ಲಿಯಾರಿಯಲ್ಲಿ ಭಾರತದ ಗೂಢಾಚರರ ಪತ್ತೆಗೆ ಸಿದ್ಧವಾದ ಪಾಕ್
- ಭಾರತದ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್ 2
- ಲಿಯಾರಿಯಲ್ಲಿ ಭಾರತದ ಗೂಢಾಚರರ ಪತ್ತೆಗೆ ಸಿದ್ಧವಾದ ಪಾಕ್
- ಬ್ಯಾನ್ ಮಾಡಿದ ಸಿನಿಮಾವನ್ನು ಇವರು ಹೇಗೆ ನೋಡಿದರು ಎಂದ ನೆಟ್ಟಿಗರು
ಲಿಯಾರಿ: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 (Dhurandhar 2) ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವುದು ಒಂದು ಕಡೆಯಾದರೆ, ಅದರ ಬಿಸಿ ಈಗ ನೆರೆರಾಷ್ಟ್ರ ಪಾಕಿಸ್ತಾನವನ್ನು ಸಹ ಸುಡುತ್ತಿದೆ. ಅದರಲ್ಲೂ ಕರಾಚಿಯ ಲಿಯಾರಿ (Lyari) ಪಟ್ಟಣದಲ್ಲಿ ನಡೆದಿದೆ ಎಂದು ಹೇಳಲಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಿನಿಮಾ ಕಥೆಯೇ ನಿಜವಾಯಿತೇ?
ಧುರಂಧರ್ 2 ಸಿನಿಮಾದಲ್ಲಿ ರಣವೀರ್ ಸಿಂಗ್ ಭಾರತದ ಗುಪ್ತಚರನಾಗಿ ಪಾಕಿಸ್ತಾನದ ಲಿಯಾರಿಗೆ ನುಗ್ಗಿ ತನಗೆ ವಹಿಸಿರುವ ಕೆಲಸವನ್ನು ಮಾಡುವುದು ಸಿನಿಮಾದ ಕಥಾಹಂದರವಾಗಿದೆ. ಆದರೆ ಈ ಸಿನಿಮಾವನ್ನು ನೋಡಿದ ಪಾಕಿಸ್ತಾನದ ಪೊಲೀಸರು ಈಗ ಲಿಯಾರಿಯ ಬೀದಿಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ವ್ಯಕ್ತಿಗಳನ್ನು ವಿಚಾರಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಪೋಲಿಸ್ ಹೈ ಅಲರ್ಟ್: ಗಸ್ತಿಗೆ ಇಳಿದ ಪಾಕ್ ಪಡೆ
ಈ ಸಿನಿಮಾ ಪಾಕಿಸ್ತಾನದಲ್ಲಿ ಬ್ಯಾನ್ ಆಗಿದ್ದರೂ ಸಹ ಕದ್ದು ಸಿನಿಮಾ ನೋಡಿದ ಪಾಕಿಗಳು ಈಗ ಲಿಯಾರಿಯಲ್ಲಿ ಭಾರತೀಯ ಗುಪ್ತಚರರ ಶೋಧಕ್ಕೆ ಮುಂದಾಗಿದ್ದಾರೆ.
ಲಿಯಾರಿಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಗಸ್ತು ತಿರುಗುವಿಕೆಯನ್ನು ಹೆಚ್ಚಿಸಲಾಗಿದೆ. ಆದರೆ ಇಲ್ಲಿವರೆಗೆ ಯಾವುದೇ ಭಾರತೀಯ ಗುಪ್ತಚರ ಪಾಕಿಸ್ತಾನದ ಅಧಿಕಾರಿಗಳ ಕೈಯಿಗೆ ಸಿಕ್ಕಿರುವ ಪುರಾವೆ ದೊರೆತಿಲ್ಲ.
ವದಂತಿಗಳಿಗೆ ಕಿವಿಗೊಡಬೇಡಿ ಎಂದ ಅಧಿಕಾರಿಗಳು
ಆದರೆ ಈ ವೈರಲ್ ವಿಡಿಯೋ ಬಗ್ಗೆ ಪಾಕಿಸ್ತಾನದ ಪೊಲೀಸರು ವ್ಯತಿರಿಕ್ತ ಹೇಳಿಕೆ ನೀಡಿದ್ದು, ವಿಡಿಯೋನಲ್ಲಿ ಇರುವವರು ನಿಜವಾದ ಪೊಲೀಸರಲ್ಲ, ಅವರು ವೈರಲ್ ಆಗುವ ಸಲುವಾಗಿ ಈ ರೀತಿ ಮಾಡಿದ್ದಾರೆ.
ಈ ವಿಡಿಯೋವನ್ನು ಯಾರು ನಂಬಬೇಡಿ ಹಾಗೂ ನಮ್ಮ ನಡುವೆ ಯಾವುದೇ ಭಾರತದ ಗೂಢಚರರಿಲ್ಲ ಎಂದು ಪಾಕಿಸ್ತಾನದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಾವು ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರೀಕ್ಷಿಸುತ್ತಿದ್ದು, ಆದಷ್ಟು ಭೇಗ ಅಧಿಕೃತ ಹೇಳಿಕೆ ನೀಡುವುದಾಗಿ ಮಾಹಿತಿ ನೀಡಿದ್ದಾರೆ.
ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದಂದೆ ಕಮೆಂಟ್ಗಳ ಮಹಾಪೂರವೇ ಹರಿದುಬಂದಿದೆ. ಛೇ. ಈ ಧುರಂಧರ್ ಸಿನಿಮಾದಿಂದ ಪಾಕಿಸ್ತಾನದಲ್ಲಿರುವ ಭಾರತೀಯರಿಗೆ ಎಷ್ಟು ಸಮಸ್ಯೆಯಾಗಿದೆ ನೋಡಿ ಎಂದು ಒಬ್ಬರು ಕಮೆಂಟ್ ಮಾಡಿದರೆ ಅಯ್ಯೋ.. ಸಿನಿಮಾವನ್ನೇ ನಿಜವೆಂದು ನಂಬಿದ್ದಾರೆ ಮೂರ್ಖರು ಎಂದು ಇನ್ನೊಬ್ಬರು ಹೇಳಿದ್ದಾರೆ. ಯಾರಿಗೆ ಗೊತ್ತು ವಿಡಿಯೋನಲ್ಲಿರುವ ಪೊಲೀಸನೇ ಭಾರತದ ಗುಪ್ತಚರ ನಾಗಿದ್ದರೆ? ಎಂದು ಮತ್ತೊಬ್ಬರು ವ್ಯಂಗ್ಯ ಮಾಡಿದ್ದಾರೆ,(ಏಜನ್ಸೀಸ್).