ಮಾರ್ಚ್​ 19 ರಂದು ತೆರೆಕಂಡ ಧುರಂಧರ್​ 2 ಸಿನಿಮಾ 
ಬಾಲಿವುಡ್

ಬ್ಯಾನ್ ಮಾಡಿದ್ರೂ ಬಿಡದ ಪಾಕಿಗಳು: ಲಾಹೋರ್ ಗಲ್ಲಿ ಗಲ್ಲಿಯಲ್ಲಿ ಧುರಂಧರ್ 2 ಹವಾ; ವಿಡಿಯೋ ವೈರಲ್​! Dhurandhar 2 in Pakistan

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್​ 19 ರಂದು ತೆರೆಕಂಡ ಧುರಂಧರ್​ 2 ಸಿನಿಮಾ
  • ಮೊದಲ ದಿನವೇ ಸುಮಾರು 143 ಕೋಟಿ ಗಳಿಸಿರುವ ಸಿನಿಮಾ
  • ಪಾಕಿಸ್ತಾನ್​ದಲ್ಲಿ ಈ ಸಿನಿಮಾ ಬ್ಯಾನ್​
  • ನಿಷೇಧದ ನಡುವೆ ಸಿನಿಮಾವನ್ನು ಕಾಳಸಂತೆಯಲ್ಲಿ ಖರೀದಿಸಿ ಸಿನಿಮಾ ನೋಡುತ್ತರುವ ಪಾಕ್ ಜನತೆ
ಲಾಹೋರ್​: ಗುರುವಾರ (ಮಾರ್ಚ್​ 19) ಧುರಂಧರ್​ 2: ದಿ ರಿವೆಂಜ್​ ಸಿನಿಮಾ ತೆರೆಕಂಡ ಬೆನ್ನಲ್ಲೇ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಲು ಪ್ರಾರಂಭಿಸಿದೆ. ತೆರೆಕಂಡ ಮೊದಲ ದಿನವೇ ಸುಮಾರು 143 ಕೋಟಿ ಗಳಿಸುವ ಮೂಲಕ ಅತ್ಯಧಿಕ ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆದರೆ ಈ ಸಿನಿಮಾದಲ್ಲಿ ಪಾಕಿಸ್ತಾನ (Dhurandhar 2 in Pakistan) ವನ್ನು ಭಯೋತ್ಪಾದಕ ರಾಷ್ಟ್ರ ಎಂದು ಚಿತ್ರಿಸಿರುವ ಹಿನ್ನಲೆ, ಪಾಕಿಸ್ತಾನದಲ್ಲಿ ಈ ಸಿನಿಮಾದ ಮೊದಲ ಭಾಗ ಹಾಗೂ ಎರಡನೇ ಭಾಗ ಎರಡನ್ನು ನಿಷೇಧಿಸಲಾಗಿದೆ.
ಆದರೂ ಪಾಕಿಸ್ತಾನದ ಜನತೆ ಕಾಳಸಂತೆಯಲ್ಲಿ ಈ ಸಿನಿಮಾವನ್ನು ಖರೀದಿಸಿಕೊಂಡು ನೋಡುತ್ತಿದ್ದಾರೆಂದು ಪಾಕಿಸ್ತಾನದ ಪತ್ರಕರ್ತ ಖಾಲೀದ್​ ಮೊಹಮ್ಮದ್​ ಖಾಲೀದ್​ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಧುರಂಧರ್​ ಬ್ಯಾನ್​!

ಆದಿತ್ಯ ಧರ್​ ನಿರ್ದೇಶನದ ಹಾಗೂ ರಣವೀರ್​ ಸಿಂಗ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಧುರಂಧರ್​ ಸಿನಿಮಾವನ್ನು ಪಾಕಿಸ್ತಾನ ಸರ್ಕಾರ ಪ್ರದರ್ಶನವನ್ನು ನಿಷೇಧಿಸಿದೆ. ಈ ಸಿನಿಮಾದಲ್ಲಿ ಪಾಕಿಸ್ತಾನ ಒಂದು ಭಯೋತ್ಪಾದಕ ದೇಶ, ಇದು ಭಾರತದಲ್ಲಿ ಭಯೋತ್ಪಾದಕತೆಯನ್ನು ಭಿತ್ತಲು ಪ್ರಯತ್ನಿಸುತ್ತಿರುತ್ತದೆ, ಎಂದು ಚಿತ್ರಿಸಿದ ಕಾರಣ ಈ ಸಿನಿಮಾವನ್ನು ಬ್ಯಾನ್​ ಮಾಡಲಾಗಿದೆ.
ಸರ್ಕಾರ ಈ ಸಿನಿಮಾವನ್ನು ಬ್ಯಾನ್​ ಮಾಡಿದ್ದರೂ ಸಹ ಅಲ್ಲಿಯ ಜನರು, ಭಾರತ ನಮ್ಮ ದೇಶವನ್ನು ಯಾವ ರೀತಿಯಲ್ಲಿ ಚಿತ್ರಿಸಿದೆ ಎಂದು ತಿಳಿಯುವ ಕಾತುರತೆಯಿಂದ, ಕಾಳಸಂತೆಯಲ್ಲಿ ಈ ಸಿನಿಮಾವನ್ನು ಖರೀದಿಸಿ ನೋಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಪಾಕ್ ಪತ್ರಕರ್ತ ಖಾಲೀದ್​ ಮೊಹಮ್ಮದ್​ ಖಾಲೀದ್​, ಧುರಂಧರ್​ ಸಿನಿಮಾವನ್ನು ಲಾಹೋರಿನಲ್ಲಿ ನೋಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಿನಿಮಾ ಎಷ್ಟು ಉತ್ತಮವಾಗಿದೆ ಎಂದರೆ, ಶತ್ರು ದೇಶ ಸಹ ಸಿನಿಮಾ ನೋಡುವಂತಾಗಿದೆ ಎಂದು ಒಬ್ಬರು ಬರೆದರೆ, ಕರಾಚಿಯಲ್ಲಿ ನಡೆದ ಘಟನೆಯನ್ನು ಲಾಹೋರಿನ ಜನ ನೋಡುತ್ತಿದ್ದಾರೆ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).