಬ್ಯಾನ್ ಮಾಡುವುದರ ಬಗ್ಗೆ ನಿಮಗೆ ಒಪ್ಪಿಗೆ ಇದೆಯೇ? ಅಥವಾ ಇಲ್ಲವೇ? ಎಂದು ಅಭಿಮಾನಿಗಳನ್ನು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಅಭಿಮಾನಿಯೊಬ್ಬ ಹೌದು ಬಿಗ್ಬಾಸ್ ಬ್ಯಾನ್ ಆಗಬೇಕು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಓವಿಯಾ, ಟಿಆರ್ಪಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಸ್ಪರ್ಧಿಗಳನ್ನು ಅವರು ಹಿಂಸಿಸಬಾರದೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಇದೇ ಕಾರಣಕ್ಕೆ ಇದೀಗ ಓವಿಯಾ ಟ್ರೋಲ್ ಆಗಿದ್ದಾರೆ. ಇತರೆ ಭಾಷೆಗಳಲ್ಲಿ ನಡೆಯುವ ಬಿಗ್ಬಾಸ್ ಶೋ ಅನ್ನು ನೀವು ನೋಡಿಲ್ಲ ಅಥವಾ ಕೇಳಿಲ್ಲ ಅನ್ಸುತ್ತೆ. ಶೋನಲ್ಲಿ ಸ್ಪರ್ಧಿಗಳು ದುರ್ಬಲರಾಗಿರುವವರ ಜತೆ ಆಡುತ್ತಾರೆ. ತಮ್ಮ ವಿರುದ್ಧ ಬಲಿಷ್ಠ ಸ್ಪರ್ಧಿ ಹೊರ ಹೋಗಬೇಕೆಂಬುದನ್ನೇ ಬಯಸಿರುತ್ತಾರೆ. ನೀವು ಆಟದ ನಿಯಮವನ್ನು ನೋಡಿಲ್ಲವೇ, ಅದನ್ನು ನೋಡಿಯೇ ತಾನೇ ನೀವು ಸಹಿ ಹಾಕಿರುವುದು. ಶೋನಲ್ಲಿ ಭಾಗವಹಿಸುವ ಮುನ್ನ ನಿಯಮಗಳನ್ನು ನೋಡಿ ಎಂದು ಸ್ಪರ್ಧಿಗಳಿಗೆ ನಾನು ಶಿಫಾರಸು ಮಾಡುತ್ತೇನೆ ಎಂದು ನೆಟ್ಟಿಗರೊಬ್ಬರು ಓವಿಯಾ ಕಾಲೆಳೆದಿದ್ದಾರೆ. (ಏಜೆನ್ಸೀಸ್)