ಖ್ಚಜಿಛ್ಞಿ್ಚ ್ಚ್ಞಠಿ ಚಿಛಿ ಡ್ಟಿಚಟಟಛಿಛ ್ಠ ಡಿಜಿಠಿಜ ಚ್ಞಢ ಟಚ್ಟಠಿಜ್ಚಿuಚ್ಟ ಚಿಟಛಢ ಟ್ಛ ್ಛ್ಚಠ. ಐಠಿ ಜಿಠ ಟ್ಞ್ಝ ಚ್ಞ ಜ್ಞಿಠಿಛ್ಝಿ್ಝ್ಚ್ಠ್ಝ ಚಠಿಠಿಜಿಠ್ಠಿಛಛಿ, ಡಿಜಜ್ಚಿಜ ಚ್ಚ್ಚಟಠಿಠ ್ಛ್ಚಠ ಚಿಚಠಛಿಛ ಟ್ಞ ಛಿಡಜಿಛಛ್ಞಿ್ಚ. ಖ್ಚಜಿಛ್ಞಿ್ಚ ಜಿಠ ್ಞಠಿ ್ಚnಜ್ಞಿಛಿಛ ಠಿಟ ಚ್ಞಢ ಟಚ್ಟಠಿಜ್ಚಿuಚ್ಟ ಞಛಿಠಿಜಟಛಠ ಟ್ಛ ಛ್ಞಿಟ್ಠಿಜ್ಟಿಢ. ಐ ಠಿಜಛಿ ್ಛ್ಚ ಟ್ಛ ಠಿಜಜಿಠ ಛಿಡಜಿಛಛ್ಞಿ್ಚ ಡಿಛಿ ್ಚ್ಞ ಜಚಡಛಿ ಚ ಜಟಟಛ ್ಝಠಠಟ್ಞ ಜ್ಞಿ ಠ್ಚಜಿಛ್ಞಿ್ಚ fಟಞ ಚ್ಞ ಚಛಡಟ್ಚಚಠಿಛಿ ಠಜ್ಛಿಠಿಜ್ಞಿಜ ಛಿಡಜಿಛಛ್ಞಿ್ಚ, ಚ ಞಛ್ಟಿ್ಚಚ್ಞಠಿ ಞಛಿಛಿಠಿಜ್ಞಿಜ ಚ ಟ್ಟಚ್ಚಠಿಜ್ಚಿಚ್ಝ ಟ್ಟಟಚ್ಝಿಛಿಞ, ಚ ಠಠಿಚಠಿಛಿಠಞಚ್ಞ ಟಚಠಠಜ್ಞಿಜ ಚ ್ಚ್ಞಠ್ಟಿuಠಿಜಿಡಛಿ ಚಿಜ್ಝಿ್ಝ ಜ್ಞಿ ಠಿಜಛಿ ಟಚ್ಟ್ಝಚಞಛ್ಞಿಠಿ.
ಅರ್ಥಾತ್ ವಿಜ್ಞಾನವೆಂಬುದು ಯಾವುದೋ ಕೆಲವು ವಿಷಯಗಳಿಗಷ್ಟೇ ಸೀಮಿತವಲ್ಲ, ಆಧಾರಗಳ ಮೇಲೆ ಮಾತ್ರವೇ ಒಪ್ಪಿಕೊಳ್ಳುವ ಬೌದ್ಧಿಕ ದೃಷ್ಟಿಕೋನ ಅದು. ಕೆಲವೇ ವಿಧಾನಗಳಿಗೆ ಅದು ಸೀಮಿತವೂ ಅಲ್ಲ . ಇದರ ಹಿನ್ನೆಲೆಯಲ್ಲಿ ಸಮಸ್ಯೆಯೊಂದನ್ನು ಬಿಡಿಸುತ್ತಿರುವ ವಾಣಿಜ್ಯೋದ್ಯಮಿ, ಸಾಕ್ಷಿಯನ್ನು ಹೊರಗೆಳೆಯುತ್ತಿರುವ ವಕೀಲ ರಚನಾತ್ಮಕ ಮಸೂದೆಯೊಂದರ ಬಗ್ಗೆ ರ್ಚಚಿಸುತ್ತಿರುವ ಸಂಸದ ಇವರಿಂದಲೂ ವಿಜ್ಞಾನದ ಪಾಠಗಳನ್ನು ನಾವು ಕಲಿಯಬಹುದು.
ಹೋಗಲಿ ಸನಾತನ ಧರ್ಮದ ವಿರುದ್ಧ ಹರಿದುಬರುತ್ತಿರುವ ವಾದಗಳಲ್ಲಿ ತಥ್ಯ, ಅಧ್ಯಯನಾತ್ಮಕ, ರ್ತಾಕ, ಸುಸಂಬದ್ಧ ವಿಶ್ಲೇಷಣೆಯಾದರೂ ಇದೆಯಾ? ಅದೂ ಇಲ್ಲ! ಬುಡಕಟ್ಟು, ಜಾನಪದ ಇತ್ಯಾದಿ ಕಾಗಕ್ಕ , ಗುಬ್ಬಕ್ಕನ ಕಥೆಗಳೇ. ಅವು ಅರ್ಥವಾಗುವುದೂ, ಆಸಕ್ತಿಯನ್ನು ಹುಟ್ಟಿಸುವುದೂ ಕೂಡ ಕಾಗಕ್ಕ ಗುಬ್ಬಕ್ಕನಂಥ ವ್ಯಕ್ತಿಗಳಿಗೇ! ಯಾವ ಸಾಹಿತ್ಯದ ಆಧಾರವೂ ಇಲ್ಲ! ಭಾಷೆಯಾಧಾರಿತ, ಶಾಸನಾಧಾರಿತವೂ ಅಲ್ಲ ಅವು. ಕೇವಲ ಉಹಾಪೋಹ! ಅಂತೆಕಂತೆಗಳು ಮಾತ್ರ. ಕ್ರಿ.ಪೂ. ಐವತ್ತು, ಅರವತ್ತನೇ ಶತಮಾನದ ಸಂಗತಿಗಳನ್ನು ಕ್ರಿ. ಶ. ಹತ್ತನೇ ಶತಮಾನದ ವ್ಯಕ್ತಿ ಹೇಳಿದಾಗ ಅಲ್ಲಿ ನಾವು ಹುಡುಕುವುದು ಅದರ ಮೂಲವನ್ನು ಇಲ್ಲವೇ ರ್ತಾಕ ಆಧಾರವನ್ನು! ಇವೆರಡೂ ಇಲ್ಲ ಎಂದರೆ ನಂಬುವುದು ಹೇಗೆ? ಯಾವುದಾದರೂ ಒಂದು ವಿಷಯವನ್ನು ಸ್ವೀಕರಿಸಬೇಕೋ ಬೇಡವೋ, ಅದು ಸತ್ಯವೋ ಸುಳ್ಳೋ ಎಂದು ತಿಳಿಯುವುದಕ್ಕೆ ಒಂದು ಪೂರ್ಣಪ್ರಮಾಣದ ಶಾಸ್ತ್ರವೇ ಇದೆ. ಇದೇ ಜ್ಞಾನಶಾಸ್ತ್ರ (ಉಟಜಿಠಠಿಛಿಞಟ್ಝಟಜಢ ) ಅದನ್ನು ನಿರ್ವಿುಸಿದ್ದು ಬೇರೆಲ್ಲಾ ಮಾನವೋಪಯೋಗಿ ಶಾಸ್ತ್ರಗಳನ್ನು ನಿರ್ವಿುಸಿದಂತೆ ಸನಾತನ ಸಂಸ್ಕೃತಿಯೇ. ಇಂತಹ ಸೂಕ್ಷ್ಮ ವಿಷಯಗಳನ್ನು ಪಾಶ್ಚಾತ್ಯ ಜಗತ್ತು ಎಂದಿಗೂ ನಿರ್ವಿುಸಲಾರದು. ಅದರ ಹೆಗ್ಗಳಿಕೆಯಲ್ಲಾ ಮಹಾನ್ ಚಿಂತನೆಗಳನ್ನು ಭಾರತದಿಂದ ಅದು ಹೇಗೋ ತನ್ನಲ್ಲಿಗೆ ಸಾಗಿಸಿಕೊಂಡು ತನ್ನ ಮುದ್ರೆಯನ್ನು ಒತ್ತುವುದರಲ್ಲಿ ಮಾತ್ರ. ಗುರುತ್ವಾಕರ್ಷಣೆ, ರೇಖಾಗಣಿತ, ವೈದ್ಯಕೀಯ ವಿಜ್ಞಾನ ಇವುಗಳಲ್ಲೆಲ್ಲಾ ಮಾಡಿದಂತೆ! ಇಲ್ಲವೇ ಪೈಥಾಗೊರಸ್ನಿಂದ ಹಿಡಿದು ವಿಲಿಯಂ ಜೇಮ್ಸ್, ಅಲೆಕ್ಸಿಸ್ ಕೆರೆಲ್ವರೆಗಿನ ವಿಜ್ಞಾನಿಗಳು ಮಾಡಿದಂತೆ! ಹೆಚ್ಚೆಂದರೆ ಭಾರತೀಯ ಜನ್ಯ ವಿಜ್ಞಾನಗಳಿಗೆ ಪ್ರಾಯೋಗಿಕ ಅನ್ವಯಗಳನ್ನು( ಟ್ಟಚ್ಚಠಿಜ್ಚಿಚ್ಝ ಚಟಟ್ಝಜ್ಚಿಚಠಿಜಿಟ್ಞಠ) ಕಂಡುಹಿಡಿದಂತೆ!! ಈ ಶಾಸ್ತ್ರವನ್ನು ಆಂಗ್ಲಭಾಷೆಯಲ್ಲಿ ಛಿಟಜಿಠಠಿಛಿಞಟ್ಝಟಜಢ ಎಂದು ಕರೆಯುತ್ತಾರೆ.
ಮರಳಿ ಈ ಶಾಸ್ತ್ರದ ವಿವರಕ್ಕೆ ಬರೋಣ. ಇದರ ಪ್ರಕಾರ ಯಾವುದೇ ವಿಷಯವನ್ನು ಸತ್ಯವೆಂದು ಅಂಗೀಕರಿಸಬೇಕಾದರೆ ಅದು ಇಂದ್ರಿಯಗಳಿಗೆ ಅನುಭವಕ್ಕೆ ಬಂದರಷ್ಟೇ ಸಾಲದು ; ತರ್ಕದಿಂದ ಸಾಧಿಸಿದರೂ ಸಾಲದು! ಆದರೆ ಸಂಪೂರ್ಣ ಸಂಸ್ಕಾರರಹಿತ ಪ್ರಜ್ಞೆಯಿಂದ ಕೂಡಿದ ಬುದ್ಧಿ ಅಥವಾ ಸಂಪೂರ್ಣ ಪ್ರಜ್ಞೆಯಿಂದ ಕೂಡಿದ ಸ್ಥಿತಿಯಲ್ಲಿ ಮನುಷ್ಯ ಅದನ್ನು ಗ್ರಹಿಸಬೇಕು. ಆ ಸ್ಥಿತಿಯನ್ನು ಸನಾತನ ಭಾರತ ’ತುರೀಯಾವಸ್ಥೆ’ ಎಂದು ಕರೆಯುತ್ತದೆ. ಇಂದಿಗೂ ಈ ತುರೀಯ ಮತ್ತು ಅದನ್ನು ತಲುಪುವ ವಿಧಾನಗಳ ಬಗ್ಗೆ ಪಾಶ್ಚಾತ್ಯರ ಜ್ಞಾನ ಶೂನ್ಯ. ಅವರಿನ್ನೂ ಜೀವಕೋಶಗಳು ಒಂದು ರೀತಿಯಲ್ಲಿ ಜೋಡಿಸಲ್ಪಟ್ಟಾಗ ಮೆದುಳಿನಲ್ಲಿ ಪ್ರಜ್ಞೆ, ಬುದ್ಧಿ ಇತ್ಯಾದಿಗಳು ಮೂಡಿ ಬರುತ್ತವೆ ಎಂದು ಹೇಳುತ್ತಾರೆ. ಇದರಷ್ಟು ಅರ್ತಾಕ ಸಂಗತಿಯೇ ಇಲ್ಲ. ಈ ಕಾರಣದಿಂದಲೇ ಪಾಶ್ಚಾತ್ಯ ವಿಜ್ಞಾನದ ಯಾವ ಸಂಶೋಧನೆಯೂ ಕೆಲವು ದಶಕಗಳಲ್ಲೇ ಪಲ್ಲಟವಾಗಿಬಿಡುತ್ತದೆ. ಪರಮಾಣುವಾದವನ್ನು ಕೊಟ್ಟ ಡಾಲ್ಟನ್ ಇಂದು ಅಪ್ರಸ್ತುತ! ಅವನನ್ನು ಸುಧಾರಿಸಿದ ರುದರ್ ಫೋರ್ಡ್ ವಾದ ಅಪ್ರಸ್ತುತ! ಒ. ಒ. ಥಾಮ್ಸನ್ ಇಂದು ಅಪ್ರಸ್ತುತ! ನ್ಯೂಟನ್ರ ಎಷ್ಟೋ ಸಂಶೋಧನೆಗಳು, ಚಡ್ವಿಕ್ರವರ ನ್ಯೂಟ್ರಾನ್ ಇಂದು ಅಪ್ರಸ್ತುತ ! ವಿಕಾಸವಾದವನ್ನು ಕೊಟ್ಟ ಡಾರ್ವಿನ್ ಅಪೂರ್ಣ! ಇದು ಇವರ ಹೆಗ್ಗಳಿಕೆ. ಇವರನ್ನೇ ಗೋತ್ರಪುರುಷರನ್ನಾಗಿಸಿಕೊಂಡು ಕುಣಿಯುವ ಭಾರತೀಯ ಬುದ್ಧಿಜೀವಿಗಳಂತೂ ತಮ್ಮ ಮೆದುಳನ್ನು ತಕ್ಕು ಹಿಡಿಯಲು ಬಿಟ್ಟುಕೊಟ್ಟು ಎಷ್ಟೋ ವರ್ಷಗಳಾಯ್ತು! ಇಲ್ಲದಿದ್ದಲ್ಲಿ ಯುಧಿಷ್ಠಿರ ಅಶೋಕನಿಂದ ಸ್ಪೂರ್ತಿ ಹೊಂದಿದ! ಆರ್ಯರು ಹೊರಗಿನವರು; ದ್ರಾವಿಡರು ಬುಡಕಟ್ಟಿನವರು ಎಂದು ಬುಡಬುಡಿಕೆ ಬಾರಿಸುವುದಕ್ಕೆ ಸಾಧ್ಯವಾಗುತ್ತಿತ್ತೇನು?
ಪ್ರಪಂಚದ ಮೂಲಧರ್ಮ ಮತ್ತು ಒಂದು ಧರ್ಮಕ್ಕಿರಬೇಕಾದ ಎಲ್ಲಾ ಮಜಲುಗಳನ್ನು ಬಳಸಿಕೊಂಡು ಪರಿಪೂರ್ಣ ಧರ್ಮ, ಅತ್ಯಂತ ವೈಜ್ಞಾನಿಕವಾದ ಮತ್ತು ಆಧುನಿಕ ವಿಜ್ಞಾನದ ಸವಾಲುಗಳಿಗೆ ಧೈರ್ಯವಾಗಿ ಇಲ್ಲಿದೆ ನೀನು ಹುಡುಕುತ್ತಿರುವ ಬೆಳಕು, ತೆಗೆದುಕೋ ಎಂದು ಹೇಳುವ ಗುಂಡಿಗೆ ಇರುವ ಏಕಮಾತ್ರ ಧರ್ಮ ಸನಾತನಧರ್ಮ! ಇದು ಪಾಶ್ಚಾತ್ಯ ವಿಜ್ಞಾನಿಗಳು ಒಬ್ಬರ ವಿನಾಯಿತಿಯೂ ಇಲ್ಲದೆ ಎಲ್ಲರೂ ಒಕ್ಕೂರಲಿನಿಂದ ಕೂಗಿ ಹೇಳುತ್ತಿರುವ ಸತ್ಯ. ಐನ್ಸ್ಟೀನರ ನಂತರ ಅವರ ಪೀಠವನ್ನು ಅಲಂಕರಿಸಿದ, ಎಲ್ಲ ವಿಷಯದಲ್ಲೂ ಅವರಿಗೆ ಉತ್ತರಾಧಿಕಾರಿ ಎಂದು ಪರಿಗಣಿಸಲ್ಪಡಬಹುದಾದ ಯೋಗ್ಯತೆಯಿದ್ದ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ನೋಬೆಲ್ ವಿಜ್ಞಾನಿ ಜಾನ್ ವ್ಹೀಲರ್ ಹೇಳಿದ್ದನ್ನು ಕೇಳಿದರೆ ನಮ್ಮ ಟೀಕಾಕಾರರು ಬೆಚ್ಚಿಬಿದ್ದಾರು. ಅವರು ಹಿಂದುವೂ ಅಲ್ಲ, ಭಾರತೀಯನೂ ಅಲ್ಲ. ಐ ಠಿಜಜ್ಞಿk ಠಿಜಛಿ ಠಛಿಛ್ಟಿಠ ಟ್ಛ ಠಿಜಛಿ ಉಚಠಠಿ kಟಡಿ ಜಿಠಿ ಚ್ಝ್ಝ ಐ ಡಿಛಿ ಠಜಿಞಟ್ಝಢ ಠ್ಟಿಚ್ಞಠ್ಝಚಠಿಛಿ ಜ್ಞಿಠಿಟ ಟ್ಠ್ಟ ್ಝ್ಞ್ಠಜಛಿ ಡಿಜಚಠಿ ಠಿಜಛಿಢ ಜಚಡಛಿ ಜ್ಞಿ ಠಿಜಛಿಜ್ಟಿ’ಠ ಡಿಛಿ ಡಿಟ್ಠ್ಝ ಜಚಡಛಿ ಚ್ಞಠಡಿಛ್ಟಿಠ ್ಛ್ಟ ಚ್ಝ್ಝ ಟ್ಠ್ಟ ಟ್ಠಿಛಿಠಠಿಜಿಟ್ಞಠ. ಅರ್ಥಾತ್ ಭಾರತೀಯ ಋಷಿಗಳು ಎಲ್ಲವನ್ನೂ ತಿಳಿದಿದ್ದರು. ಅವರ ಜ್ಞಾನವನ್ನು ನಮ್ಮ ಭಾಷೆಗಳಿಗೆ ತರ್ಜುಮೆಮಾಡಿಬಿಟ್ಟರೆ ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರ ದೊರೆತಂತೆಯೇ! ಇದನ್ನು ಅವರು ಹೇಳಿದ್ದು ಉಪನಿಷತ್ತುಗಳನ್ನು ಕುರಿತು! ಅರ್ಥಾತ್ ಸನಾತನಧರ್ಮ ಯಾವ ತತ್ವಗಳನ್ನು ಆಧಾರವಾಗಿ ಹೊಂದಿದೆಯೋ ಅದನ್ನು ಕುರಿತು!
ಟೀಕಾಕಾರರ ನಿರಂತರ ಪ್ರಚಾರ ಏನೆಂದರೆ ಸನಾತನ ಧರ್ಮದಲ್ಲಿ ಅಸ್ಪಶ್ಯತೆ ಇದೆ, ಜಾತಿ ಪದ್ಧತಿ ಇದೆ! ಅಸಮಾನತೆ ಇದೆ ಬೇರಾವ ಧರ್ಮದಲ್ಲೂ ಇದು ಇಲ್ಲ ಎನ್ನುವುದು. ಇದಕ್ಕಿಂತಲೂ ಬಾಲಿಶ ಪ್ರಶ್ನೆ ಮತ್ತೊಂದಿರಲಾರದು ; ಜಗತ್ತಿನ ಯಾವುದೇ ಧರ್ಮದಲ್ಲಿ ಕಾಣದ ಅದ್ಭುತ ಪ್ರಜ್ಞೆ ಸನಾತನ ಧರ್ಮದಲ್ಲಿ ಇರುವುದನ್ನು ಇಲ್ಲಿಯವರೆಗೆ ಕಂಡಿದ್ದೇವೆ . ಅದು ಸತ್ಯಗಳನ್ನು ಹಲವು ವಿಧಗಳಾಗಿ ಯಾವತ್ತೋ ವಿಂಗಡಿಸಿಬಿಟ್ಟಿದೆ. ಸತ್ಯ ಎನ್ನುವುದಕ್ಕೆ ಶಂಕರಾಚಾರ್ಯರು ನೀಡಿರುವ ವ್ಯಾಖ್ಯೆಯಲ್ಲೇ ಇದಕ್ಕೆ ಉತ್ತರವಿದೆ. ಬದಲಾವಣೆಗಳನ್ನು ಹೊಂದುವ ಯಾವ ವಸ್ತುವೇ ಆಗಲಿ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ನಿಯಮಗಳಿಂದಲೇ ಬೇರೆ ಬೇರೆ ಶಿಸ್ತುಗಳಿಂದಲೇ ಪ್ರಗತಿಯನ್ನು ಸಾಧಿಸಬಲ್ಲದು. ಪುಟ್ಟ ಮಗುವಿಗೂ ಇಪ್ಪತೆôದರ ಯುವಕನಿಗೂ ಅನ್ವಯಿಸುವ ನಿಯಮಗಳು ಯಾವ ಕಾಲಕ್ಕೂ ಒಂದೇ ಇರಲಾರದು ಅತ್ಯಂತ ಮೂಲಭೂತವಾದ ಕೆಲವು ವಿಷಯಗಳನ್ನು ಬಿಟ್ಟರೆ. ಚಲನಶೀಲ ಸಮಾಜ ಎಂದಿಗೂ ಬದಲಾವಣೆಗಳ ಜನ್ಮಸ್ಥಾನವೇ. ಆದ್ದರಿಂದ ಸನಾತನ ಧರ್ಮದ ಗಂಭೀರ ಅನುಷ್ಠಾನ ನಡೆಯುವುದೇ ಸಮಾಜವನ್ನು ಬಿಟ್ಟುಹೋದ ವಾನಪ್ರಸ್ಥ ಮತ್ತು ಸನ್ಯಾಸಾಶ್ರಮಗಳಿಗೆ ಸೇರಿದ ಜನರಿಂದ. ಗೃಹಸ್ಥಾಶ್ರಮಿಯಾಗೇ ಅವುಗಳನ್ನು ಗಂಭೀರ ಅರ್ಥದಲ್ಲಿ ಅನುಸರಿಸಬೇಕೆಂದು ನಿರ್ಧರಿಸಿದ ಋಷಿಗಳು ಕಾಡಿನಲ್ಲಿ ವಾಸಿಸಿಬೇಕಾಯಿತು. ಗಂಭೀರಾರ್ಥದಲ್ಲಿ ಆಚರಿಸಹೊರಟ ಸಿದ್ದಾರ್ಥ, ಮುಂದೆ ಸಮಾಜ ಸೇವೆಯನ್ನೇ ತನ್ನ ಶಿಷ್ಯರಿಗೆ ಪ್ರಧಾನ ವೃತ್ತವನ್ನಾಗಿಸಿದ. ಸಿದ್ದಾರ್ಥ ಆ ಸತ್ಯಗಳನ್ನು ಅನುಭವಿಸಲು ಮನೆ, ಹೆಂಡತಿ ಮಕ್ಕಳನ್ನು ಬಿಟ್ಟು ಕಾಡಿಗೆ ಹೋಗಲೇಬೇಕಾಯ್ತು! ಈ ಮಾತುಗಳ ಅರ್ಥವೇನು? ಸಮಾಜದ ಒಳಿತಿಗಾಗಿ ಬೇರೆಯೇ ಚೌಕಟ್ಟು ಇದೆ! ಅಸ್ಪೃ್ಯತೆ, ಸಮಾನತೆ ಇತ್ಯಾದಿಗಳೆಲ್ಲ ಸಾಮಾಜಿಕ ಆರ್ಥಿಕ ಆಯಾಮಗಳನ್ನು ಹೊಂದಿರತಕ್ಕದ್ದು ಇವುಗಳನ್ನು ನಿರ್ಧರಿಸುವವನು ರಾಜ. ಇಲ್ಲದಿದ್ದಲ್ಲಿ ರಾಜನೇ ಆಗಿದ್ದ ಸಿದ್ಧಾರ್ಥ ಸಂನ್ಯಾಸಿ ಏಕಾದ!
ಟೀಕಾಕಾರರಿಗೆ ನನ್ನ ಉತ್ತರ ಹೀಗೆ. ದಕ್ಷಿಣ ಆಫ್ರಿಕಾದಲ್ಲಿ ಮತ್ತು ಯುರೋಪಿನಲ್ಲಿ ಸಹಸ್ರಮಾನಗಳ ಕಾಲದಷ್ಟು ಪ್ರಚಾರವಿದ್ದ ವರ್ಣನೀತಿ ಅಥವಾ ನೀಗ್ರೋ ಸಮಸ್ಯೆಗೆ ಬೈಬಲ್ ಅಥವಾ ಕ್ರಿಶ್ಚಿಯನ್ ಧರ್ಮ ಕಾರಣವೇ? ಹಾಗಿಲ್ಲದಿದ್ದಲ್ಲಿ ಸನಾತನ ಧರ್ಮಕ್ಕೂ ಭಾರತೀಯ ಸಾಮಾಜಿಕ ಏರುಪೇರುಗಳಿಗೂ ಇಲ್ಲಿಯ ಧರ್ಮ ಹೇಗೆ ಕಾರಣವಾದೀತು? ಯುರೋಪಿಯನ್ನರ ಚಿಂತನೆಗಳಿಗೆ ನಮ್ಮ ಮೆದುಳುಗಳನ್ನು ಒತ್ತೆಯಿಟ್ಟುಬಿಡುವುದೆಂದರೆ ಹೀಗೆಯೇ ತಾನೆ?
ಯಾವ ಧರ್ಮ ಏಕತ್ವವನ್ನೇ - ಎರಡಿಲ್ಲದ ಅದ್ವೈತವನ್ನೇ- ಉಸಿರಾಡಿಕೊಂಡಿದೆಯೋ ಇಲ್ಲಿ ನಾನಾತ್ವ ಕಿಂಚಿತ್ತೂ ಇಲ್ಲ , ನಾನಾತ್ವವನ್ನು ಕಂಡವನು ಮೃತ್ಯುವಿನಿಂದ ಮೃತ್ಯುವಿಗೆ ಚಲಿಸುತ್ತಿರುತ್ತಾನೆ ಎಂದು ಘಂಟಾಘೊಷವಾಗಿ ಸಾರಿದೆಯೋ ಅದು ಯಾವ ರೀತಿಯ ತಾರತಮ್ಯವನ್ನೂ ಪೋಷಿಸಲಾರದು.
ಮನಸವ್ಯೇದ ಮಾಪ್ತವ್ಯಂ ನೇಹ ನಾನಾಸ್ತಿ ಕಿಂಚನ |
ಮೃತ್ಯೋಃ ಸ ಮೃತ್ಯುಂ ಗಚ್ಛತಿ ಯ ಇಹ ನಾನೇವ ಪಶ್ಯತಿ||
-ಕಠೋಪನಿಷತ್
ಇದರರ್ಥ ಪ್ರಸ್ತುತ ಸಾಮಾಜಿಕ ದೋಷಗಳು ಮುಂದುವರೆಯಲಿ ಎಂದಲ್ಲ. ಅವುಗಳನ್ನೆಲ್ಲಾ ಕಟ್ಟುನಿಟ್ಟಾದ ಶಾಸನದ ಮೂಲಕ, ವಿವೇಕಯುತವಾದ ನೀತಿಗಳ ಮೂಲಕ(ಕಟ್ಝಜ್ಚಿಢ)ತ್ವರಿತಗತಿಯಲ್ಲಿ ನಿಮೂಲನೆ ಮಾಡಬೇಕು. ತಾತ್ಪರ್ಯವೇನೆಂದರೆ ಸತ್ಯವನ್ನು ಗ್ರಹಿಸುವುದನ್ನು ಕಲಿಯಬೇಕು. ನಿರ್ಭಿಡೆಯಿಂದ ಸತ್ಯಕ್ಕೆ ವಿರೋಧವಾದ್ದನ್ನು ತ್ಯಜಿಸಬೇಕು. ಪೂರ್ವಾಗ್ರಹಗಳು ಯಾವ ಕಾಲಕ್ಕೂ ಸಲ್ಲದು. ಅದು ವಿದ್ಯಾವಂತನ ಲಕ್ಷಣವೇ ಅಲ, ಸನಾತನ ಧರ್ಮ ಹತ್ತು ಕಡೆ ಹೇಳುತ್ತದೆ ನಮ್ಮನ್ನು ಪರೀಕ್ಷಿಸಿ ಎಂದು. ಆದ್ದರಿಂದಲೇ ವಿಜ್ಞಾನವೂ ಅದರ ಮುಂದೆ ತಲೆಬಗ್ಗಿಸಿದೆ. ಯಾವುದೋ ದೋಷಕ್ಕೆ ಯಾವುದನ್ನೋ ಹೊರೆಯಾಗಿಸಬಾರದು ! ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ನೀಡುವುದೇ?
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)