ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ “ಮೈನಾ” ಚಿತ್ರದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ.
ಸಿನಿಮಾ ಮಾತ್ರವಲ್ಲದೆ, ವೈಯಕ್ತಿಕ ವಿಚಾರ ಹಾಗೂ ವಿವಾದಗಳಿಂದಲೂ ಅಮಲಾ ಪೌಲ್ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ನೈಟ್ ಪಾರ್ಟಿ ಒಂದರಲ್ಲಿ ಅಮಲಾ ಪೌಲ್ ಮೈಚಳಿ ಬಿಟ್ಟು ಕುಣಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿದ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
ಜೈಲರ್ ಸಿನಿಮಾದ ಕಾವಾಲಯ್ಯ ಹಾಡಿದ ಗೆಳತಿಯ ಬರ್ತಡೇ ಸಂಭ್ರಮದ ವೇಳೆ ಅಮಲಾ ಫ್ರೆಂಡ್ ಜತೆ ಹುಚ್ಚೆದ್ದು ಕುಣಿದಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಅಮಲಾ ವಿಡಿಯೋ ಹಂಚಿಕೊಂಡಿದ್ದಾರೆ. ನನ್ನ ಆತ್ಮ ಸಂಗಾತಿ, ನನ್ನ ತುಮ್ಮಿನ್‌ಗೆ ಜನ್ಮದಿನದ ಶುಭಾಶಯಗಳು! ನನ್ನ ಪ್ರೀತಿಯ ಬೆಸ್ಟೀ, ಪವಾಡಗಳು ಸಂಭವಿಸುತ್ತವೆ ಎಂಬುದಕ್ಕೆ ನೀನು ನನ್ನ ಜೀವಂತ ಸಾಕ್ಷಿ. ನನ್ನ ಜೀವನದಲ್ಲಿ ನಿನ್ನ ಇರುವಿಕೆ ನನಗೆ ಅಂತ್ಯವಿಲ್ಲದ ಸಂತೋಷ ಭಾವನೆಯನ್ನು ತಂದಿದೆ. ನಿನಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಅಮಲಾ ಬರೆದುಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈವರೆಗೂ 9 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಣೆ ಮಾಡಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.
ಆದರೆ, ಅಮಲಾ ಶೇರ್ ಮಾಡಿಕೊಂಡಿರುವ ವಿಡಿಯೋಗೆ ಮೆಚ್ಚುಗೆಗಿಂತ ತೆಗಳಿಕೆ ಕಾಮೆಂಟ್ಗಳೇ ಹೆಚ್ಚಾಗಿ ಬಂದಿವೆ. ಅಭಿಮಾನಿಗಳು ಅಮಲಾ ಅವರನ್ನು ಟೀಕಿಸಿದ್ದಾರೆ. ಅರೆಬರೆ ಡ್ರೆಸ್ ಧರಿಸಿ ವಿಚಿತ್ರವಾಗಿ ಕುಣಿದಿರುವುದಕ್ಕೆ ಕಾಮೆಂಟ್ ಮೂಲಕ ಹರಿಹಾಯ್ದಿದ್ದಾರೆ. ಈ ವಿಡಿಯೋ ನೋಡಲು ತುಂಬಾ ಅಶ್ಲೀಲವಾಗಿದೆ ಎಂದಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಅವರ ಆಡಿಜೀವಿಥಂ ಸಿನಿಮಾದಲ್ಲಿ ಅಮಲಾ ನಾಯಕಿಯಾಗಿದ್ದು, ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್)