Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಸಸ್ಯಗಳು ಮನೆಯ ಸೌಂದರ್ಯ, ಸಕಾರಾತ್ಮಕ ಶಕ್ತಿ ಮತ್ತು ಸಮೃದ್ಧಿಗೆ ಸಂಬಂಧಿಸಿರುತ್ತವೆ. ಈ ಸಸಿಗಳನ್ನು ಮುಖ್ಯ ದ್ವಾರಗಳಲ್ಲಿ ನೆಡುವುದಿರಂದ ಸೌಂದರ್ಯ ಹೆಚ್ಚಿಸುವುದಲ್ಲದೇ, ಮನೆಯಲ್ಲಿ ನಕರಾತ್ಮಕ ಶಕ್ತಿಯನ್ನು ದೂರ ಇಡುವಂತೆ ಮಾಡುತ್ತದೆ. ಇವುಗಳು ಮನೆಗೆ ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ನೀಡುವಲ್ಲಿ ಸಹಕಾರವಾಗಿರುತ್ತವೆ.
ಈಗಾಗಲೇ ಹಲವಾರು ಜನರು ಮನೆಯ ಮುಂದೆ ತುಳಸಿ, ಮನಿ ಪ್ಲಾಂಟ್, ಬಿದಿರು ಮತ್ತು ಮಲ್ಲಿಗೆ ಮುಂತಾದ ಸಸ್ಯಗಳನ್ನು ಶುಭವೆಂದು ನೆಡುತ್ತಾರೆ. ಇವುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಅವು ಶಾಶ್ವತವಾಗಿ ಮನೆಗೆ ಶಾಂತಿ, ನೆಮ್ಮದಿಯನ್ನು ತರುತ್ತವೆ. ಹಾಗಿದ್ದರೆ, ಯಾವ ಗಿಡಗಳನ್ನು ನೆಡುವುದರಿಂದ ಮನೆಗೆ ಒಳ್ಳೆಯ ಫಲ ಇದೆ ಎಂದು ನೋಡೋಣ ಬನ್ನಿ....
ತುಳಸಿಯನ್ನು ಅತ್ಯಂತ ಪವಿತ್ರ ಮತ್ತು ಶಕ್ತಶಾಲಿ ಸಸ್ಯವೆಂದು ಪರಿಗಣಿಸಲಾಗುತ್ತದೆ. ಇದು ಮನೆಯ ಶುದ್ಧತೆ, ಆರೋಗ್ಯ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ತುಳಸಿ ಸಸ್ಯವನ್ನು ಮನೆಯ ಮುಖ್ಯ ದ್ವಾರದ ಬಳಿ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದರಿಂದ ಶುಭವೆಂದು ಗುರುತಿಸಲಾಗುತ್ತದೆ. ಇದು ಮನೆಯಲ್ಲಿರುವ ನಕರಾತ್ಮಕ ಶಕ್ತಿಯನ್ನು ದೂರ ಕಳುಹಿಸಿ ಸಕರಾತ್ಮಕ ಶಕ್ತಿಯನ್ನು ತುಂಬುವಂತೆ ಮಾಡುತ್ತದೆ.
ಬಿದಿರನ್ನು ದೀರ್ಘಾಯುಷ್ಯ, ಯಶಸ್ಸು ಮತ್ತು ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಇದು ಸಕರಾತ್ಮಕ ಶಕ್ತಿಯನ್ನು ತರುತ್ತದೆ. ಹಾಗೆಯೇ ಇದು ಕುಟುಂಬದ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಐದು ಕಾಂಡಗಳನ್ನು ಹೊಂದಿರುವ ಬಿದಿರು ಸಂಪತ್ತನ್ನು ಸಂಕೇತಿಸುತ್ತದೆ. ಹಾಗೆಯೇ ಒಂಬತ್ತು ಕಾಂಡಗಳನ್ನು ಹೊಂದಿರುವ ಬಿದಿರನ್ನು ನೆಡುವುದರಿಂದ ಅದೃಷ್ಟ ಕುಲಾಯಿಸುತ್ತದೆ.
ಮಲ್ಲಿಗೆ ಗಿಡಗಳನ್ನು ಮನೆಯಲ್ಲಿ ನೆಡುವುದರಿಂದ ಮನಸ್ಸಿಗೆ ಶಾಂತಿ ಮತ್ತು ಸಕರಾತ್ಮಕ ಶಕ್ತಿಯನ್ನು ತರುತ್ತದೆ. ಈ ಗಿಡವನ್ನು ಮನೆಯ ಮುಖ್ಯ ದ್ವಾರದ ಬಳಿ ನೆಡುವುದರಿಂದ ಶುಭವೆಂದು ಪರಿಗಣಿಸಬಹುದು. ಇದು ಸುವಾಸನೆ ಬೀರುವುದರ ಜೊತೆಗೆ ವಾತಾವರಣವನ್ನು ಶುದ್ಧೀಕರಿಸಿ ಲಕ್ಷ್ಮೀ ದೇವಿ ಮನೆಯಲ್ಲಿಯೇ ಇರುವಂತೆ ಮಾಡುತ್ತದೆ.
ಇದನ್ನೂ ಓದಿ: ಬಂಧಿತ ವೈದ್ಯನ ಸುಳಿವು: ಬರೋಬ್ಬರಿ 300 ಕೆಜಿ RDX, ಎಕೆ-47 ಸೀಜ್, ತಪ್ಪಿದ ಭಾರಿ ಅನಾಹುತ! Jammu and Kashmir Police
ನೀವು ಮುಖ್ಯ ದ್ವಾರದಲ್ಲಿ ಹಸಿರನ್ನು ಬಯಸಿದರೆ ಅದನ್ನು ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೆ ಇಂತಹ ಗಿಡಗಳು ಸೂಕ್ತವಾಗಿವೆ. ಇವುಗಳು ಗಾಳಿಯನ್ನು ಶುದ್ಧೀಕರಿಸುತ್ತದೆ. ಹಾಗೆಯೇ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಈ ಗಿಡಗಳನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಡುವುದರಿಂದ ಮನೆಗೆ ಧನಾತ್ಮಕ ಪರಿಣಾಮ ಬೀರುತ್ತದೆ.
ಬೇವಿನ ಮರವನ್ನು ಆರೋಗ್ಯ ಮತ್ತು ಪರಿಶುದ್ಧತೆಯ ಸಂಕೇತವೆಂದು ಕರೆಯಲಾಗುತ್ತದೆ. ಇದನ್ನು ಮನೆಯ ಮುಖ್ಯ ದ್ವಾರದ ಬಳಿ ಇಡಲು ಸಾಧ್ಯವಾಗದಿದ್ದರೆ, ಅದನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಿ. ಇದು ಪರಿಸರವನ್ನು ಶುದ್ಧೀಕರಿಸುವುದಲ್ಲದೇ, ನಕರಾತ್ಮಕ ಶಕ್ತಿಯನ್ನು ಮನೆ ಒಳಗೆ ಬರದಂತೆ ನೋಡಿಕೊಳ್ಳುತ್ತದೆ. (ಏಜೆನ್ಸೀಸ್)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.