Astrology: ಜ್ಯೋತಿಷ್ಯದಲ್ಲಿ, ಗುರುವಿನ ಸಂಚಾರವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಇದು ಜ್ಞಾನ, ಬೆಳವಣಿಗೆ, ಲಾಭ ಮತ್ತು ಉತ್ತಮ ಯಶಸ್ಸಿನ ಸಂಕೇತವೆಂದು ತಿಳಿಸಲಾಗಿದೆ. ಗುರುವು ಕೆಲವೊಂದು ರಾಶಿಗಳ ಮೇಲೆ ಆಳ್ವಿಕೆ ನಡೆಸುತ್ತಾರೆ. ಅಂತಹ ಸಂದರ್ಭದಲ್ಲಿ ಆ ರಾಶಿಯವರಿಗೆ ಹೊಸ ಆರಂಭಕ್ಕೆ ಆವಕಾಶಗಳನ್ನು ಕಲ್ಪಿಸಲಾಗುತ್ತದೆ.
ಅಂದಹಾಗೇ ಈ ನವೆಂಬರ್ನಲ್ಲಿ ಯಾವುದೇ ರಾಶಿ ಚಕ್ರದಲ್ಲಿ ಗ್ರಹವು ಹಿಮ್ಮುಖವಾಗಿ ಚಲಿಸುವುದನ್ನು ತುಂಬಾ ಅಶುಭ ಎಂದು ತಿಳಿಯಲಾಗುತ್ತದೆ. ಗುರುವಿನ ಹಿಮ್ಮುಖ ಚಲನೆಯಿಂದಾಗಿ ಈ 3 ರಾಶಿಚಕ್ರದವರು ವೃತ್ತಿ ಮತ್ತು ಆರ್ಥಿಕ ಸವಾಲುಗಳನ್ನು ಅನುಭವಿಸಬೇಕಾಗುತ್ತದೆ. ಹಾಗಿದ್ದರೆ, ಆ 3 ರಾಶಿಗಳು ಯಾವುದು ಎಂದು ನೋಡೋಣ ಬನ್ನಿ...
ಇದನ್ನೂ ಓದಿ: ‘ವಂದೇ ಮಾತರಂ’ ಗೀತೆಗೆ 150 ವರ್ಷ: ಸ್ಟ್ಯಾಂಪ್, ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ | Vande Mataram
ನವೆಂಬರ್ನಲ್ಲಿ ಮೇಷ ರಾಶಿಯಲ್ಲಿ ಗುರುವು ಹಿಮ್ಮುಖವಾಗಿ ಚಲನೆ ನಡೆಸುವುದರಿಂದ ಇದು ಜನರ ಮಾನಸಿಕ ಸ್ಥಿತಿ ಮತ್ತು ಖರ್ಚಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರಯಾಣ ಮತ್ತು ಇತರ ಸಂಬಂಧಿತ ಕೆಲಸಗಳು ಇದ್ದಕ್ಕಿಂದತೆಯೇ ಸ್ಥಗಿತಗೊಳ್ಳಬಹುದು. ಯಾವುದೇ ಕಾನೂನು ಕೆಲಸಗಳನ್ನು ಮಾಡುವಾಗ ಆತುರ ಪಡಬೇಡಿ. ಕೂಲಂಕುಶವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.
ಗುರುವಿನ ಹಿಮ್ಮುಖ ಚಲನೆಯಿಂದಾಗಿ, ಈ ರಾಶಿಯವರು ಕೆಲಸದಲ್ಲಿ ಘರ್ಷಣೆ ಮತ್ತು ಒತ್ತಡವನ್ನು ಅನುಭವಿಸಬೇಕಾಗುತ್ತದೆ. ಮೇಲಾಧಿಕಾರಿಯೊಂದಿಗೆ ಸಂವಹವ ನಡೆಸುವಾಗ ಸ್ಪಷ್ಟವಾಗಿರಿ. ಇಲ್ಲದಿದ್ದರೆ, ಅವರು ತಪ್ಪಾಗಿ ಭಾವಿಸಬಹುದು. ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಗಮನ ಹರಿಸಿ. ಕಾನೂನು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ತಾಳ್ಮೆಯಿಂದಿರಿ.
ಇದನ್ನೂ ಓದಿ: 100ನೇ ವಯಸ್ಸಿನಲ್ಲಿಯೂ ಬಾಡಿ ಬಿಲ್ಡಿಂಗ್ ಮಾಡುತ್ತಾರೆ ಈ ಅಜ್ಜ! ಫಿಟ್ನೆಸ್ ರಹಸ್ಯ ಏನು ಗೊತ್ತಾ? world oldest body builder
ತುಲಾ ರಾಶಿಯವರಿಗೆ ಈ ತಿಂಗಳು ಗುರುವು ಅದೃಷ್ಟದ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ಇದರಿಂದ ಪ್ರಯಾಣ, ಉನ್ನತ ಶಿಕ್ಷಣ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಸ್ವಲ್ಪ ತೊಂದರೆ ಅನುಭವಿಸಬಹುದು. ಕುಟುಂಬದಲ್ಲಿ ನಿಮ್ಮ ಪಾಲಕರೊಂದಿಗೆ ಮಾತನಾಡುವಾಗ ಜಾಗೃತೆಯಿಂದಿರಿ. ಇಲ್ಲದಿದ್ದರೆ, ಭಿನ್ನಾಭಿಪ್ರಾಯವನ್ನು ಉಂಟು ಮಾಡುತ್ತದೆ. ಕೆಲಸ ಕಾರ್ಯದಲ್ಲಿ ಯಾವುದೇ ಆತುರ ನಿರ್ಧಾರ ಒಳ್ಳೆಯದಲ್ಲ. (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.