

ಬಾಂಗ್ಲಾದೇಶ : ಬಾಂಗ್ಲಾದೇಶದ ಮಾಜಿ ನಾಯಕ ಮತ್ತು ಪ್ರಸ್ತುತ ಬಾಂಗ್ಲಾದೇಶ ಕ್ರಿಕೆಟ್ ( Faruque Ahmed) ಮಂಡಳಿಯ (BCB) Bangladesh Cricket Board ನಿರ್ದೇಶಕ ಮತ್ತು ಉಪಾಧ್ಯಕ್ಷ ಫಾರೂಕ್ ಅಹ್ಮದ್ ಅವರು ಭಾನುವಾರ (ನವೆಂಬರ್ 9) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎದೆ ನೋವು ಕಾಣಿಸಿಕೊಂಡ ನಂತರ ಅವರನ್ನು ತಕ್ಷಣ ಬಾಂಗ್ಲಾದೇಶ ರಾಜಧಾನಿ ಢಾಕಾದ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ವೈದ್ಯರು ಅವರಿಗೆ ಅಪಧಮನಿಯಲ್ಲಿ ಸಮಸ್ಯೆ ಇದೆ ಎಂದು ಪತ್ತೆ ಹಚ್ಚಿದರು. 11 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಕೇವಲ ಏಳು ಪಂದ್ಯಗಳನ್ನು ಆಡಿರುವ ಫಾರೂಕ್ ಅಹ್ಮದ್ ಪ್ರಸ್ತುತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.