ಬೆಂಗಳೂರು: ಕ್ರಿಕೆಟ್ ಕುರಿತು ಹಲವು ಚಿತ್ರಗಳು ಇದುವರೆಗೂ ಎಲ್ಲಾ ಭಾಷೆಗಳಲ್ಲೂ ಬಂದಿದೆ. ಕನ್ನಡದಲ್ಲೂ ಬಂದಿದ್ದು, ಆದರೆ ಕ್ರಿಕೆಟ್ ಆಟಗಾರ್ತಿಯ ಸಾಧನೆಯ ಕುರಿತಂತೆ ಕಥೆ ಇಟ್ಟುಕೊಂಡು ಯಾವುದೇ ಚಿತ್ರ ನಿರ್ಮಾಣವಾಗಿರಲಿಲ್ಲ. ಈಗ ಅಂಥದ್ದೊಂದು ಪ್ರಯತ್ನವಾಗಿದ್ದು, ಚಿತ್ರಕ್ಕೆ 'ಸಹರಾ' ಎಂದು ಹೆಸರಿಡಲಾಗಿದೆ.
ಕಳೆದ ಎಂಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜೇಶ್ ಭಗವತ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತು ಈ ಚಿತ್ರವನ್ನು ಹೊರತರುತ್ತಿದ್ದಾರೆ. ಮಾ ಕ್ರಿಯೆಷನ್ಸ್ ಪ್ರಥಮ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ.
ಈಗಾಗಲೇ 'ಸಹರಾ' ಚಿತ್ರಕ್ಕೆ ಮೈಸೂರು, ನಂಜನಗೂಡು, ಬೆಂಗಳೂರು, ಚಿಕ್ಕಮಗಳೂರು, ಮೂಡಿಗೆರೆ, ಸಕಲೇಶಪುರ ಸುತ್ತಮುತ್ತ ಶೇ. 95ರಷ್ಟು ಚಿತ್ರೀಕರಣ ಮುಗಿದಿದ್ದು, ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾತ್ರ ಬಾಕಿ ಇದೆ.
ಈ ಚಿತ್ರದಲ್ಲಿ ನಾಯಕಿಯಾಗಿ ಮೈಸೂರಿನ ಸಾರಿಕಾ ರಾವ್ ಅಭಿನಯಿಸಿದ್ದಾರೆ. ರಣಜಿ ಆಟಗಾರರಾದ. ಕೆ.ಬಿ. ಪವನ್ ಅವರ ಬಳಿ ಕ್ರಿಕೆಟ್ ತರಬೇತಿ ಪಡೆದು ಈ ಚಿತ್ರದಲ್ಲಿ ಸಾರಿಕಾ ಅಭಿನಯಿಸಿದ್ದಾರೆ. ಭಾರತ ತಂಡ ಪ್ರತಿನಿಧಿಸಿದ ಕರ್ನಾಟಕದ ಮಾಜಿ ಆಟಗಾರರಾದ ಡೇವಿಡ್ ಜಾನ್ಸನ್ ಮತ್ತು ರಘುರಾಮ್ ಭಟ್ ಈ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
'ಸಹರಾ' ಚಿತ್ರದಲ್ಲಿ ಮಂಜುನಾಥ ಹೆಗಡೆ, ಕುರಿ ಸುನಿಲ್, ಅಂಕುಶ್ ರಜತ್, ರಂಜನ್, ಮಂಜುಳಾ ರೆಡ್ಡಿ, ಪ್ರಕಾಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ವಿನ್ಸೆಂಟ್ ಅಂಥೋಣಿ ರೂಥ್ ಅವರ ಛಾಯಾಗ್ರಹಣ, ಸೂರಜ್ ಜೋಯಿಸ್ ಅವರ ಸಂಗೀತ ಸಂಯೋಜನೆ,