ಅಂಕಣ

ದೇಹಕ್ಕಾಗಿ ಅವನು, ಸಮಾಜಕ್ಕಾಗಿ ನಾನು: ಡಿವೋರ್ಸ್‌ ಕೊಡದೇ ಪೀಡಿಸ್ತಿದ್ದಾಳೆ- ಪ್ಲೀಸ್‌ ಸಲಹೆ ಕೊಡಿ

suchetana
ನನ್ನ ಪತ್ನಿ ಮೊದಲಿನಿಂದಲೂ ನನ್ನ ಜತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಇದೀಗ ತವರಿಗೆ ಹೋಗಿ ಕೂತಿದ್ದಾಳೆ. ಒತ್ತಾಯ ಮಾಡಿ ಕರೆದುಕೊಂಡು ಹೋದರೆ ಸಾಯುತ್ತೇನೆ’ ಅಂತ ಹೆದರಿಸುತ್ತಾಳೆ.

ಅವಳಿಗೆ ಬೇರೆಯವರ ಜೊತೆ ಅನೈತಿಕ ಸಂಬಂಧ ಇದೆ. ಅವನ ಜತೆಗಿನ ಸಂಬಂಧ ಬೇಕು ಅಂತಿದ್ದಾಳೆ. ಹಾಗಿದ್ದಮೇಲೆ ವಿಚ್ಛೇದನ ಕೊಡು ಅಂದರೆ ಅದಕ್ಕೂ ಒಪ್ಪುತ್ತಿಲ್ಲ. ಸಮಾಜದ ದೃಷ್ಟಿಯಲ್ಲಿ ನನಗೆ ಗಂಡ ಬೇಕು, ಅವನನ್ನು ಮದುವೆಯಾಗಲು ಆಗುವುದಿಲ್ಲ. ಆದ್ದರಿಂದ ಡಿವೋರ್ಸ್‌ ಕೊಡಲ್ಲ ಅಂತಿದ್ದಾಳೆ. ಹೆಚ್ಚಿಗೆ ಮಾತಾಡಿದ್ರೆ ವರದಕ್ಷಿಣೆ ಕೇಸ್‌ ಹಾಕಿ ಲಾಯರ್ ನೋಟಿಸ್ ಕೊಟ್ಟು ಧಮ್ಕಿ ಹಾಕಿದ್ದಾಳೆ. ನಾನು ಏನು ಮಾಡಬೇಕು ತಿಳಿಸಿ

ಉತ್ತರ: ನೀವು ಮೊದಲಿಗೆ ಲಾಯರ್ ನೋಟಿಸಿಗೆ ಸರಿಯಾದ ಪ್ರತ್ಯುತ್ತರ ಕಳಿಸಿ. ನಂತರ ನಿಮ್ಮ ತಾಲ್ಲೂಕಿನ ಮಧ್ಯಸ್ಥಿಕೆ ಕೇಂದ್ರಕ್ಕೆ ಹೋಗಿ, ನಿಮ್ಮ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು , ನಿಮ್ಮಿಬ್ಬರ ಮಧ್ಯೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ವ್ಯವಸ್ಥೆ ಮಾಡಲು ಕೇಳಿಕೊಳ್ಳಿ. ಕೇಂದ್ರದವರು ಇಬ್ಬರನ್ನೂ ಕರೆಯಿಸಿ , ಮಧ್ಯಸ್ಥಿಕೆಗಾರರ ಮೂಲಕ ಮಾತಾಡಲು ಅವಕಾಶ ಮಾಡಿಕೊಡುತ್ತಾರೆ. ಆಗ ರಾಜೀ ಸೂತ್ರಕ್ಕೆ ಬರಬಹುದು.

ಒಂದು ವೇಳೆ ನಿಮ್ಮ ಪತ್ನಿ ಯಾವುದಕ್ಕೂ ಒಪ್ಪದಿದ್ದರೆ, ನಿಮಗೆ ಹಂಡತಿ ಬೇಕು ಎನ್ನುವುದಾದರೆ ಆಗ ನೀವು ಅವಳ ವಿರುದ್ಧ “ ದಾಂಪತ್ಯ ಜೀವನದ ಹಕ್ಕುಗಳ ಪುನರ್ ಸ್ಥಾಪನೆಗೆ” ಪ್ರಕರಣ ದಾಖಲಿಸಿ. ಅಥವಾ, ನಿಮಗೆ ಆಕೆಯಿಂದ ವಿಚ್ಛೇದನ ಬೇಕಿದ್ದರೆ, ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿ. ಸಾಕ್ಷ್ಯಾಧಾರಗಳನ್ನು ಗಮನಿಸಿದ ಕೋರ್ಟ್‌ ಸೂಕ್ತ ತೀರ್ಪು ನೀಡುತ್ತದೆ.