More

    ಶೀಘ್ರವೇ ಎಫ್​ಎಂ ಮತ್ತು ಸಮುದಾಯ ರೇಡಿಯೋಗಳಲ್ಲಿ ಸುದ್ದಿ ಪ್ರಸಾರ?!

    ನವದೆಹಲಿ: ದೇಶದ ಎಫ್​ಎಂ ಮತ್ತು ಸಮುದಾಯ ರೇಡಿಯೋಗಳಲ್ಲೂ ಸುದ್ದಿ ಪ್ರಸಾರ ಮಾಡುವ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ. ಅದೇ ರೀತಿ, ಸಮುದಾಯ ರೇಡಿಯೋಗಳಲ್ಲಿ ಜಾಹೀರಾತು ಅವಧಿ ಹೆಚ್ಚಿಸುವ ವಿಷಯವೂ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ಹೇಳಿದರು.

    ಅವರು ದೇಶದ ಎಲ್ಲ ಸಮುದಾಯ ಕೇಂದ್ರಗಳ ಮೂಲಕ ಏಕಕಾಲದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತ ಸಮುದಾಯ ರೇಡಿಯೋಗಳ ಕಾರ್ಯಶೈಲಿಗೆ ಹೊಸ ರೂಪ ಕೊಡುವ ಸುಳಿವನ್ನು ನೀಡಿದರು. ಅವರ ಈ ಭಾಷಣ ಶುಕ್ರವಾರ ಸಂಜೆ 7ರಿಂದ 7.30ರ ನಡುವೆ ಎರಡು ಸ್ಲಾಟ್​ಗಳಲ್ಲಿ ಪ್ರಸಾರವಾಗಿದೆ.

    ಸಮುದಾಯ ರೇಡಿಯೊ ಕೇಂದ್ರಗಳನ್ನು ಸ್ಥಾಪಿಸುವಾಗ ಶೇ.75 ರಷ್ಟು ವೆಚ್ಚವನ್ನು ಸಚಿವಾಲಯವೇ ಭರಿಸುತ್ತದೆ. ಇದರಲ್ಲಿ ಪ್ರಮುಖ ವೆಚ್ಚ ಒಳಗೊಂಡಿರುತ್ತದೆ, ದೈನಂದಿನ ಕಾರ್ಯಾಚರಣೆಗಳ ವೆಚ್ಚವನ್ನು ರೇಡಿಯೋ ಕೇಂದ್ರವೇ ಭರಿಸುತ್ತದೆ. ಪ್ರಸ್ತುತ ಸಮುದಾಯ ರೇಡಿಯೋ ಕೇಂದ್ರಗಳ ಜಾಹೀರಾತು ಪ್ರಸಾರ ಸಮಯ ಗಂಟೆಗೆ 7 ನಿಮಿಷಗಳಾಗಿದ್ದರೆ, ಟಿವಿ ಚಾನೆಲ್‌ಗಳಿಗೆ 12 ನಿಮಿಷಗಳಾಗಿವೆ. ಎಲ್ಲ ರೇಡಿಯೊ ಕೇಂದ್ರಗಳಿಗೆ ಸಮಾನ ಜಾಹೀರಾತು ಸಮಯವನ್ನು ನೀಡಲು ಉತ್ಸುಕರಾಗಿದ್ದು, ಇದರಿಂದ ಅವರು ಹಣಕಾಸು ನೆರವಿಗಾಗಿ ಮೊರೆ ಇಡುವ ಅಗತ್ಯವಿರುವುದಿಲ್ಲ ಮತ್ತು ಸಮುದಾಯ ರೇಡಿಯೋ ಕೇಂದ್ರಗಳಲ್ಲಿ ಸ್ಥಳೀಯ ಜಾಹೀರಾತುಗಳನ್ನು ಹೆಚ್ಚು ಪ್ರಸಾರ ಮಾಡಬಹುದು ಎಂದು ಸಚಿವರು ಹೇಳಿದರು.

    ಇದನ್ನೂ ಓದಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಕೊಲೆ ಬೆದರಿಕೆ- ಪ್ರಕರಣ ದಾಖಲಿಸಿದ ಪೊಲೀಸರು

    ಸಮುದಾಯ ರೇಡಿಯೋ ಸ್ವತಃ ಒಂದು ಸಮುದಾಯವಾಗಿದೆ, ಅವುಗಳನ್ನು ‘ಬದಲಾವಣೆಯ ಏಜೆಂಟರು’ ಎಂದು ಬಣ್ಣಿಸಿದರು. ಈ ರೇಡಿಯೋ ಕೇಂದ್ರಗಳು ಪ್ರತಿದಿನ ಲಕ್ಷಾಂತರ ಜನರನ್ನು ತಲುಪುತ್ತಿವೆ, ಶೀಘ್ರದಲ್ಲೇ ಇಂತಹ ರೇಡಿಯೋ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯನ್ನು ಸಚಿವಾಲಯವು ಹೊಂದಿದೆ ಎಂದು ಸಚಿವರು ಭರವಸೆ ನೀಡಿದರು.

    ಸಮುದಾಯ ರೇಡಿಯೋಗಳಲ್ಲಿ ಸುದ್ದಿ ಪ್ರಸಾರ ಮಾಡುವ ಪ್ರಮುಖ ಬೇಡಿಕೆಯ ಬಗ್ಗೆ ಸಚಿವರು ಮಾತನಾಡಿ, ಎಫ್‌ಎಂ ಚಾನೆಲ್‌ಗಳಲ್ಲಿರುವ ಹಾಗೆ ಸಮುದಾಯ ರೇಡಿಯೋದಲ್ಲೂ ಸುದ್ದಿ ಪ್ರಸಾರಕ್ಕೆ ಅನುಮತಿ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಚಲಾವಣೆಯಲ್ಲಿರುವ ಸುದ್ದಿಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳ ಸ್ಥಳೀಯ ಮೂಲಗಳನ್ನು ಪರಿಶೀಲಿಸಿ ಸುಳ್ಳು ಸುದ್ದಿ ಬಿತ್ತರವಾಗದಂತೆ ನೋಡಿಕೊಳ್ಳಬೇಕು. ಇದನ್ನು ಆಕಾಶವಾಣಿಯೊದೊಂದಿಗೆ ಹಂಚಿಕೊಳ್ಳುವುದರಿಂದ ಸತ್ಯದ ವ್ಯಾಪ್ತಿಯನ್ನು ಹೆಚ್ಚಿಸಬಹುದು ಎಂದರು. ಸಚಿವಾಲಯವು ಪಿಐಬಿಯಲ್ಲಿ ಫ್ಯಾಕ್ಟ್ ಚೆಕ್ ಘಟಕವನ್ನು ಸ್ಥಾಪಿಸಿದೆ. ಹಾಗೆಯೇ ಸಮುದಾಯ ರೇಡಿಯೋ ಸಹ ಫ್ಯಾಕ್ಟ್ ಚೆಕ್ ಘಟಕದ ಪಾತ್ರವನ್ನು ವಹಿಸಬಹುದಾಗಿದೆ ಎಂದು ಅವರು ಹೇಳಿದರು.

    ಸಮುದಾಯ ರೇಡಿಯೋವನ್ನು ಬೆಂಬಲಿಸಲು, ಸರ್ಕಾರವು 25 ಕೋಟಿ ರೂ.ಗಳ ಅನುದಾನದೊಂದಿಗೆ “ಭಾರತದಲ್ಲಿ ಸಮುದಾಯ ರೇಡಿಯೋ ಆಂದೋಲನಕ್ಕೆ ಬೆಂಬಲ” ಎಂಬ ಯೋಜನೆಯನ್ನು ಹೊಂದಿದೆ. ಈ ಯೋಜನೆಗೆ ಪ್ರಸಕ್ತ ವರ್ಷದ ಹಂಚಿಕೆ 4.50 ಕೋಟಿ ರೂಪಾಯಿ ಆಗಿದೆ. (ಏಜೆನ್ಸೀಸ್)

    ಆರ್ಥಿಕ ಬೆಳವಣಿಗೆ ರೇಸ್​ನಿಂದ ಹಿಂದೆ ಸರಿದ ಚೀನಾ: 2020ಕ್ಕೆ ಜಿಡಿಪಿ ಗುರಿ ನಿಗದಿ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts