ದೀಪಿಕಾ ಪಡುಕೋಣೆ ನನಗೆ ಮೊದಲು ಪ್ರಪೋಸ್ ಮಾಡಿದ್ದಳು 
ಬಾಲಿವುಡ್

ಅವಳೇ ನನಗೆ ಫಸ್ಟ್ ಪ್ರಪೋಸ್ ಮಾಡಿದ್ದಳು: ಆದರೆ ನಾನೇ ಬ್ರೇಕಪ್​ ಮಾಡಿಕೊಂಡಿದ್ದೆ; ದೀಪಿಕಾ ಹಳೇ ಅಫೇರ್​​ ಬಗ್ಗೆ ಬಾಂಬ್ ಸಿಡಿಸಿದ ಮುಜಮ್ಮಿಲ್ ಇಬ್ರಾಹಿಂ! Muzamil Ibrahim on Deepika Padukone

ಪ್ರಮುಖ ಮುಖ್ಯಾಂಶಗಳು

  • ದೀಪಿಕಾ ಪಡುಕೋಣೆ ನನಗೆ ಮೊದಲು ಪ್ರಪೋಸ್ ಮಾಡಿದ್ದಳು
  • ಆದರೆ ನಾನೇ ಬ್ರೇಕಪ್ ಮಾಡಿಕೊಂಡೆ: ನಟ ಮುಜಮ್ಮಿಲ್ ಇಬ್ರಾಹಿಂ
  • ಮುಜಮ್ಮಿಲ್ ಇಬ್ರಾಹಿಂ ನೀಡಿರುವ ಶಾಕಿಂಗ್ ಹೇಳಿಕೆಯ ಹಳೇ ವಿಡಿಯೋ ಈಗ ವೈರಲ್
ಮುಂಬೈ: ಕರ್ನಾಟಕದಲ್ಲಿ ಜನಿಸಿ, ಬಾಲಿವುಡ್​ನಲ್ಲಿ ತನ್ನದೇ ಆದ ಸ್ಥಾನವನ್ನು ಗಟ್ಟಿ ಮಾಡಿಕೊಂಡ ನಟಿ ಎಂದರೆ ಅದು ದೀಪಿಕಾ ಪಡುಕೋಣೆ. ಸದ್ಯ ದೀಪಿಕಾ ಧುರಂಧರ್​ ನಟ ರಣವೀರ್​ ಸಿಂಗ್​ ಜೊತೆ ಮದುವೆ ಮಾಡಿಕೊಂಡು ಮಗಳ ಜೊತೆ ಜೀವನವನ್ನು ಕಳೆಯುತ್ತಿದ್ದಾರೆ.
ಆದರೆ, ಈಗ ಸೋಷಿಯಲ್​ ಮೀಡಿಯಾನಲ್ಲಿ ದೀಪಿಕಾಳ ಹಳೇ ಲವ್ ಸ್ಟೋರಿಯೊಂದರ ವಿಡಿಯೋ ಭೀಕರವಾಗಿ ವೈರಲ್ ಆಗುತ್ತಿದೆ. ಬಾಲಿವುಡ್ ನಟ ಮುಜಮ್ಮಿಲ್ ಇಬ್ರಾಹಿಂ (Muzamil Ibrahim on Deepika Padukone) ನೀಡಿರುವ ಹೇಳಿಕೆಯೊಂದು ಈಗ ದೀಪಿಕಾಳ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ದೀಪಿಕಾ ನನಗೆ ಫಸ್ಟ್ ಪ್ರಪೋಸ್ ಮಾಡಿದ್ದಳು!

ಇತ್ತೀಚೆಗೆ ಯೂಟ್ಯೂಬ್​ ಚಾನಲ್​ವೊಂದಕ್ಕೆ ಸಂದರ್ಶನ ನೀಡಿದ್ದ ಸ್ಪೆಷಲ್ ಓಪ್ಸ್ ವೆಬ್ ಸೀರೀಸ್ ಖ್ಯಾತಿಯ ನಟ ಮುಜಮ್ಮಿಲ್ ಇಬ್ರಾಹಿಂ, ದೀಪಿಕಾ ಪಡುಕೋಣೆ ಬಾಲಿವುಡ್‌ನ ಟಾಪ್ ನಟಿಯಾಗುವ ಮೊದಲು ತಮ್ಮಿಬ್ಬರ ನಡುವೆ ಲವ್ ಇತ್ತು ಎಂದು ಬಾಂಬ್ ಸಿಡಿಸಿದ್ದಾರೆ.
ನಾವು ಇಬ್ಬರು ಬರೋಬ್ಬರಿ ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೆವು. ಅವಳು ಮುಂಬೈಗೆ ಬಂದಾಗ ಅವಳಿಗೆ ಸಿಕ್ಕ ಮೊದಲ ವ್ಯಕ್ತಿ ನಾನೇ ಆಗಿದ್ದೆ. ನನ್ನ ಲೈಫ್‌ನ ಮೊದಲ ನಿಜವಾದ ರಿಲೇಶನ್‌ಶಿಪ್ ಅಂದರೆ ಅದು ದೀಪಿಕಾ ಜೊತೆಗಿನದ್ದು, ದೀಪಿಕಾನೇ ನನಗೆ ಮೊದಲು ಪ್ರಪೋಸ್ ಮಾಡಿದ್ದಳು, ಎಂದು ಮುಜಮ್ಮಿಲ್ ಹೇಳಿಕೊಂಡಿದ್ದಾರೆ.

ಅವಳನ್ನ ಬಿಟ್ಟು ಬಂದಿದ್ದಕ್ಕೆ ನನಗೆ ಯಾವುದೇ ವಿಷಾದ ಇಲ್ಲ!

ಅಷ್ಟಕ್ಕೇ ನಿಲ್ಲಿಸದ ಮುಜಮ್ಮಿಲ್, ತಾವೇ ದೀಪಿಕಾಗೆ ಬ್ರೇಕ್ ಅಪ್ ಹೇಳಿದ್ದಾಗಿ ಬಿಚ್ಚಿಟ್ಟಿದ್ದಾರೆ. ನಮ್ಮಿಬ್ಬರ ಬ್ರೇಕಪ್‌ಗೆ ನಾನೇ ಕಾರಣ, ನಾನೇ ಅವಳನ್ನು ಬಿಟ್ಟು ಬಂದೆ. ಆದರೆ ಅದಕ್ಕೆ ನನಗೆ ಯಾವುದೇ ವಿಷಾದವಿಲ್ಲ.
ನಾನು ಯಾರನ್ನೇ ಬಿಟ್ಟು ಬಂದರೂ ಲೈಫ್‌ನಲ್ಲಿ ಎಂದಿಗೂ ಪಶ್ಚಾತ್ತಾಪ ಪಡುವುದಿಲ್ಲ. ಏಕೆಂದರೆ ಆ ಸಮಯದಲ್ಲಿ ನಾನು ಸಿನಿಮಾ ಸ್ಟಾರ್ ಆಗಿದ್ದೆ, ಆದರೆ ದೀಪಿಕಾ ಕೇವಲ ಒಬ್ಬ ಮಾಡೆಲ್ ಅಷ್ಟೇ ಆಗಿದ್ದಳು, ಎಂದು ಮುಜಮ್ಮಿಲ್ ಹೇಳಿದ್ದಾರೆ.

ಮದುವೆಯಾದ ಮೇಲೆ ಕಟ್ ಆಯ್ತು ಕನೆಕ್ಷನ್!

ಬ್ರೇಕಪ್ ಆದ ಮೇಲೂ ಅವರಿಬ್ಬರು ಫ್ರೆಂಡ್ಸ್ ಆಗಿದ್ದರಂತೆ. ದೀಪಿಕಾ ಸಾಧನೆ ಮಾಡಿದಾಗಲೆಲ್ಲ ಮುಜಮ್ಮಿಲ್ ಫೋನ್ ಮಾಡಿ ವಿಶ್ ಮಾಡುತ್ತಿದ್ದರಂತೆ. ಆದರೆ, 2018 ರಲ್ಲಿ ದೀಪಿಕಾ ನಟ ರಣವೀರ್ ಸಿಂಗ್ ಅವರನ್ನು ಮದುವೆಯಾದ ಮೇಲೆ ಇವರಿಬ್ಬರ ನಡುವಿನ ಕನೆಕ್ಷನ್ ಕಂಪ್ಲೀಟ್ ಆಗಿ ಕಟ್ ಆಗಿದೆ ಎಂದು ನಟ ಹೇಳಿದ್ದಾರೆ.

ಪಬ್ಲಿಸಿಟಿ ಗಿಮಿಕ್ ಎಂದ ದೀಪಿಕಾ ಫ್ಯಾನ್ಸ್!

ಯಾವಾಗ ಈ ಹಳೇ ವಿಡಿಯೋ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲು ಶುರುವಾಯಿತೋ, ದೀಪಿಕಾ ಫ್ಯಾನ್ಸ್ ಕೆರಳಿ ಕೆಂಡವಾಗಿದ್ದಾರೆ. ದೀಪಿಕಾ ಹೆಸರನ್ನು ಬಳಸಿ ಈ ನಟ ಫೇಮಸ್ ಆಗಲು ಪಬ್ಲಿಸಿಟಿ ಗಿಮಿಕ್ ಮಾಡುತ್ತಿದ್ದಾನೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
ದೀಪಿಕಾ ಅವರನ್ನು ಬಿಟ್ಟಿದ್ದಕ್ಕೆ ಥ್ಯಾಂಕ್ಸ್ ಬ್ರದರ್! ದೇವರಿಗೆ ಗೊತ್ತು ಅವಳಿಗೆ ರಣವೀರ್ ತರಹದ ಬೆಸ್ಟ್ ಪತಿ ಸಿಗಬೇಕಿತ್ತು ಅಂತ, ಅದಕ್ಕೆ ನಿಮ್ಮಿಂದ ದೂರ ಮಾಡಿದ, ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಫ್ಯಾನ್, ದೀಪಿಕಾ ಈಗ ಸೂಪರ್ ಸ್ಟಾರ್, ಹ್ಯಾಪಿ ಮ್ಯಾರೀಡ್ ಲೈಫ್ ಎಂಜಾಯ್ ಮಾಡ್ತಿದ್ದಾರೆ, ಸದ್ಯದಲ್ಲೇ ಎರಡನೇ ಮಗುವಿನ ತಾಯಿಯಾಗಲಿದ್ದಾರೆ. ಈ ಸಮಯದಲ್ಲಿ ಹಳೇ ಕಸ ಕೆದಕಬೇಡಿ, ಎಂದು ಕ್ಲಾಸ್ ತಗೊಂಡಿದ್ದಾರೆ, (ಏಜನ್ಸೀಸ್​).