ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬೆನ್ನಲ್ಲೆ ನೆಪೋಟಿಸಂ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ನೆಪೋಟಿಸಂ ಪೋಷಿಸುತ್ತಿದ್ದಾರೆಂಬ ಆರೋಪ ಎದುರಿಸುತ್ತಿದ್ದ ಬಾಲಿವುಡ್ನ ಘಟಾನುಘಟಿಗಳಾದ ಕರಣ್ ಜೋಹರ್, ಆಲಿಯಾ ಭಟ್ ಸೇರಿ ಹಲವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಸಿನಿಮಾ ಬ್ಯಾನ್ ಮಾಡುವ ಅಭಿಯಾನ ಒಂದೆಡೆ ನಡೆದರೆ, ಸೋಷಿಯಲ್ ಮೀಡಿಯಾದಲ್ಲೂ ಅವರ ವಿರುದ್ಧ ಟ್ರೋಲ್ ಮಾಡಲಾಗುತ್ತಿತ್ತು. ಇದೀಗ ಇಷ್ಟರ ಮೇಲೂ ಆಲಿಯಾ ಭಟ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ.
ಇಲ್ಲಿಯವರೆಗೂ ಡಿಸ್ನಿ ಹಾಟ್ಸ್ಟಾರ್ನಲ್ಲಿ ಸಿನಿಮಾ ಬಿತ್ತರ ಆಗಲಿದೆ ಎಂಭ ಘೋಷಣೆ ಆಗಿತ್ತಾದರೂ, ಸಿನಿಮಾ ಯಾವತ್ತು ಬಿಡುಗಡೆ ಆಗಲಿದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ಆ ವಿಚಾರವನ್ನು ಚಿತ್ರತಂಡ ಹೊರಹಾಕಿದ್ದು, ಆಗಸ್ಟ್ 28ಕ್ಕೆ ಚಿತ್ರ ರಿಲೀಸ್ ಆಗಲಿದೆ.
ಆಲಿಯಾ ಭಟ್ ಈ ವಿಚಾರವನ್ನು ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಅಚ್ಚರಿ ವಿಚಾರ ಏನೆಂದರೆ, ಟ್ವಿಟರ್ನಲ್ಲಿ ಕಮೆಂಟ್ ಆಯ್ಕೆಯನ್ನೇ ನಿಷೇಧಿಸಿ ಫೋಟೋ ಹಂಚಿಕೊಂಡಿದ್ದಾರೆ. ಈ ಮೊದಲು ನೆಪೋಟಿಸಂ ವಿಚಾರವಾಗಿ ಆಲಿಯಾ ಮತ್ತು ಕರಣ್ ಜೋಹರ್, ಮಹೇಶ್ ಭಟ್ ಸೇರಿ ಹಲವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಸಡಕ್ ಸಿನಿಮಾ ಬ್ಯಾನ್ ಮಾಡುವಂತೆ ನೆಟ್ಟಿಗರು ಅಭಿಯಾನವನ್ನೇ ಆರಂಭಿಸಿದ್ದರು.
ಇದೀಗ ಅದೆಲ್ಲವನ್ನು ಮೀರಿ ಆಲಿಯಾ ಸಿನಿಮಾ ಬಿಡುಗಡೆ ಘೋಷಣೆ ಮಾಡಿಕೊಂಡಿದ್ದಾರೆ. ಮಹೇಶ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಸಂಜಯ್ ದತ್, ಆಲಿಯಾ ಭಟ್, ಆದಿತ್ಯ ರಾಯ್ ಕಪೂರ್ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. (ಏಜೆನ್ಸೀಸ್)