ಸಿನಿವಾಣಿ

2021ರ ಗೋಲ್ಡನ್ ಗ್ಲೋಬ್ ಸಿನಿಮೋತ್ಸವದಲ್ಲಿ ಸೌತ್ ಸಿನಿಮಾಗಳ ಹವಾ

ಮುಂಬೈ: 2021ರ ಗೋಲ್ಡನ್ ಗ್ಲೋಬ್ ಅವಾರ್ಡ್ ಕಾರ್ಯಕ್ರಮ ಶುರುವಿಗೆ ದಿನಗಣನೆ ಆರಂಭವಾಗಿದೆ. ಲಾಸ್​ ಏಂಜಲಸ್​ನಲ್ಲಿ ಮಾರ್ಚ್​ 1ರಂದು ನಡೆಯಲಿರುವ ಈ ಅತ್ಯುನ್ನತ ಸಿನಿಮೋತ್ಸವದಲ್ಲಿ ವಿದೇಶಿ ಸಿನಿಮಾ ವಿಭಾಗದಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಹವಾ ಸೃಷ್ಟಿಸಿವೆ. ಅಂದರೆ, ಸಾಕಷ್ಟು ಸದ್ದು ಮತ್ತು ಸುದ್ದಿ ಮಾಡಿದ್ದ ಮೂರು ಸಿನಿಮಾಗಳು ಸಿನಿಮೋತ್ಸವದಲ್ಲಿ ಪ್ರದರ್ಶನವಾಗಲಿವೆ.

ಅಂದರೆ, ದಕ್ಷಿಣ ಭಾರತದ ಚಿತ್ರಗಳಾದ ಸೂರರೈ ಪೊಟ್ರು, ಅಸುರನ್ ಮತ್ತು ಮಲಯಾಳಂನ ಜಲ್ಲಿಕಟ್ಟು, ಟ್ರೀಸ್ ಅಂಡರ್​ ದಿ ಸನ್ ಸಿನಿಮಾ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿನಿಮೋತ್ಸವದಲ್ಲಿ ಪ್ರದರ್ಶನವಾಗಲಿವೆ. ಸುಧಾ ಕೊಂಗರಾ ನಿರ್ದೇಶನದ ಸೂರರೈ ಪೊಟ್ರು ಸಿನಿಮಾ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿ ಸಾಕಷ್ಟು ಹೆಸರು ಮಾಡಿತ್ತು. ಅಷ್ಟೇ ಅಲ್ಲ ನಟ ಸೂರ್ಯಗೆ ಈ ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತ್ತು. ಇದೀಗ ಈ ಸಿನಿಮಾ ಗೋಲ್ಡನ್ ಗ್ಲೋಬ್ ಅವಾರ್ಡ್ ಕಾರ್ಯಕ್ರಮದಲ್ಲಿ ವಿದೇಶಿ ಭಾಷಾ ಸಿನಿಮಾ ವಿಭಾಗದಲ್ಲಿ ಪ್ರದರ್ಶನ ಕಾಣಲಿದೆ.

ಇದಷ್ಟೇ ಅಲ್ಲ ಬಾಲಿವುಡ್​ನಲ್ಲಿ ತೆರೆಕಂಡಿದ್ದ ತಾನಾಜಿ, ಅನುರಾಗ್ ಬಸು ನಿರ್ದೇಶನದ ಲುಡೋ, ಇಮ್ರಾನ್ ಹಷ್ಮಿ ನಟಿಸಿದ್ದ ಹರಾಮಿ ಸೇರಿ ಒಟ್ಟು 10 ಸಿನಿಮಾಗಳು ಗೋಲ್ಡನ್ ಗ್ಲೋಬ್ ಅವಾರ್ಡ್ ನಲ್ಲಿಯೂ ಮೋಡಿ ಮಾಡಲಿವೆ. (ಏಜೆನ್ಸೀಸ್​)