ಜ್ಯೋತಿಷ್ಯ

Zodiac Signs : ಈ ರಾಶಿಯವರಿಗೆ ಸದ್ಯದಲ್ಲೇ ವೃತ್ತಿಯಲ್ಲಿ ಉನ್ನತ ಸ್ಥಾನ ಪ್ರಾಪ್ತಿ..!

Zodiac Signs: ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.

2025ರ ಅಕ್ಟೋಬರ್​ 27 ರಿಂದ ನ.1ರವರಿಗೆ ಈ ರಾಶಿವರಿಗೆ ಶಾಂತಿ, ಹಣಕಾಸಿನ ದೃಢತೆ, ಮಾನಸಿಕ ಸಮತೋಲನದ ಶುಭ ನಿಮ್ಮಲ್ಲಿ ಇರಲಿದೆ. ಆ ಅದೃಷ್ಟ ರಾಶಿಚಕ್ರ ಚಿಹ್ನೆಗಳು ಯಾವುವು ಎಂಬುದು ತಿಳಿಯೋಣ..

ಮೇಷ: ಈ ವಾರ ಹೊಸ ಅವಕಾಶಗಳಿನ ಬೆಳಕಿನಲ್ಲಿ ಮುಂದುವರೆಯಿರಿ. ಕೆಲಸ ಬದಲಾವಣೆ ಅಥವಾ ಹೊಸ ಆಲೋಚನೆ ಕೈಗೆತ್ತಿಕೊಳ್ಳಲು ಸೂಕ್ತ ಸಮಯ. ಮನೆಯ ಕೆಲಸಗಳಲ್ಲಿ ಸ್ವಚ್ಛತೆ ಮತ್ತು ಯೋಗ ಅಭ್ಯಾಸ ಶುಭ. ಹೊಸ ಪ್ರಾರಂಭ, ಶಾರೀರಿಕ ಆರೋಗ್ಯ ಸುಧಾರಣೆ ಕಾಣುವಿರಿ, ಶಾಂತಿ, ಹಣಕಾಸಿನ ದೃಢತೆ, ಮಾನಸಿಕ ಸಮತೋಲನದ ಶುಭ ನಿಮ್ಮಲ್ಲಿ ಇರಲಿದೆ.

ವೃಷಭ: ಆತ್ಮವಿಶ್ವಾಸದಿಂದ ಮಾಡಿದ ಪ್ರಯತ್ನಗಳು ಫಲ ನೀಡುವ ಸಮಯ. ಕುಟುಂಬ ಸಂಬಂಧಗಳು ಉತ್ತಮಗೊಳ್ಳುತ್ತವೆ. ಒತ್ತಡ ಮತ್ತು ಮನಸ್ಥಿತಿಯನ್ನು ಸಮತೋಲನದಲ್ಲಿಡಿ.

ಮಿಥುನ: ಹಳೆಯ ನಿರಾಶೆಗಳಿಂದ ಹೊರಬಂದು ಹೊಸ ಪ್ರಾರಂಭಕ್ಕೆ ಸಮಯ. ಹಣಕಾಸು ಸ್ಥಿತಿ ಸುಧಾರಣೆ ಕಾಣುತ್ತದೆ. ಕುಟುಂಬದ ಚಿಕ್ಕ ವಿವಾದಗಳಲ್ಲಿ ಸಹನೆ ಅಗತ್ಯ.

ಕರ್ಕ: ಜೀವನದಲ್ಲಿ ಒಂದು ಹಂತ ಮುಗಿದು ಹೊಸ ಹಾದಿ ಶುರುವಾಗಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ಆರೋಗ್ಯದತ್ತ ಗಮನ ಕೊಡಿ. ಸದ್ಯದಲ್ಲೇ ವೃತ್ತಿಯಲ್ಲಿ ಉನ್ನತ ಸ್ಥಾನ ಪ್ರಾಪ್ತಿಯಾಗಲಿದೆ.

ಸಿಂಹ: ಧೈರ್ಯದಿಂದ ಸವಾಲುಗಳನ್ನು ಎದುರಿಸಿ. ಬಂಧುಮಿತ್ರರೊಂದಿಗೆ ಪ್ರಾಮಾಣಿಕ ಸಂಭಾಷಣೆ ಅನಿವಾರ್ಯ. ಹಣಕಾಸು ಸ್ಥಿರವಾಗಿದೆ, ಆದರೆ ಅತಿಯಾದ ಚಿಂತೆ ಬೇಡ.

ಕನ್ಯಾ: ಹಳೆಯ ರೂಟೀನ್‌ದಿಂದ ಬೇಜಾರಾಗಿದ್ದರೆ ಹೊಸದನ್ನು ಪ್ರಯತ್ನಿಸಿ. ಕೆಲಸದಲ್ಲಿ ಹೊಸ ಯೋಜನೆ ಯಶಸ್ಸು ತರಬಹುದು. ಹಣದ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಬೆಳವಣಿಗೆ, ಹೊಸ ಸಂಪರ್ಕಗಳು, ಆತ್ಮವಿಶ್ವಾಸ ಹೆಚ್ಚಲಿದೆ.

ತುಲಾ: ಸಮಯ ಬಂದಾಗ ಮೌನವಾಗಿರುವುದೇ ಉತ್ತಮ. ಕೆಲಸದ ಒತ್ತಡ ಕಡಿಮೆ ಮಾಡಲು ವಿಶ್ರಾಂತಿ ಅಗತ್ಯ. ಪ್ರೇಮ ಸಂಬಂಧಗಳಲ್ಲಿ ಪುನರ್‌ಆಲೋಚನೆ ಅಗತ್ಯ.

ವೃಶ್ಚಿಕ: ಆಕಸ್ಮಿಕ ಬದಲಾವಣೆಗಳಿಗೆ ಸಿದ್ಧರಿರಿ. ಹಳೆಯ ಸಹೋದ್ಯೋಗಿಯಿಂದ ಶುಭ ಸುದ್ದಿಗಳು ಸಾಧ್ಯ. ಸ್ವಾಸ್ಥ್ಯದಲ್ಲಿ ಚಿಕ್ಕ ತೊಂದರೆಗಳ ಸಾಧ್ಯತೆ. ಹಣಕಾಸು ಸುಧಾರಣೆ ಕಾಣುತ್ತದೆ.

ಧನುಸ್ಸು: ಮೀಡಿಯಾ ಅಥವಾ ಪತ್ರಿಕೋದ್ಯಮ ಕ್ಷೇತ್ರದವರಿಗೆ ಉತ್ತಮ ಅವಕಾಶಗಳು. ಹೊಸ ಕಲಿಕೆ ಆರಂಭಕ್ಕೆ ಉತ್ತಮ ಕಾಲ. ಸ್ನೇಹಿತರ ಸಹಕಾರ ಇರುತ್ತದೆ.

ಮಕರ:ಸಮಾಲೋಚನೆಗಳಲ್ಲಿ ಸ್ಪಷ್ಟತೆ ತರಲು ಪ್ರಯತ್ನಿಸಿ. ಕೆಲಸದಲ್ಲಿ ಗಮನ ಕೇಂದ್ರೀಕರಿಸಿ, ಸಾಧನೆ ಖಚಿತ. ಸ್ವಾಸ್ಥ್ಯದತ್ತ ಗಮನ ಇಡಿ.

ಕುಂಭ: ನಾಯಕರಂತೆ ವರ್ತಿಸಿ, ಆದರೆ ಸಹಕರ್ಮಿಗಳ ಅಭಿಪ್ರಾಯಕ್ಕೂ ಗೌರವ ನೀಡಿ. ಹಳೆಯ ಅಭಿಪ್ರಾಯಗಳು ಬದಲಾಗಬಹುದು. ಹಣಕಾಸು ಸಲಹೆಗಾರರ ಸಲಹೆ ಉಪಯುಕ್ತ.

ಮೀನ: ಹೋರಾಟಗಳ ಮೂಲಕ ಯಶಸ್ಸು ಖಚಿತ. ವಿದ್ಯಾರ್ಥಿಗಳಿಗೆ ಶ್ರಮ ಫಲಿಸುತ್ತದೆ. ಪ್ರೀತಿಪಾತ್ರರಿಂದ ಪ್ರೋತ್ಸಾಹ ದೊರೆಯುತ್ತದೆ. ಹಣದ ಯೋಜನೆ ಯಶಸ್ವಿಯಾಗುತ್ತದೆ.(ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.