ಅಂಕಣ

ತೇಜಸ್ವಿ ಸೂರ್ಯ “ಗೂಂಡಾಗಿರಿ” ಮಾಡ್ತಾರೆ, ಮೀನು ತಿನ್ತಾರೆ ಎಂದ ಕಂಗನಾ..ವಿಷಯ ಏನು ಗೊತ್ತಾ?

ನವದೆಹಲಿ: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಕಂಗನಾ ರನೌತ್ ಚುನಾವಣಾ ರ್‍ಯಾಲಿಯಲ್ಲಿ ಭಾಷಣ ಮಾಡುವಾಗ ತೇಜಸ್ವಿ ಯಾದವ್ ಎನ್ನುವ ಬದಲು ತೇಜಸ್ವಿ ಸೂರ್ಯ ಎಂದು ತಪ್ಪಾಗಿ ಗ್ರಹಿಸಿ ದೂಷಿಸಿದ ಘಟನೆ ನಡೆದಿದೆ.

ವಿರೋಧ ಪಕ್ಷದ ನಾಯಕರ ಮೇಲೆ ವಾಗ್ದಾಳಿ ಮಾಡುವಾಗ ಕಂಗನಾ ಕರ್ನಾಟಕ ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಅವರನ್ನು “ಗೂಂಡಾಗಿರಿ” ಮಾಡುತ್ತಾರೆ ಮತ್ತು “ಮೀನು ತಿನ್ನುತ್ತಾರೆ” ಎಂದು ಹೇಳಿದರು.

ವಾಸ್ತವದಲ್ಲಿ ತೇಜಸ್ವಿ ಯಾದವ್ ವಸಂತ ನವರಾತ್ರಿಯ ಮುನ್ನಾದಿನ ಮೀನು ತಿಂದಿದ್ದರು. ಎಂದು ಟೀಕೆ ಮಾಡಬೇಕಿತ್ತು. ಏಪ್ರಿಲ್ 9 ರಂದು ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ತೇಜಸ್ವಿ ಅವರು ಲೋಕಸಭೆ ಚುನಾವಣೆಯ ಪ್ರಚಾರದ ನಡುವೆ ಫಿಶ್​ಫ್ರೇ ತಿನ್ನುತ್ತಿದ್ದ ಪೋಸ್ಟ್ ಇತ್ತು. ವಾಸ್ತವದಲ್ಲಿ ನವರಾತ್ರಿಯ ಮುನ್ನಾದಿನ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.

ಮೀನು ತಿನ್ನುವುದು ತಪ್ಪೇ ಎಂದು ಸಾಮಾಜಿಕ ಜಾಲತಾಣದ ಹಲವು ಬಳಕೆದಾರರು ಕಂಗನಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದಾ ವಿವಾದದೊಂದಿಗೆ ಸುದ್ದಿಯಲ್ಲಿರುವ ಕಂಗನಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.