ಅಷ್ಟೇ ಅಲ್ಲ ಕೆಲವು ರಾಜಕೀಯ ಪಕ್ಷಗಳಿಗೆ ಮತ್ತು ನಾಯಕರಿಗೆ ನೀವು riend, philosopher and guide, ಮಿತ್ರ, ತತ್ವಜ್ಞ ಮತ್ತು ಮಾರ್ಗದರ್ಶಕ ಕೂಡ ಆಗಿಬಿಡುತ್ತೀರಿ. ನೀವು ಈಗಾಗಲೇ ರಾಜಕೀಯ ಕ್ಷೇತ್ರದಲ್ಲಿದ್ದರಂತೂ ’ಪುರೋಹಿತಶಾಹಿ’ ಎಂಬ ಪದವನ್ನು ಬಳಸಿಬಿಡಿ ಕೆಲ ವರ್ಗಗಳ ಉದ್ಧಾರಕ ಭವಿಷ್ಯದ ಭರವಸೆ, ಓಟುಗಳ ಮಹಾಪೂರ ನಿಮ್ಮೆಡೆಗೆ. ಓ! ಹಿಂದೂಧರ್ಮವೇ , ಸನಾತನ ಧರ್ಮವೇ ಅದಕ್ಕೆ ಸಂಬಂಧಿಸಿದ ಆಚಾರ್ಯ, ದೈವವರ್ಗವೇ ಏನು ನಿಮ್ಮ ಮಹಿಮೆ! ನಿಮ್ಮನ್ನು ನಿಂದಿಸಿದರೇನೇ ಇಷ್ಟೆಲ್ಲಾ ಆಶೀರ್ವಾದ ಮಾಡುವಿರಾದರೆ ನಿಮ್ಮನ್ನು ಆರಾಧಿಸಿದರಂತೂ ಇನ್ನೇನೇನು ಸಿಗಲಿಕ್ಕಿಲ್ಲ!!
ಯಾವ ವ್ಯಕ್ತಿ ತನ್ನ ತಂದೆ ತಾತಂದಿರ ನೆರಳಿನಲ್ಲಿ ಬೆಳೆಯದಿದ್ದ ಪಕ್ಷದಲ್ಲಿ ತನ್ನ ಊರು, ಭಾಷೆಯ ನಡುವೆ ಬೆಳೆಯದಿದ್ದಲ್ಲಿ ಯಃಕಶ್ಚಿತ್ ಆಗಿಬಿಡುತ್ತಿದ್ದನೋ ಅವನೂ ಕೂಡ ಈ ದೇಶದಲ್ಲಿ ಸುಲಭವಾಗಿ ಟೀಕಿಸಿ ಬಚಾವಾಗಬಹುದಾದ ಒಂದು ವಿಷಯವಿದ್ದರೆ ಅದು ಹಿಂದೂಧರ್ಮ, ಹಿಂದೂದೇವರು, ಇಲ್ಲವೇ ಹಿಂದೂ ಮತಾಚಾರ್ಯರು. ಇದಕ್ಕೆ ಕಾರಣ ಹಿಂದೂವಿನ ಸಹಿಷ್ಣುತೆ, ತಾಳ್ಮೆ ಮತ್ತು ಮೂರ್ಖರು ಹರಟಿಕೊಳ್ಳಲಿ ಎಂಬ ಉದಾಸೀನ ಭಾವ. ಆದರೆ ಟೀಕಾಕಾರರು ಆಚಾರವಿಲ್ಲದ ನಾಲಿಗೆಯುಳ್ಳವರಾದರೆ?! ಕೆಳಗಿನ ಘಟನೆಯನ್ನು ನೋಡಿ!
ತಮ್ಮ ಅಮೇರಿಕಾದ ಜೈತ್ರಯಾತ್ರೆಯನ್ನು ಮುಗಿಸಿಕೊಂಡು ವಿವೇಕಾನಂದರು ಏಡನ್ನಿನಿಂದ ಕೂಲಂಬೋಗೆ ಪಯಣಿಸುತ್ತಿದ್ದ ಸಂದರ್ಭ ಹಡಗಿನಲ್ಲಿದ್ದ ಕ್ರಿಶ್ಚಿಯನ್ ಪಾದ್ರಿಗಳಿಬ್ಬರು ಯಾವುದೋ ಸಂದರ್ಭದಲ್ಲಿ ಹಿಂದೂಧರ್ಮವನ್ನು ಕೆಣಕಿದಾಗ ಅವರಲ್ಲೊಬ್ಬರ ಕುತ್ತಿಗೆ ಪಟ್ಟಿಯನ್ನು ಹಿಡಿದು ಸ್ವಾಮೀಜಿ ಗರ್ಜಿಸಿದ್ದರು ನಮ್ಮ ಧರ್ಮದ ಬಗ್ಗೆ ಇನ್ನೊಂದೇ ಟೀಕೆಯ ಪದ ಬಂದರೂ ನಿಮ್ಮನ್ನು ಸಮುದ್ರಕ್ಕೆ ಎಸೆಯುತ್ತೇನೆ ಎಂದು. ಕ್ಷಮೆ ಕೇಳಿದ ಪಾದ್ರಿ ಮುಂದೆ ಅವರ ಜೊತೆ ಬಹಳ ಸಭ್ಯತೆಯಿಂದಲೇ ನಡೆದುಕೊಂಡ. ಅದು ಸರಿಯೇ, ಬಿಸಿಯಾಗದೆ ಬೆಣ್ಣೆ ಕರಗುವುದುಂಟೆ.
ಸ್ವಾಮೀಜಿ ಹೀಗೆ ಮಾಡಲು ಕಾರಣವಿಲ್ಲದಿಲ್ಲ, ತಾಳ್ಮೆಗೂ ಒಂದು ಮಿತಿಯುಂಟು. ತಾಳ್ಮೆ ಮಿತಿಮೀರಿದರೆ ಅದೊಂದು ದೌರ್ಬಲ್ಯವೇ ಸರಿ! ಹಿಂದೂಗಳ ವಿಷಯದಲ್ಲಿ ಆಗಿರುವುದೇ ಅದು!ತಪೋನಿರತ ಸಹನಾಶೀಲ ಅಹಿಂಸಾ ಪ್ರಧಾನ ಹಿಂದೂ ಧಾರ್ವಿುಕರನ್ನು ರಕ್ಷಣೆಗೈಯಲು ಕ್ಷತ್ರಿಯ’ ಎಂಬ ಶೌರ್ಯ ಧೈರ್ಯಗಳಿಗೆ ಹೆಸರಾದ ಒಂದು ವರ್ಗವನ್ನೇ ನಿರ್ವಿುಸಿದ್ದು ಈ ಕಾರಣಕ್ಕಾಗಿ. ಈ ಕ್ಷತ್ರಿಯನ ಕಾರ್ಯವನ್ನು ಇಂದು ಸರ್ಕಾರಗಳು ಮಾಡಬೇಕಾಗಿದೆ. ಆದರೆ ಅಜ್ಞಾನ ಅವಿವೇಕಗಳೇ ಮೂರ್ತಿವೆತ್ತಂತಿರುವ ಸರ್ಕಾರಿ ವಲಯಗಳಿಗೆ ಧರ್ಮ ಅಥವಾ ಸನಾತನಧರ್ಮದ ಅದರ ಮಹತ್ತಿನ ಗಂಧಗಾಳಿಯೂ ಇಲ್ಲದಿರುವುದರಿಂದ ಅವರಿಗೆ ಅದರ ಬಗ್ಗೆ ಅಭಿಮಾನವೂ ಇಲ್ಲ ಅದರ ಗೌರವಕ್ಕೆ ಧಕ್ಕೆಯಾದಾಗ ಸ್ಪಂದಿಸುವ ಸೂಕ್ಷ್ಮತೆಯೂ ಇಲ್ಲ. ಅವರಿಗೆ ಗೊತ್ತಿರುವುದು ಹಿಂದೂ ದೇವಾಲಯಗಳ ಹುಂಡಿಹಣವನ್ನು ಹೊಡೆಯುವುದು ಹೇಗೆ? ಹಿಂದೂ ಸಮಾಜವನ್ನು ಒಡೆಯುವುದು ಹೇಗೆ? ಎಂಬುದು ಮಾತ್ರ. ಹಿಂದೂ ಸಮಾಜದ ದೋಷಗಳು ಬೇರೆ ಹಿಂದೂ ಧರ್ಮ ಬೇರೆ ಎಂದು ಶಂಕರ, ವಿವೇಕಾನಂದರಾದಿಯಾಗಿ ನೂರಾರು ಜನ ನೂರಾರು ರೀತಿಯಲ್ಲಿ ಹೇಳಿದರೂ ಇವರ ತಲೆಗೆ ಹೋಗುವ ಹಾಗೆಯೇ ಇಲ್ಲ. ಇಂಥವರನ್ನು ಕಂಡೇ ವಿಜ್ಞಾನಿ ಐನ್ಸ್ಟೀನ್ ಹೇಳಿದ್ದು. ಎಷ್ಟೋ ಜನರಿಗೆ ಮೆದುಳಿನ (ಬುದ್ಧಿಯ) ಅವಶ್ಯಕತೆಯೇ ಇಲ್ಲ. ಕೇವಲ ಬೆನ್ನು ಮೂಳೆಯೇ ಸಾಕಾಗಿತ್ತು ಎಂದು. ಸನಾತನ ಧರ್ಮಕ್ಕೂ ಜಾತಿ ಪದ್ಧತಿಗೂ ಏನೂ ಸಂಬಂಧವಿಲ್ಲ. ಜಾತಿಯ ವಿಷಯ ಸ್ಮೃತಿಗೆ ಸಂಬಂಧಿಸಿದ್ದು ಶೃತಿಗೆ ಸಂಬಂಧಿಸಿದಲ್ಲ. ಸನಾತನ ಧರ್ಮ ಶೃತಿಗೆ ಇಲ್ಲವೇ ವೇದಗಳಿಗೆ ಸಂಬಂಧಿಸಿದ್ದು. ಸ್ಮೃತಿ ಒಂದು ಸಂವಿಧಾನವಿದ್ದಂತೆ.ಯಾವುದೇ ಸಂವಿಧಾನ ಸಮಾಜವನ್ನು ಹಲವು ವರ್ಗಗಳಾಗಿ ವಿಂಗಡಿಸಿಯೇ ತೀರುತ್ತದೆ; ಸಂಖ್ಯೆ, ವರಮಾನ, ಭಾಷೆ, ಮತ ಇತ್ಯಾದಿಗಳ ಆಧಾರದ ಮೇಲೆ. ಹಾಗೆಯೇ ಒಂದು ಕಾಲದಲ್ಲಿ ಹುಟ್ಟಿಕೊಂಡ ಜಾತಿ ಎನ್ನುವುದು ಮತ್ತು ಇದು ಸ್ಮೃತಿ ಅಥವಾ ಸಂವಿಧಾನಕ್ಕೆ ಸಂಬಂಧಿಸಿದ್ದಾದ್ದರಿಂದ ಮನುವೇ ಸ್ಪಷ್ಟವಾಗಿ ಈ ಜಾತಿ ನಿಯಮಗಳು ಎಲ್ಲ ಕಾಲಕ್ಕೂ ಅನ್ವಯಿಸುವುದಿಲ್ಲ, ಕಾಲಕಾಲಕ್ಕೆ ಅದು ಬದಲಾವಣೆಯನ್ನು ಹೊಂದತಕ್ಕದ್ದು ಎಂದು ಹೇಳುತ್ತಾನೆ.
ಹೌದು! ಸ್ವಾತಂತ್ರ್ಯ ವಾದ 75 ವರ್ಷಗಳಲ್ಲೇ ನಮ್ಮ ಈಗಿನ ಸಂವಿಧಾನ ನೂರೈವತ್ತು ಸಲ ತಿದ್ದುಪಡಿಗಳನ್ನು ಕಂಡಿಲ್ಲವೇ? ಇಂಥಾ ವಿಷಯಗಳಿಗೆ ವಿವೇಕಾನಂದರೇ ಅಧಿಕಾರವಾಣಿಯಿಂದ ಮಾತನಾಡಬಲ್ಲವರು. ಬುದ್ಧನನ್ನು ಎಷ್ಟು ಪ್ರಶಂಸಿಸಿದರೂ ದಣಿವರಿಯದ ಸ್ವಾಮೀಜಿ ಈ ವಿಷಯದಲ್ಲಿ ಬುದ್ಧನನ್ನೂ ಟೀಕಿಸಲು ಹಿಂಜರಿಯಲಿಲ್ಲ. ಬುದ್ಧನಿಂದ ಹಿಡಿದು ರಾಮ ಮೋಹನ್ ರಾಯ್ವರೆಗೆ ಪ್ರತಿಯೊಬ್ಬರೂ ಮಾಡಿದ ತಪ್ಪೆಂದರೆ ಹಿಂದೂ ಸಮಾಜದ ದೋಷಗಳನ್ನು ಹಿಂದೂ (ಸನಾತನ) ಧರ್ಮದ ತಲೆಗೆ ಕಟ್ಟಿದ್ದು ಮತ್ತು ಇದರ ಪರಿಹಾರಕ್ಕಾಗಿ ಈ ಧರ್ಮವನ್ನೇ ಮೂಲೋತ್ಪಾಟನೆಗೊಳಿಸಲೆತ್ನಿಸಿದ್ದು ಮತ್ತು ಆ ಪ್ರಯತ್ನದಲ್ಲಿ ಸೋತಿದ್ದು ಮುಂದುವರೆದು But with my little knowledge I have found that religion has never been at fault; The problem is due to our failure in carrying religious truths to their logical conclusions ಧರ್ಮದ ತತ್ವಗಳನ್ನು ನಾವು ಅನುಷ್ಠಾನಿಸಲು ವಿಫಲರಾದದ್ದೇ ತಪ್ಪು. ಧರ್ಮದ ತಪ್ಪಲ್ಲ.
ಹಾಗಾದರೆ ಸನಾತನಧರ್ಮ!ಅದಾವುದು?ಹಾಗಂದರೇನು? ಈ ಪ್ರಶ್ನೆಗೆ ಉತ್ತರ ಈ ಪ್ರಪಂಚದ ಯಾವುದೇ ವಿಜ್ಞಾನಿ, ಸಾಹಿತಿ, ಚಿಂತಕ, ಅನ್ವೇಷಕ, ಕಲಾಕಾರ, ಆಡಳಿತಜ್ಞ ತನ್ನ ಮೆದುಳಿನ ಶಕ್ತಿಯನ್ನು ವೃದ್ಧಿಸಿಕೊಳ್ಳಲು, ಹೃದಯದ ಭಾವನೆಗಳನ್ನು, ಸಂವೇದನೆಗಳನ್ನು ಔನ್ನತ್ಯಕ್ಕೇರಿಸಲು, ತನ್ನ ಸಾಮರ್ಥ್ಯಗಳನ್ನು ಸಾಸಿರಮಡಿ ಜಾಸ್ತಿಯಾಗಿಸಿಕೊಳ್ಳಲು ಅಧ್ಯಯಿನಿಸಬೇಕಾದ ಏಕಮೇವ ವಿಷಯ! ಮಾನವ ಇತಿಹಾಸದಲ್ಲಿ ವಿಜ್ಞಾನ ತತ್ವಜ್ಞಾನಗಳು ಹೇಳಬೇಕಾದ ಕೊನೆಯ ಅಧ್ಯಾಯ! ಮಿತಿಗಳಿಗೊಳಪಟ್ಟ ವ್ಯಕ್ತಿ ಮತ್ತು ಜೀವನ ಅವುಗಳನ್ನು ದಾಟಿ ಅನಂತದೆಡೆಗೆ ದಾಪುಗಾಲು ಹಾಕಲೆತ್ನಿಸಿದಾಗ ಅದರ ಸಹಾಯಕ್ಕೆ ಬರುವ ದಾರಿದೀಪ! ಉಪಾಯ! ಒಂದು ಮಾತಿನಲ್ಲಿ ಹೇಳಬೇಕೆಂದರೆ ಮನುಷ್ಯನು ವಿಕಾಸ ಹೊಂದಲು ಇರುವ ಏಕಮೇವ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗದರ್ಶಿಸೂತ್ರವೇ ಸನಾತನ ಧರ್ಮ. ಶಿಷ್ಯನೊಬ್ಬ ಶ್ರೀರಾಮಕೃಷ್ಣರನ್ನು ಅದ್ವೈತ ಸಾಕ್ಷಾತ್ಕಾರ ಮಾಡಿಕೊಡಿ ಎಂದು ಕೇಳಿದಾಗ ಅವರು ಉತ್ತರಿಸಿದ್ದು ಅದು ಕೊನೆಯ ಮಾತು ಎಂದು. ಸನಾತನ ಎಂದರೆ ಸಾವಿಲ್ಲದ್ದು ಎಂದು ಸಹಜವಾಗಿಯೇ ಹುಟ್ಟೂ ಇಲ್ಲದ್ದು. ಅರ್ಥಾತ್ ಸಾರ್ವಕಾಲಿಕ ಸತ್ಯ ಎಂದು ಇಡೀ ಸೃಷ್ಟಿ ಎರಡು ಪ್ರಕೃತಿಗಳಿಂದ ಆಗಿದೆ ಬಾಹ್ಯ ಮತ್ತು ಆಂತರಿಕ. ವಿಜ್ಞಾನ ಕೇವಲ ಬಾಹ್ಯ ಇಲ್ಲವೇ ಆಂತರಿಕವಾಗಿ ಮನಸ್ಸಿನ ಹೊರವಲಯಗಳನ್ನು ಮಾತ್ರ ಕುರಿತು ಹೇಳುತ್ತಿದ್ದರೆ ಸನಾತನ ಧರ್ಮ ಸಮಗ್ರವಾಗಿ ಬಾಹ್ಯ ಮತ್ತು ಆಂತರಿಕ ಪ್ರಕೃತಿಗಳ ಸಂಪೂರ್ಣ ಸತ್ಯಗಳನ್ನು ಬುದ್ಧ ಪೂರ್ವದಲ್ಲೇ ಹೊರಹಾಕಿದೆ. ಸನಾತನ ಧರ್ಮ ಎಂದರೆ ಈ ಜ್ಞಾನವೇ ಅದೇ ವೇದಾಂತ. ಪ್ರಧಾನವಾಗಿ ಗೀತೆ, ಬ್ರಹ್ಮಸೂತ್ರ ಮತ್ತು ಉಪನಿಷತ್. ಬೌದ್ಧ ಧರ್ಮವೂ ಇದರ ಶಾಖೆಯೇ. ಬೌದ್ಧ ಧರ್ಮವನ್ನೂ ಸೇರಿಸಿಕೊಂಡು ಉಪನಿಷತ್ತುಗಳ ಆಧಾರವಿಲ್ಲದ ತತ್ವಶಾಸ್ತ್ರವೇ ಇಲ್ಲ ಎಂದು (There is no school of Philosophy heterodox Buddhism included which is not rooted in the ಉಪನಿಷದ್ಸ್) ಬ್ಲೂಮ್ೕಲ್ಡ್ ಎಂಬ ಮಹಾನ್ ಪಾಶ್ಚಾತ್ಯ ಚಿಂತಕ ಹೇಳುತ್ತಾನೆ ಈ ಸನಾತನ ಧರ್ಮ ಇಲ್ಲವೇ ವೇದಾಂತದ ಒಂದೊಂದು ಮುಖ ಮಾತ್ರ ಪ್ರಪಂಚದ ಬೇರೆ ಧರ್ಮಗಳು ಎಂದು. ಸ್ವಾಮಿ ವಿವೇಕಾನಂದರು ಸಂಶಯಕ್ಕೆಡೆಯಿಲ್ಲದಂತೆ ಹೇಳುತ್ತಾರೆ ಇತ್ತೀಚಿಗೆ ಅಧ್ಯಯನ ಹೀನ, ಅಪ್ರಬುದ್ಧ ವ್ಯಕ್ತಿಯೊಬ್ಬ ಬಯಸಿದಂತೆ ಸನಾತನ ಧರ್ಮ ಕಣ್ಮರೆಯಾಗಲು ಸಾಧ್ಯವೇ ಇಲ್ಲ; ಕಣ್ಮರೆಯಾದರೆ ಯಾವ ಧರ್ಮವೂ ಉಳಿಯುವ ಸಂಭವವೇ ಇಲ್ಲ. ಶರೀರವೇ ಹೋದಮೇಲೆ ಕಣ್ಣು ಕಾಲು ಹೇಗೆ ಉಳಿದೀತು? ಈ ದೇಶದಲ್ಲಿ ಕೆಲವರ್ಗಗಳಿಗೆ ನರಿಸಂಸ್ಕೃತಿ ಬಹಳ ಆಕರ್ಷಣೀಯ. ಯಾವುದು ತನಗೆ ದಕ್ಕುವುದಿಲ್ಲವೋ ಅದು ಸರಿಯಲ್ಲ. ತನಗೆಟುಕದ ದ್ರಾಕ್ಷಿ ಹುಳಿ ಎಂದ ಹಾಗೆ! ಯಾರು ಬೇಕಾದರೂ ಆಶಿಸುವ ತಿನ್ನಬಹುದಾದ ಹಣ್ಣೇ ಅದು ಸಾಕಷ್ಟು ಸಿಹಿಯೇ. ಪ್ರಪಂಚವೇ ಅದರಡೆಗೆ ಆಕರ್ಷಿತವಾಗಿದೆ. ನಾವೂ ಆಕರ್ಷಿತರಾಗಿದ್ದವರೇ. ಯಾವುದೋ ಪೂರ್ವಗ್ರಹದಿಂದ ಅಜ್ಞಾನದಿಂದ ಅದು ನಮಗೆ ಲಭ್ಯವಿಲ, ಆದ್ದರಿಂದ ಅದು ಹುಳಿ.
ಸನಾತನ ಧರ್ಮ ನಮ್ಮನ್ನು ಪ್ರಶ್ನಿಸಿ ಎಂದು ಧೈರ್ಯದಿಂದ ಸವಾಲೆಸೆಯುವ ಏಕಮಾತ್ರ ಧರ್ಮ.ಅದು ವ್ಯಕ್ತಿ ಆಧಾರಿತ ಅಲ್ಲ. ತತ್ವಾಧಾರಿತ. ಅದೊಂದು ಜ್ಞಾತೃ ಮತ್ತು ಜ್ಞೇಯಗಳೆರಡಕ್ಕೂ ಸಂಬಂಧಿಸಿದ ಪರಿಪೂರ್ಣ ಜ್ಞಾನವನ್ನು ಒಳಗೊಂಡಿದೆ. ಆದ್ದರಿಂದ ಎಲ್ಲ ವಿಜ್ಞಾನಗಳ ಮತ್ತು ತತ್ವಜ್ಞಾನಗಳ ಗಂಗೋತ್ರಿಯೇ ಅದು.
At this supremely dangerous moment in human history the only way of salvation is the ancient Hindu way. Here we have the attitude spirit that can make it possible for the human race to grow together into a single family ಎಂಬ ಮಾತುಗಳಲ್ಲಿ ಸುಪ್ರಸಿದ್ಧ ಬ್ರಿಟಿಷ್ ಚರಿತ್ರಕಾರ ಆರ್ನಾಲ್ಡ್ ಟಾಯ್್ನ ಆಧುನಿಕ ಜಗತ್ತಿನ ಸಮಸ್ಯೆಗಳಿಗಿರುವ ಏಕಮೇವ ಪರಿಹಾರ ಪ್ರಾಚೀನ ಹಿಂದೂಗಳ ರೀತಿ ನೀತಿಗಳಲ್ಲಿದೆ. ಇಲ್ಲಿ ಪ್ರಪಂಚವೇ ಒಂದು ಕುಟುಂಬದಂತೆ ಬದುಕುವುದಕ್ಕೆ ಬೇಕಾಗುವ ಭಾವನೆ ಮತ್ತು ದೃಷ್ಟಿಕೋನಗಳು ಬೇಕೆಂಬಷ್ಟಿವೆ ಎಂದು ಸ್ಪಷ್ಟ ಮಾತುಗಳಲ್ಲಿ ಉಚ್ಛರಿಸಿ ಸನಾತನಧರ್ಮದ ವಿಶ್ವಮೈತ್ರಿಭಾವವನ್ನು ಸಂಶಯಕ್ಕೆಡೆಯಿಲ್ಲದಂತೆ ಘೊಷಿಸಿದ್ದಾರೆ. ಇಂತಹ ಸನಾತನ ಧರ್ಮ ಸಾರ್ವಕಾಲಿಕ ಸಂವಿಧಾನವೂ ಹೌದು, ಪ್ರತೀ ಮನುಷ್ಯನಿಗೂ ತನ್ನಲ್ಲಿರುವ ಅದ್ಭುತ ಸಾಮರ್ಥ್ಯಗಳನ್ನು ವ್ಯಕ್ತಗೊಳಿಸುವಲ್ಲಿ ಸಹಾಯ ವೆಸಗುವ ಸಾರ್ವಕಾಲಿಕ ವಿಜ್ಞಾನವೂ ಹೌದು. Religion is the manifestation of divinity already in Man. ಎಂಬ ಮಾತನ್ನು ವಿವೇಕಾನಂದರು ಘೊಷಿಸಿ ಶತಮಾನಗಳೇ ಕಳೆಯಿತು ನಮಗೆ ತಿಳಿದಿಲ್ಲ ಅಷ್ಟೇ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)