ಕಾಸ್ಟಿಂಗ್ ಡೈರೆಕ್ಷರ್ ಮಾತನ್ನು ನಂಬಿ ಹತ್ತು ವರ್ಷ ನಾನು ನಕ್ಕಿರಲಿಲ್ಲ ಎಂದ ನೇಹಾ
- ಬಾಲಿವುಡ್ನ ಕರಾಳ ಮುಖ ಬಿಚ್ಚಿಟ್ಟ ನೇಹಾ ಧೂಪಿಯಾ
- ಆಡಿಷನ್ನಲ್ಲಿ ನಿನ್ನ ನಗು ಚೆನ್ನಾಗಿಲ್ಲ ಎಂದಿದ್ದರು
- ಕಾಸ್ಟಿಂಗ್ ಡೈರೆಕ್ಷರ್ ಮಾತನ್ನು ನಂಬಿ ಹತ್ತು ವರ್ಷ ನಾನು ನಕ್ಕಿರಲಿಲ್ಲ ಎಂದ ನೇಹಾ
ಮುಂಬೈ: ಬಾಲಿವುಡ್ನಲ್ಲಿ ತನ್ನದೆ ವಿಶಿಷ್ಟ ರಿತೀಯ ಅಭಿನಯದ ಮೂಲಕ ಖ್ಯಾತಿ ಗಳಿಸಿದ ನಟಿ ಎಂದರೆ ನೇಹಾ ಧೂಪಿಯಾ. ನಂತರ ರೋಡಿಸ್ ಕಾರ್ಯಕ್ರಮದಲ್ಲಿ ಗ್ಯಾಂಗ್ ಲೀಡರ್ ಆಗಿ ಇಕೆ ಭಾರತದ ಪ್ರತಿ ಯುವಕ, ಯುವತಿಯರ ಮನಸ್ಸನ್ನು ಗೆದ್ದಿದ್ದಾರೆ. ಇತ್ತೀಚೆಗೆ ನೇಹಾ ಧೂಪಿಯಾ ಬಾಲಿವುಡ್ಗೆ ಪ್ರವೇಶ ಮಾಡುವಾಗ ದೊರೆಯುವ ಕೆಲ ಸಲಹೆಗಳು ಹೇಗೆ ತಮ್ಮ ಜೀವನದ ದಿಕ್ಕನ್ನೇ ಬದಲಿಸುತ್ತವೆ ಎಂಬ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ನಾನು ನಗುವುದನ್ನು ನಿಲ್ಲಿಸಿ 10 ವರ್ಷವಾಗಿದೆ!
ಇತ್ತೀಚೆಗೆ ಬಾಲಿವುಡ್ ನಟಿ ಹುಮಾ ಖುರೇಶಿ ಜೊಯೆ ಮನಬಿಚ್ಚಿ ಮಾತನಾಡಿರುವ ನೇಹಾ ಧೂಪಿಯಾ, ತಮ್ಮ ಬಾಲಿವುಡ್ನ ಆರಂಭದ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. ನಾನು ಒಂದು ಸಿನಿಮಾಗೆ ಆಡಿಷನ್ ಕೊಡಲು ಹೋದಾಗ ಕಾಸ್ಟಿಂಗ್ ಡೈರೆಕ್ಟರ್ ನೀನು ನಗಬೇಡ ನಿನ್ನ ನಗು ಅಷ್ಟ ಚೆನ್ನಾಗಿಲ್ಲ. ನೀನು ನಗುವುದನ್ನು ನಿಲ್ಲಿಸುವುದು ಒಳ್ಳೆಯದು ಎಂದು ಹೇಳಿದನಂತೆ.
ಈ ಮಾತು ನನ್ನ ತಲೆಯಲ್ಲಿ ಹೇಗೆ ಕುಳಿತಿಕೊಂಡಿತು ಎಂದರೆ ಮುಂದಿನ ಹತ್ತು ವರ್ಷ ನಾನು ನೀಡಿದ ಯಾವುದೇ ಆಡಿಷನ್ಗಾಗಲಿ ಫೋಟೊಶೂಟ್ಗಾಗಲಿ ನಾನು ನಗುವುದನ್ನೇ ನಿಲ್ಲಿಸಿದೆ. ನನ್ನ ನಗುವಿನಲ್ಲಿ ಏನೋ ತೊಂದರೆಯಿದೆ ಎಂದು ನಾನು ಭಾವಿಸಿದೆ. ಇದು ನನ್ನ ವ್ಯಕ್ತಿತ್ವ ಹಾಗೂ ವೃತ್ತಿ ಬದುಕುನ್ನು ಸಂಪೂರ್ಣವಾಗಿ ಬದಲಿಸಿತು ಎಂದು ನಟಿ ಹೇಳಿಕೊಂಡಿದ್ದಾಳೆ.
ಯಾರು ಈ ನೇಹಾ ಧೂಪಿಯಾ?
ನೇಹಾ ಧೂಪಿಯಾ ಆಗಸ್ಟ್ 27, 1980 ರಂದು ಕೇರಳದ ಕೊಚ್ಚಿಯಲ್ಲಿ ಸಿಖ್ ಕುಟುಂಬವೊಂದರಲ್ಲಿ ಜನಿಸಿದರು. ಇವರ ತಂದೆ ಪ್ರದೀಪ್ ಸಿಂಗ್ ಧೂಪಿಯಾ ಭಾರತೀಯ ನೌಕಾಪಡೆಯಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದವರಾಗಿದ್ದಾರೆ. ನೇಹಾ ತಮ್ಮ ಶಾಲಾ ಶಿಕ್ಷಣವನ್ನು ನವದೆಹಲಿಯ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ದೆಹಲಿ ವಿಶ್ವವಿದ್ಯಾಲಯದ ಜೀಸಸ್ ಆಂಡ್ ಮೇರಿ ಕಾಲೇಜಿನಿಂದ ಇತಿಹಾಸ ವಿಷಯದಲ್ಲಿ ಪದವಿ ಪಡೆದಿದ್ದಾರೆ.
2002 ರಲ್ಲಿ ನಡೆದ ಪ್ರತಿಷ್ಠಿತ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ದೇಶದ ಗಮನ ಸೆಳೆದ ನೇಹಾ, ಅದೇ ವರ್ಷ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲೂ ಭಾರತವನ್ನು ಪ್ರತಿನಿಧಿಸಿ ಟಾಪ್ 10 ಹಂತದವರೆಗೆ ತಲುಪಿದ್ದರು. ನಂತರ 2003 ರಲ್ಲಿ ತೆರೆಕಂಡ ಖಯಾಮತ್: ಸಿಟಿ ಅಂಡರ್ ಥ್ರೆಟ್ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು.
ತಮ್ಮ ಗ್ಲಾಮರಸ್ ಲುಕ್ ಮತ್ತು ನಟನಾ ಕೌಶಲ್ಯದಿಂದ ಗುರುತಿಸಿಕೊಂಡ ನೇಹಾ, ಜುಲಿ ಚಿತ್ರದ ಮೂಲಕ ಭಾರಿ ಪ್ರಸಿದ್ಧಿ ಪಡೆದರು. ಆನಂತರ ಶೀಶಾ, ಕ್ಯಾ ಕೂಲ್ ಹೈ ಹಮ್, ಶೂಟೌಟ್ ಅಟ್ ಲೋಖಂಡ್‌ವಾಲಾ, ದಸ್ ಕಹಾನಿಯಾ, ಸಿಂಗ್ ಈಸ್ ಕಿಂಗ್ ಮತ್ತು ತುಮ್ಹಾರಿ ಸುಲು ಸೇರಿದಂತೆ ಹಲವು ಯಶಸ್ವಿ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾಗಳಷ್ಟೇ ಅಲ್ಲದೆ ಕಿರುತೆರೆಯಲ್ಲೂ ನೇಹಾ ಧೂಪಿಯಾ ದೊಡ್ಡ ಹೆಸರು ಮಾಡಿದ್ದಾರೆ. ಎಂಟಿವಿಯ ಜನಪ್ರಿಯ ರಿಯಾಲಿಟಿ ಶೋ ರೋಡೀಸ್ (MTV Roadies) ನಲ್ಲಿ ದೀರ್ಘಕಾಲ ಗ್ಯಾಂಗ್ ಲೀಡರ್ ಆಗಿ ಕಾರ್ಯನಿರ್ವಹಿಸಿ ಯುವ ಪೀಳಿಗೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿದರು. ಇದರೊಂದಿಗೆ ತಮ್ಮದೇ ಆದ ನೋ ಫಿಲ್ಟರ್ ನೇಹಾ (No Filter Neha) ಎಂಬ ಸೂಪರ್ ಹಿಟ್ ಆಡಿಯೋ ಟಾಕ್ ಶೋ ಅನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ, (ಏಜನ್ಸೀಸ್).