ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಜಯಭೇರಿ ಬಾರಿಸುವ ಸಾಧ್ಯತೆಯಿದೆ ಎಂದು ಖ್ಯಾತ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಇದನ್ನೂ ಓದಿ: ‘ರೇವ್ಪಾರ್ಟಿ’ ಮರೆಮಾಚಲು ಹೇಮಾ ‘ಬಿರಿಯಾನಿ’ ತಯಾರಿ! ಹಿಂದೆಂದೂ ಇಲ್ಲದ ರೆಸಿಪಿ ಈಗ್ಯಾಕೆ ಎಂದ ನೆಟ್ಟಿಗರು..
ಈ ಬಾರಿ ಬಿಜೆಪಿ 303 ಸ್ಥಾನಗಳ ಸಮೀಪಕ್ಕೆ ಬರುವ ಸಾಧ್ಯತೆ ಇದೆ ಎಂದು ಅವರು ಭವಿಷ್ಯ ನುಡಿದರು,
ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಕಳೆದ ಚುನಾವಣೆಯಲ್ಲಿ ಗೆದ್ದಿರುವ ಸ್ಥಾನಗಳಿಗೆ ಸಮನಾದ ಸ್ಥಾನಗಳನ್ನು ಈ ಬಾರಿ ಗೆಲ್ಲಬಹುದು ಅಥವಾ ಸ್ವಲ್ಪ ಹೆಚ್ಚಾಗಬಹುದು ಎಂದ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಆಡಳಿತಾರೂಢ ಸರ್ಕಾರ ಮತ್ತು ಅದರ ನಾಯಕರ ಮೇಲೆ ಜನರು ಕೋಪಗೊಂಡಾಗ, ಪರ್ಯಾಯ ಮಾರ್ಗವಿದೆಯೇ ಅಥವಾ ಇಲ್ಲವೇ ಎಂದು ಜನ ನೋಡುವುದಿಲ್ಲ. ಆದರೆ ಇದುವರೆಗೆ ಮೋದಿ ವಿರುದ್ಧ ವ್ಯಾಪಕವಾದ ಅಸಮಾಧಾನ ಪ್ರತಿಧ್ವನಿಸುತ್ತಿಲ್ಲ ಎಂದು ಪ್ರಶಾಂತ್ ಹೇಳಿದರು.
ಜನರಿಗೆ ನಿರಾಸೆಯಾಗಿರಬಹುದು. ಅವರ ಕನಸುಗಳು ನನಸಾಗದೇ ಇರಬಹುದು. ಆದರೆ ಮೋದಿ ಕುರಿತಾಗಿ ಒಳ್ಳೇಯ ಅಭಿಪ್ರಾಯವಿದೆ ಎಂದು ಎಂದು ವಿವರಿಸಿದರು.
ಬಿಜೆಪಿ 370 ಮತ್ತು ಎನ್‌ಡಿಎ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ 370 ಸ್ಥಾನಗಳನ್ನು ನಿರೀಕ್ಷಿಸುತ್ತಿದೆ. ಅದರ ಪ್ರಕಾರ ಬಹುಮತಕ್ಕೆ ಬೇಕಾದ 272 ಸ್ಥಾನಗಳನ್ನು ಪಡೆಯುತ್ತಾರೋ ಇಲ್ಲವೋ ಕಾದು ನೋಡಬೇಕಿದೆ. ಆದರೆ ಯಾವುದೇ ಅಪಾಯವಿದೆ ಎಂದು ನಾನು ಭಾವಿಸುವುದಿಲ್ಲ, ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.