ರಾಜಸ್ಥಾನ್ ರಾಯಲ್ಸ್ ತಂಡದ ವಿಚ್ಛೇದಿತ ಕ್ರಿಕೆಟರ್‌ನಿಂದ ತಡರಾತ್ರಿ ಇನ್‌ಸ್ಟಾಗ್ರಾಮ್ ಮೆಸೇಜ್ ಕಿರುಕುಳ!
- ರಾಜಸ್ಥಾನ್ ರಾಯಲ್ಸ್ ತಂಡದ ವಿಚ್ಛೇದಿತ ಕ್ರಿಕೆಟರ್‌ನಿಂದ ತಡರಾತ್ರಿ ಇನ್‌ಸ್ಟಾಗ್ರಾಮ್ ಮೆಸೇಜ್ ಕಿರುಕುಳ!
- 'ಹಾಟ್, ಬ್ಯೂಟಿಫುಲ್' ಎಂದು ಕಾಟ ಕೊಡುತ್ತಿದ್ದ ಆಟಗಾರ
- ಬ್ಲಾಕ್ ಮಾಡಿದ 'ತಾರಕ್ ಮೆಹ್ತಾ' ನಟಿ ನೆಹಾಲ್ ವಡೋಲಿಯಾ
ಬಾಲಿವುಡ್: ತಾರಕ್ ಮೆಹ್ತಾ ಧಾರವಾಹಿ ಮೂಲಕ ಮನೆ ಮಾತಾಗಿದ್ದ ನಟಿ, ಹಾಗೂ ಬಾಲಿವುಡ್ನಲ್ಲಿ ಹಲವಾರು ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ ನಟಿಸಿರುವ ನೆಹಾಲ್ ವಡೋಲಿಯಾ (Nehal Vadoliya) ಈಗ ಹೊಸ ಬಾಂಬ್ವೊಂದನ್ನು ಸಿಡಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಲ್ಲಿ ಒಂದಾದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನೊಬ್ಬ ತನಗೆ ಪದೇ-ಪದೇ ಮೆಸೆಜ್ ಮಾಡುತ್ತಾನೆಂದು ನಟಿ ನೀಡಿರುವ ಹೇಳಿಕೆ ಎಲ್ಲಡೆ ವೈರಲ್ ಆಗುತ್ತಿದೆ.
ಹಾಟ್,ಕ್ಯೂಟ್, ಬ್ಯೂಟಿಫುಲ್...!
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ನೆಹಾಲ್ ವಡೋಲಿಯಾ, ನನಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ ಆಟಗಾರನೊಬ್ಬ ಮೆಸೆಜ್ ಮಾಡುತ್ತಾನೆ.
ನಾನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಫೋಟೊ ಮತ್ತು ವಿಡಿಯೋಗಳಿಗೆ ಹಾಟ್,ಕ್ಯೂಟ್, ಬ್ಯೂಟಿಫುಲ್ ಎಂದೆಲ್ಲಾ ರಿಫ್ಲೈ ಕೊಡುತ್ತಾನೆಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ ಆತ ತನ್ನ ಪತ್ನಿಯಿಂದ ವಿಚ್ಛೇದನ ಪಡೆದಿರುವುದಾಗಿ ಹೇಳಿರುವ ನಟಿ ಆತನ ಹೆಸರನ್ನು ಭಹಿರಂಗ ಪಡಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿದ್ದಾಳೆ. ಮತ್ತೆ ನಾನು ಅವನ ಕಾಟ ತಾಳಲಾರದೆ ಆತನನ್ನು ಸೋಷಿಯಲ್ ಮೀಡಿಯಾದಿಂದ ಬ್ಲಾಕ್ ಮಾಡಿದ್ದೆನೆಂದು ಹೇಳಿದ್ದಾಳೆ.
ಗೆಸ್ಸಿಂಗ್ ಗೇಮ್ ಆರಂಭಸಿದ ನೆಟ್ಟಿಗರು!
ನಟಿ ನೆಹಾಲ್ ವಡೋಲಿಯಾಳ ಈ ಹೇಳಿಕೆ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯಾರು ಆ ಆಟಗಾರ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಒಬ್ಬ ಬಳಕೆದಾರ ನನ್ನ ಪ್ರಕಾರ ಅದು ವೆಸ್ಟ್ ಇಂಡೀಸ್ ಆಟಗಾರ ಶಿಮ್ರಾನ್ ಹೆಟ್ಮೆಯರ್ ಇರಬೇಕು, ಅವರು ಮದುವೆ ಆಗುವುದು ಡಿವೋರ್ಸ ಕೊಡುವುದು ಮಾಡುತ್ತಿರತ್ತಾರೆಂದು ಹೇಳಿದ್ದಾರೆ.
ಇನ್ನೊಮ್ಮ ಬಳಕೆದಾರರು ನನ್ನ ಅನುಮಾನ ಇರುವುದು ನಮ್ಮ ಯುಜಿ ಚಹಾಲ್ ಮೇಲೆ. ಅವನ ಮೇಲೆ ಈ ರೀತಿ ಆರೋಪಗಳು ಮೊದಲು ಬಂದಿದೆ ಹಾಗೂ ಅವನು ವಿಚ್ಛೇದಿತ ಪತಿ ಎಂದು ತಮ್ಮ ಅನಿಸಿಕೆ ಹೇಳಿದ್ದಾರೆ. ಮತ್ತೊಬ್ಬರು, ನನಗ್ಯಾಕೋ ಇಕೆ ಸುಮ್ಮನೆ ವೈರಲ್ ಆಗಲು ಈ ರೀತಿಯ ಹೇಳಿಕೆ ನೀಡಿದ್ದಾಳೆಂದು ಅನ್ನಿಸುತ್ತದೆ. ಇವಳ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ,(ಏಜನ್ಸೀಸ್).