ಸಿನಿವಾಣಿ

ಹಿಂದಿ - ಇಂಗ್ಲೀಷ್​ ವೆಬ್​ಸರಣಿಯಲ್ಲಿ ಕನ್ನಡದ ಚೆಲುವೆ ಜ್ಯೋತಿ ರೈ ; ಯಾವುದು ಆ ಸರಣಿ?

‘ಬಂದೇ ಬರತಾವ ಕಾಲ’, ‘ಕಿನ್ನರಿ’, ‘ಕಸ್ತೂರಿ ನಿವಾಸ’ ‘ಜೋಗುಳ’ ಸೇರಿ ಹಲವು ಕನ್ನಡ, ತಮಿಳು, ತೆಲುಗು ಧಾರಾವಾಹಿ ಹಾಗೂ ‘ದಿಯಾ’, ‘ಮದಿಪು’ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಖ್ಯಾತಿ ನಟಿ ಜ್ಯೋತಿ ರೈಗೆ ಸಲ್ಲುತ್ತದೆ. ಧಾರಾವಾಹಿ, ಸಿನಿಮಾಗಳ ಬಳಿಕ ಅವರು ಇದೀಗ ವೆಬ್‌ಸರಣಿಯತ್ತ ಗಮನ ಹರಿಸಿದ್ದಾರೆ. ಹೆಸರು ‘ಪ್ರೆಟ್ಟಿ ಗರ್ಲ್’.

ಇದೊಂದು ರೊಮ್ಯಾಂಟಿಕ್ ಕ್ರೈಮ್ ಡ್ರಾಮಾ ಸರಣಿಯಾಗಿದ್ದು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಮೂಡಿಬರಲಿದೆ. ರಾಹುಲ್ ದೀಪಕ್ ಈ ವೆಬ್‌ಸರಣಿಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಕೆವಿನ್ ನೆಲ್ಸನ್ ಛಾಯಾಗ್ರಹಣ ಮತ್ತು ಆರ್ಥರ್ ಅಥೆಲ್ ಸಂಗೀತ ನಿರ್ದೇಶನವಿರಲಿದೆ. ಸದ್ಯ ‘ಪ್ರೆಟ್ಟಿ ಗರ್ಲ್’ ಚಿತ್ರೀಕರಣ ಭರದಿಂದ ಸಾಗಿದ್ದು, ಮುಂದಿನ ವರ್ಷ ಈ ಸರಣಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಅದಲ್ಲದೇ ಕನ್ನಡದಲ್ಲಿ ರಂಜಿತ್ ಸಿಂಗ್ ರಜಪೂತ್ ನಿರ್ದೇಶಿಸಿ, ನಿಶ್ಚಿತ್ ಕೊರೊಡಿ, ದೀಪಿಕಾ ಆರಾಧ್ಯ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಸಪ್ಲೈಯರ್ ಶಂಕರ’ ಹಾಗೂ ತೆಲುಗಿನಲ್ಲಿ ಸುಕು ಪೂರ್ವಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಎ ಮಾಸ್ಟರ್‌ಪೀಸ್ : ರೈಸ್ ಆ್ ಸೂಪರ್‌ಹೀರೋ’ ಚಿತ್ರಗಳಲ್ಲೂ ಜ್ಯೋತಿ ರೈ ನಟಿಸುತ್ತಿದ್ದಾರೆ.