ನಸ್​ ಗ್ಲಾಸ್​ ಧರಿಸಿ ಶಿವನಿಗೆ ಜಲಾಭಿಷೇಕ ಮಾಡಿದ ಭೂಮಿ ಪೆಡ್ನೇಕರ್​ 
ಬಾಲಿವುಡ್

ತೋರಿಕೆಯ ಭಕ್ತಿ ಭಗವಂತನಿಗೆ ತಲುಪಲ್ಲ ತಾಯಿ! ನಸ್​ ಗ್ಲಾಸ್​ ಧರಿಸಿ ಶಿವನಿಗೆ ಜಲಾಭಿಷೇಕ; ಬಾಲಿವುಟ್​ ನಟಿ ಭೂಮಿ ಪೆಡ್ನೇಕರ್​ಗೆ ನೆಟ್ಟಿಗರ ತರಾಟೆ! Bhumi Pednekar Trolled

ವಿನಾಯಕ ನಾಯಕ
ಮುಂಬೈ: ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ (Bhumi Pednekar Trolled) ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಪವಿತ್ರ ಶ್ರಾವಣ ಮಾಸದ ವಿಶೇಷ ಸಂದರ್ಭದಲ್ಲಿ ಶಿವ ದೇವಾಲಯಕ್ಕೆ ಭೇಟಿ ನೀಡಿ ಜಲಾಭಿಷೇಕ ಮಾಡಿದ್ದ ನಟಿಯ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗಿದ್ದವು.
ಆದರೆ, ಅವರು ಪೂಜೆ ಮಾಡುವಾಗ ಕಣ್ಣಿಗೆ ಕಪ್ಪು ಬಣ್ಣದ ಸನ್ ಗ್ಲಾಸ್ ಧರಿಸಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ದೇವಸ್ಥಾನದೊಳಗೆ ಇಂಥದ್ದೊಂದು ಅಸಡ್ಡೆ ತೋರಿದ್ದಕ್ಕೆ ಜನತೆ ಸೋಷಿಯಲ್ ಮೀಡಿಯಾದಲ್ಲಿ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶ್ರಾವಣ ಮಾಸದ ವಿಶೇಷ ಪೂಜೆ ಮತ್ತು ವಿವಾದ

ನಟಿ ಭೂಮಿ ಪೆಡ್ನೇಕರ್, ಗುರುವಾರ (ಜು.30) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶಿವನ ದೇವಾಲಯಕ್ಕೆ ಭೇಟಿ ನೀಡಿದ್ದ ಸುಂದರ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಕಪ್ಪು ಬಣ್ಣದ ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿ ಶಿವಲಿಂಗಕ್ಕೆ ಭಕ್ತಿಭಾವದಿಂದ ನೀರು ಅರ್ಪಿಸುತ್ತಿರುವ ದೃಶ್ಯ ಆ ಪೋಸ್ಟ್‌ನಲ್ಲಿತ್ತು.
ಆದರೆ, ನಟಿಯ ಈ ಪೋಸ್ಟ್ ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರ ಕಣ್ಣು ನೇರವಾಗಿ ಬಿದ್ದಿದ್ದು ಅವರು ಧರಿಸಿದ್ದ ಕಪ್ಪು ಸನ್ ಗ್ಲಾಸ್ ಮೇಲೆ. ದೇವಾಲಯದ ಒಳಗೆ, ಅದು ಕೂಡ ಸಾಕ್ಷಾತ್ ಪರಶಿವನಿಗೆ ಜಲಾಭಿಷೇಕ ಮಾಡುವ ಸಮಯದಲ್ಲಿ ಕಣ್ಣಿಗೆ ಕನ್ನಡಕ ಧರಿಸಿರುವುದು ಹಿಂದೂ ಸಂಪ್ರದಾಯ ಹಾಗೂ ದೇವರಿಗೆ ತೋರಿದ ಅಪಮಾನ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರ ಆಕ್ರೋಶ!

ನಟಿಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕಾಮೆಂಟ್ ಸೆಕ್ಷನ್​ನಲ್ಲಿ ಟೀಕೆಗಳ ಮಹಾಪೂರವೇ ಹರಿದುಬಂದಿದೆ. ಭೂಮಿ ಅವರ ಭಕ್ತಿಯನ್ನು ಕೆಲವರು ಮೆಚ್ಚಿಕೊಂಡರೂ, ಹೆಚ್ಚಿನ ಜನರು ಸನ್ ಗ್ಲಾಸ್ ಧರಿಸಿ ಪೂಜೆ ಮಾಡಿದ್ದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕನಿಷ್ಠ ಪಕ್ಷ ಪೂಜೆ ಮಾಡುವಾಗ ಅವಳು ತನ್ನ ಕನ್ನಡಕವನ್ನು ತೆಗೆಯಬಹುದಿತ್ತು ಅಲ್ವಾ? ಎಂದು ಒಬ್ಬ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರೂ ಕೂಡ ಕನ್ನಡಕ ಧರಿಸಿ ದೇವರ ಪೂಜೆ ಮಾಡುವುದನ್ನು ನೋಡಿಲ್ಲ.
ಇದು ದೇವರ ಮೇಲಿನ ಅಗೌರವ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕನಿಷ್ಠಪಕ್ಷ ಕನ್ನಡಕ ತೆಗೆದು ದೇವರನ್ನು ಕಣ್ಣುತುಂಬಾ ನೋಡಬೇಕು, ಸ್ವಲ್ಪವಾದರೂ ಸಂಪ್ರದಾಯದ ಮೇಲೆ ಗೌರವ ಇರಬೇಕು ಎಂದು ಸಲಹೆ ನೀಡುತ್ತಾ ಹಲವರು ಟೀಕಿಸಿದ್ದಾರೆ, (ಏಜನ್ಸೀಸ್​).