ಸಿನಿವಾಣಿ

ಮತ್ತೆ ಸುದೀಪ್ ವರ್ಕೌಟ್: ಕರೊನಾಗೆ ತುತ್ತಾಗಿ ಜಿಮ್​​ನಿಂದ ದೂರವಾಗಿದ್ದ ಕಿಚ್ಚ ..

Webdesk - Ravikanth

ಬೆಂಗಳೂರು: ಕರೊನಾಗೆ ತುತ್ತಾಗಿ ಜಿಮ್​​ನಿಂದ ದೂರವಾಗಿದ್ದ ಸುದೀಪ್, ಇದೀಗ ಮತ್ತೊಮ್ಮೆ ವರ್ಕೌಟ್ ಶುರು ಮಾಡಿದ್ದಾರೆ. ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವೊಂದನ್ನು ಅವರು ಟ್ವಿಟರ್​ನಲ್ಲಿ ಭಾನುವಾರ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ತಮ್ಮ ಬೈಸೆಪ್ಸ್ ಪ್ರದರ್ಶಿಸಿರುವ ಅವರು, ‘ಕರೊನಾದಿಂದ ಚೇತರಿಸಿಕೊಂಡರೂ, ಕೆಲವು ತಿಂಗಳುಗಳ ಕಾಲ ಅದರ ಪರಿಣಾಮ ಇದ್ದೇ ಇರುತ್ತದೆ ಎಂದಿದ್ದಾರೆ.

ಅಲ್ಲದೆ ವರ್ಕೌಟ್​ ಮಾಡುವುದು ನನ್ನ ಇಷ್ಟದ ಹವ್ಯಾಸವಾಗಿದ್ದು, ಇದೀಗ ಪುನಃ ಪ್ರಾರಂಭಿಸಿದ್ದೇನೆ. ನನ್ನ ಹಳೆಯ ದಿನಚರಿಯನ್ನು ಮತ್ತೆ ಪ್ರಾರಂಭಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಅಗತ್ಯವಿದ್ದ ಸಮಯದಲ್ಲಿ ನನಗೆ ಸಹಾಯ ಮಾಡಿದ ವೈದ್ಯರು, ತರಬೇತುದಾರರು, ಕುಟುಂಬದವರು ಮತ್ತು ಸ್ನೇಹಿತರಿಗೆ ಧನ್ಯವಾದಗಳು’ ಎಂದು ಸುದೀಪ್ ಬರೆದುಕೊಂಡಿದ್ದಾರೆ.