ಸಿನಿವಾಣಿ

ಸೆಲ್ಫಿ ತೆಗೆಯುವಾಗ ಕಿಸ್​​ ಮಾಡಲು ಪ್ರಯತ್ನಿಸಿದ ಅಭಿಮಾನಿ! ಈ ವೇಳೆ ಪೂನಂ ಏನು ಮಾಡಿದ್ರು ನೋಡಿ... Poonam Pandey

Poonam Pandey : ಸಾಮಾಜಿಕ ಜಾಲತಾಣದಲ್ಲಿ ಪಡ್ಡೆ ಹುಡುಗರ ಎದೆ ಝಲ್​ ಎನಿಸುವಂತಹ ಫೋಟೋ-ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಾ ಸದಾ ಸುದ್ದಿಯಲ್ಲಿರುವ ವಿವಾದಿತ ಮಾಡೆಲ್​ ಹಾಗೂ ಜನಪ್ರಿಯ ಬಾಲಿವುಡ್​ ನಟಿ ಪೂನಂ ಪಾಂಡೆ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ತನ್ನಿಂದ ಅಲ್ಲದಿದ್ದರೂ ಅಭಿಮಾನಿಯೊಬ್ಬನ ಕಾರಣಕ್ಕೆ ಪೂನಂ ಸುದ್ದಿಯಾಗಿದ್ದಾರೆ.

ಅಭಿಮಾನಿಯೊಬ್ಬ ಪೂನಂ ಪಾಂಡೆ ಜತೆ ಸಾರ್ವಜನಿಕ ಪ್ರದೇಶದಲ್ಲೇ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಅಂದಹಾಗೆ ಪೂನಂ ಪಾಂಡೆ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಏಕೆಂದರೆ, ಈಕೆ ವಯಸ್ಕ ಚಿತ್ರಗಳಲ್ಲಿ ಕಾಣಿಸಿಕೊಂಡ ಜನಪ್ರಿಯ ನಟಿ. ಬಾಲಿವುಡ್​ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅಲ್ಲದೆ, ಜಾಹೀರಾತುಗಳು ಮತ್ತು ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.

ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಪೂನಂ ಪಾಂಡೆ ಬಳಿ ಹೋಗುತ್ತಾನೆ. ಪೂನಂ ಅವರು ಫೋಟೋಗೆ ಪೋಸ್ ನೀಡುತ್ತಿದ್ದಾಗ ಅಭಿಮಾನಿ ಆಕೆಯನ್ನು ಚುಂಬಿಸಲು ಪ್ರಯತ್ನಿಸುತ್ತಾನೆ. ಅದನ್ನು ಗಮನಿಸಿದ ಪೂನಂ, ಆತನನ್ನು ದೂರಕ್ಕೆ ತಳ್ಳಿ, ಅಲ್ಲಿಂದ ಹೊರಟು ಹೋಗುತ್ತಾರೆ.

ಈ ವಿಡಿಯೋವನ್ನು ಇನ್​ಸ್ಟಂಟ್​ಬಾಲಿವುಡ್​ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, ಈವರೆಗೂ 12 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೆ, ಒಂದು ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್​ ಕೂಡ ಮಾಡಿದ್ದಾರೆ.

ಅಂದಹಾಗೆ ಪೂನಂ ಪಾಂಡೆ ಸದಾ ಜನರ ಗಮನ ಸೆಳೆಯಲು ಮತ್ತು ಪ್ರಚಾರದಲ್ಲಿರಲು ಅನೇಕ ಸಾಹಸಗಳನ್ನು ಮಾಡುತ್ತಿರುತ್ತಾರೆ. ಕಳೆದ ವರ್ಷ ಫೆ.1ರಂದು ಪೂನಂ ತಮ್ಮ ಸಾವಿನ ಸುದ್ದಿಯನ್ನು ಹಬ್ಬಿಸಿದ್ದರು. ಪೂನಂ ಪಾಂಡೆ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಸಾವಿನ ಬಗ್ಗೆ ತಿಳಿಸಲಾಗಿತ್ತು. ಗರ್ಭಕಂಠದ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆ ಎಂದು ಎಲ್ಲ ಮಾಧ್ಯಮಗಳು ಸುದ್ದಿ ಮಾಡಿದ್ದವು. ಆಕೆಯ ಮ್ಯಾನೇಜರ್​ ಕೂಡ ಸಾವಿನ ಸುದ್ದಿ ಖಚಿತಪಡಿಸಿದ್ದ. ಆದರೆ, ಮರುದಿನ ಆಕೆ ಜೀವಂತವಾಗಿರುವುದಾಗಿ ಖಚಿತಪಡಿಸಿದರು. ನಾನಿನ್ನೂ ಬದುಕಿದ್ದೇನೆ. ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗ್ರತೆ ಇರಲಿ. ಅದಕ್ಕಾಗಿ ಈ ವಿಡಿಯೋ ಮಾಡಿದೆ ಎಂದು ಹೇಳಿದ್ದರು. ಈ ಘಟನೆ ಬಳಿಕ ಪೂನಂ ಸಾಕಷ್ಟು ಟ್ರೋಲ್​ಗೆ ಗುರಿಯಾಗಿದ್ದರು. (ಏಜೆನ್ಸೀಸ್​)