ಮೇಷ: ಸಾಮಾಜಿಕ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆಯುವಿರಿ. ಆದರೆ ಕೆಟ್ಟ ಮಿತ್ರರು ನಿಮ್ಮ ಹಣ ಖರ್ಚು ಮಾಡಿಸಿಯಾರು. ಶುಭಸಂಖ್ಯೆ: 8
ವೃಷಭ: ಹೊಸ ಯೋಜನೆಗಳ ಸಾಕಾರಕ್ಕೆ ಸಾಲ ಮಾಡಬೇಕಾಗಬಹುದು. ಮಾತಿನಲ್ಲಿ ವಿನಯದ ಗುಣ ಬೆಳೆಸಿಕೊಳ್ಳಿ. ಶುಭಸಂಖ್ಯೆ: 9
ಮಿಥುನ: ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಲಾಭ ಬರುವುದು. ಆದರೆ ಈ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ. ಶುಭಸಂಖ್ಯೆ: 5
ಕಟಕ: ಸಾದಾ ವ್ಯಕ್ತಿಯಾದ ನಿಮಗೆ ಕೆಲವರು ಮೋಸ ಮಾಡುವ ಯೋಜನೆಯಲ್ಲಿರುವರು. ಗುರುಸ್ತೋತ್ರ ಪಠಿಸಿ. ಶುಭಸಂಖ್ಯೆ: 7
ಸಿಂಹ: ದಿಢೀರ್ ಶ್ರೀಮಂತರಾಗಬೇಕು ಎಂಬ ಯೋಚನೆಗಳನ್ನು ಬಿಟ್ಟು ಇತಿಮಿತಿಗಳನ್ನು ಅರಿತು ನಡೆದರೆ ಒಳ್ಳೆಯದು. ಶುಭಸಂಖ್ಯೆ: 7
ಕನ್ಯಾ: ಕೈಯಲ್ಲಿ ಯಥೇಚ್ಛ ಹಣ ಹರಿದಾಡುತ್ತದೆ. ಹಣ ಖರ್ಚು ಮಾಡಿಸುವವರನ್ನು ಬಿಟ್ಟು ಉತ್ತಮರ ಸ್ನೇಹ ಮಾಡಿ. ಶುಭಸಂಖ್ಯೆ: 2
ತುಲಾ: ಎಲ್ಲರೆದುರು ಬೋಳೆತನ ಪ್ರದರ್ಶಿಸಬೇಡಿ. ತೊಂದರೆಗಳಿಗೆ ಸಿಲುಕಿಕೊಳ್ಳುವಿರಿ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 4
ವೃಶ್ಚಿಕ: ಮಾತಿನಲ್ಲಿ ಸಣ್ಣತನ ತೋರಿಸದೆಯೇ ನಿಮ್ಮ ಘನತೆ, ಗೌರವವನ್ನು ರಕ್ಷಿಸಿಕೊಳ್ಳುವುದು ಸದ್ಯಕ್ಕೆ ಉತ್ತಮವಾಗಿದೆ. ಶುಭಸಂಖ್ಯೆ: 6
ಧನಸ್ಸು: ಬದಲಾಗುತ್ತಿರುವ ಕಾಲದಲ್ಲಿ ಜೀವನಕ್ಕೆ ಹಳೆಯ ಆದರ್ಶ ಉಪಯೋಗವಾಗದು. ಕಾಲಕ್ಕೆ ತಕ್ಕ ಹಾಗೆ ಬದಲಾಗಿ. ಶುಭಸಂಖ್ಯೆ: 3
ಮಕರ: ಭಿನ್ನಾಭಿಪ್ರಾಯಗಳಿಂದ ವ್ಯವಹಾರದಲ್ಲಿ ನಷ್ಟ ಉಂಟಾದರೆ ಪಾಲುದಾರಿಕೆ ಬಿಟ್ಟು ಹೊರಬರುವುದೇ ಕ್ಷೇಮಕರ. ಶುಭಸಂಖ್ಯೆ: 1
ಕುಂಭ: ವಿರೋಧಿಗಳೂ ನಿಮ್ಮ ಸ್ನೇಹವನ್ನು ಸಂಪಾದಿಸಲು ಬಯಸಬಹುದು. ಹಣವನ್ನು ನೀರಿನಂತೆ ವ್ಯಯಿಸದಿರಿ. ಶುಭಸಂಖ್ಯೆ: 5
ಮೀನ: ಯೋಜನಾಸ್ವರೂಪದಲ್ಲಿ ಸೂಕ್ತ ಎನಿಸುವ ಕೆಲವು ಕೆಲಸಗಳು ನಿಮಗೆ ಆರ್ಥಿಕ ದೃಢತೆ ತಂದುಕೊಡಲಿವೆ. ಶುಭಸಂಖ್ಯೆ: 9