ಅಂಕಣ

ಮನೇಲಿದ್ದ ದುಡ್ಡು-ವಸ್ತು ಹೆಂಡತಿ ತೆಗೆದುಕೊಂಡು ಹೋಗಿದ್ದಾಳೆ, ಏನು ಮಾಡಲಿ?

  •  ನನ್ನ ಹೆಂಡತಿ ನನಗೆ ಹೇಳದೆ ನಮ್ಮ ಮನೆಯಲ್ಲಿ ಇದ್ದ ದುಡ್ಡು, ಮನೆ ವಸ್ತು ತೆಗೆದುಕೊಂಡು ಹೊರಟು ಹೋಗಿದ್ದಾರೆ. ನಾನು ಈಗ ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿ.

ನಿಮಗೆ ಹೆಂಡತಿ ಬೇಕಾಗಿದ್ದರೆ, ನೀವು ನಿಮ್ಮ ತಾಲೂಕಿನ ನ್ಯಾಯಾಲಯದಲ್ಲಿ ಇರುವ ಮಧ್ಯಸ್ಥಿಕೆ ಕೇಂದ್ರದಲ್ಲಿ ಒಂದು ಅರ್ಜಿ ಕೊಡಿ. ನಿಮಗೂ ನಿಮ್ಮ ಪತ್ನಿಗೂ ಕೆಲವು ಮನಸ್ತಾಪಗಳಿವೆ . ಅವನ್ನು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಯ ಮೂಲಕ ಪರಿಹರಿಸಿಕೊಡಿ ಎಂದು ಆರ್ಜಿಯಲ್ಲಿ ಬರೆಯಿರಿ. ನಿಮ್ಮ ಪತ್ನಿಯ ವಿಳಾಸ ಮತ್ತು ಫೋನ್ ನಂಬರು ಕೊಡಿ. ಮಧ್ಯಸ್ಥಿಕೆ ಕೇಂದ್ರದಲ್ಲಿ ನಿಮ್ಮಿಬ್ಬರನ್ನೂ ಕರೆಯಿಸಿ ಮಾತಾಡಿ ಒಂದು ರಾಜೀಸೂತ್ರಕ್ಕೆ ನೀವಿಬ್ಬರೂ ಬರಲು ಸಹಾಯ ಮಾಡುತ್ತಾರೆ.

ಅಲ್ಲಿ ಸಂಧಾನ ಆಗದಿದ್ದರೆ, ಆಗ, ನೀವು ನಿಮ್ಮ ಹೆಂಡತಿ ಬಂದು ಮತ್ತೆ ನಿಮ್ಮ ಜತೆ ಸಂಸಾರ ಮಾಡಬೇಕು ಎಂದು ದಾಂಪತ್ಯ ಜೀವನದ ಪೂರ್ವ ಹಕ್ಕುಗಳ ಪುನರ್ ಸ್ಥಾಪನೆಗೆ (ರೆಸ್ಟಿಟ್ಯೂಷನ್ ಆಫ್ ಕಾಂಜುಗಲ್ ರೈಟ್ಸ್ ಗೆ) ಪ್ರಕರಣ ದಾಖಲಿಸಬೇಕು. ನಿಮಗೆ ಕೇವಲ ದುಡ್ಡು, ಮನೆ ಸಾಮಾನುಗಳ ಚಿಂತೆ ಆದರೆ, ಪೋಲೀಸು ಕಂಪ್ಲೇಂಟ್ ಕೊಟ್ಟು ಪ್ರಯತ್ನ ಮಾಡಿ ನೋಡಿ.

(ಲೇಖಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಹಿರಿಯ ಮಧ್ಯಸ್ಥಿಕೆಗಾರರು)