‘ಭೂಮಿಯ ಮೇಲಿನ ಅತಿ ದೊಡ್ಡ ಹೂಡಿಕೆ ಭೂಮಿಯೇ ಆಗಿದೆ’. ಈ ಮಾತನ್ನು ಹೇಳಿದವರು ಹೆಸರಾಂತ ರಿಯಲ್ ಎಸ್ಟೇಟ್ ಹೂಡಿಕೆದಾರ ಲೂಯಿಸ್ ಗ್ಲಿಕ್ವ್ಯಾನ್. ‘ರಿಯಲ್ ಎಸ್ಟೇಟ್ ಖರೀದಿಗಾಗಿ ಕಾಯಬೇಡಿ, ರಿಯಲ್ ಎಸ್ಟೇಟ್ ಖರೀದಿಸಿ ಕಾಯಿರಿ’ ಪ್ರಭಾವಿ ಹೂಡಿಕೆ ಸಲಹೆಗಾರ ರಾಬರ್ಟ್ ಜಿ. ಅಲ್ಲೆನ್ರ ಸಲಹೆ ಇದು. ‘ಭೂಮಿಯನ್ನು ಖರೀದಿಸಿ ಯಾಕಂದ್ರೆ ಅದನ್ನು ಯಾರೂ ಉತ್ಪಾದಿಸುತ್ತಿಲ್ಲ’ ರಿಯಲ್ ಎಸ್ಟೇಟ್ ಬಗ್ಗೆ ಅಮೆರಿಕದ ಉದ್ಯಮಿ ಮಾರ್ಕ್ ಟ್ವೇನ್ನ ಅಭಿಪ್ರಾಯವಿದು. ಹೌದು ರಿಯಲ್ ಎಸ್ಟೇಟ್ ಒಂದು ರೀತಿಯ ಆಲ್ ಟೈಂ ಬೆಸ್ಟ್ ಇನ್ವೆಸ್ಟ್ಮೆಂಟ್. ದೀರ್ಘಾವಧಿಯಲ್ಲಿ ಉತ್ತಮ ಲಾಭ ಕೊಡುವ ಹೂಡಿಕೆ ಅಂದ್ರೆ ಅದು ರಿಯಲ್ ಎಸ್ಟೇಟ್. ರಿಯಲ್ ಎಸ್ಟೇಟ್ ಹೂಡಿಕೆಯನ್ನು ಅರಿತು ಮಾಡುವುದು ಬಹಳ ಮುಖ್ಯ. ಈ ಅರಿವು ನಿಮಗೆ ಬರಬೇಕು ಅಂದ್ರೆ ರಿಯಲ್ ಎಸ್ಟೇಟ್ ಬಗ್ಗೆ ಕಲಿಯಬೇಕು.
ರಿಯಲ್ ಎಸ್ಟೇಟ್ನಲ್ಲಿ ಮೋಸ ಹೋಗಬೇಡಿ: ನನ್ನ ಸಂಬಂಧಿಕರೊಬ್ಬರು ಪಟ್ಟಣವೊಂದರಲ್ಲಿ 5 ಲಕ್ಷ ಕೊಟ್ಟು ಸೈಟ್ ಖರೀದಿಸಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದರು. ಆ ಸೈಟ್ ಅನ್ನು ಕ್ರಮೇಣ 10 ಲಕ್ಷ ರೂ.ಗೆ ಮತ್ತೊಬ್ಬರಿಗೆ ಮಾರಾಟ ಮಾಡಿದರು. ಆದ್ರೆ ಅಸಲಿ ಸ್ಟೋರಿ ಏನು ಗೊತ್ತಾ? ಆ ಸೈಟ್ ವಾಸ್ತವದಲ್ಲಿ ಇರಲೇ ಇಲ್ಲ. ಎರಡು ಬಾರಿ ಕೂಡ ಸಬ್ ರಿಜಿಸ್ಟ್ರಾರ್ ಕಚೇರಿಯವರು ಹಣ ಪಡೆದು ನೋಂದಣಿ ಮಾಡಿಸಿದ್ದರು. ಆದರೆ ನಿರ್ದಿಷ್ಟ ಜಾಗದಲ್ಲಿ ಮತ್ಯಾರೋ ಸೈಟ್ ನಮ್ಮದು ಅಂತ ಮನೆ ಕಟ್ಟಿದ್ದರು. ಹೀಗೆ ಆಗಬಾರದು ಅಂದ್ರೆ ರಿಯಲ್ ಎಸ್ಟೇಟ್ನಲ್ಲಿ ಅರಿತು ಹೂಡಿಕೆ ಮಾಡುವುದು ಮುಖ್ಯ. ಇಲ್ಲದಿದ್ರೆ ಮಕ್ಮಲ್ ಟೋಪಿ ಬೀಳೋದು ಗ್ಯಾರಂಟಿ.
ಏನಿದು ರಿಯಲ್ ಎಸ್ಟೇಟ್ ಹೂಡಿಕೆ?: ಆದಾಯ ಗಳಿಸುವ ಉದ್ದೇಶದಿಂದ ಆಸ್ತಿ ಖರೀದಿಸುವ ಪ್ರಕ್ರಿಯೆಯನ್ನು ರಿಯಲ್ ಎಸ್ಟೇಟ್ ಹೂಡಿಕೆ ಎಂದು ಕರೆಯಬಹುದು. ಮನೆ, ಸೈಟ್, ವಾಣಿಜ್ಯ ಕಟ್ಟಡ, ಕೃಷಿ ಭೂಮಿ, ವಾಣಿಜ್ಯ ಭೂಮಿ ಇವು ರಿಯಲ್ ಎಸ್ಟೇಟ್ ಹೂಡಿಕೆಗಳಿಗೆ ಕೆಲವು ಉತ್ತಮ ಉದಾಹರಣೆಗಳು.
ರಿಯಲ್ ಎಸ್ಟೇಟ್ ಹೂಡಿಕೆ ಯಾಕೆ?: ಭೂಮಿಯ ಲಭ್ಯತೆಗೂ ಒಂದು ಮಿತಿ ಇರುವ ಕಾರಣ ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ದಿಢೀರ್ ಕುಸಿತದ ಸಾಧ್ಯತೆ ಇಲ್ಲ. ರಿಯಲ್ ಎಸ್ಟೇಟ್ನಿಂದ ಪರ್ಯಾಯ ಆದಾಯ ಸಾಧ್ಯ. ಈ ಹೂಡಿಕೆ ಸರಳವಾಗಿದ್ದು ಹೂಡಿಕೆ ವೈವಿಧ್ಯತೆಗೆ ಅವಕಾಶವಿದೆ. ರಿಯಲ್ ಎಸ್ಟೇಟ್ನಲ್ಲಿ ಬಾಡಿಗೆ ಆದಾಯ ಜತೆಗೆ ಭೂಮಿ ಮೌಲ್ಯವರ್ಧನೆ ಆದಾಯವೂ ಸಿಗುತ್ತದೆ. ದೀರ್ಘಾವಧಿಯಲ್ಲಿ ಷೇರು ಮಾರುಕಟ್ಟೆ ಹೂಡಿಕೆಗಿಂತ ಹೆಚ್ಚು ಲಾಭ ಸಾಧ್ಯವಿದೆ.
ವಿವಿಧ ರೀತಿಯ ರಿಯಲ್ ಎಸ್ಟೇಟ್ ಭೂಮಿಗಳು: ರಿಯಲ್ ಎಸ್ಟೇಟ್ನಲ್ಲಿ ಹತ್ತಾರು ಬಗೆಯ ಭೂಮಿಗಳಿರುತ್ತವೆ. ಯಾವ ಭೂಮಿಯನ್ನು ಯಾವ ಕಾನೂನಿನ ಚೌಕಟ್ಟಿನಲ್ಲಿ ಖರೀದಿಸಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕಾರ್ಪೆರೇಷನ್ ಲಿಮಿಟ್, ಮುನಿಸಿಪಾಲಿಟಿ, ಗ್ರಾಮ ಪಂಚಾಯತ್, ಡಿಸಿ ಕನ್ವರ್ಷನ್, ಎ ಖಾತೆ, ಬಿ ಖಾತೆ, ರೆವಿನ್ಯೂ ಲ್ಯಾಂಡ್, ಅರಣ್ಯ ಭೂಮಿ, ಸರ್ಕಾರಿ ಭೂಮಿ ಹೀಗೆ ಅನೇಕ ಮಾದರಿಗಳಿವೆ. ಅವುಗಳ ಬಗ್ಗೆ ಸರಿಯಾಗಿ ಅರಿತು ಮುನ್ನಡೆಯಬೇಕು.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ರಿಯಲ್ ಎಸ್ಟೇಟ್ ಕೋರ್ಸ್: ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವಾಗ ಯಾವ ರೀತಿಯ ಆಸ್ತಿ ಖರೀದಿಸಬೇಕು, ಕೃಷಿ ಭೂಮಿ ಖರೀದಿಸಿದ್ರೆ ಒಳ್ಳೆಯದಾ ಇಲ್ಲ ಸೈಟ್ ತಗೊಂಡು ಮನೆ ಕಟ್ಟಬೇಕಾ, ಅಪಾರ್ಟ್ವೆುಂಟ್ ಖರೀದಿಸೋದ್ರಿಂದ ನಿಜಕ್ಕೂ ಲಾಭವಿದೆಯಾ, ವಾಣಿಜ್ಯ ಕಟ್ಟಡ ಸೈಟ್ ಖರೀದಿಗೂ ಮುನ್ನ ಗಮನಿಸಬೇಕಾದ ಅಂಶಗಳೇನು, ಆಸ್ತಿ ಖರೀದಿಸುವಾಗ ಯಾವೆಲ್ಲಾ ದಾಖಲೆಗಳನ್ನು ನೋಡಿಕೊಳ್ಳಬೇಕು, ರಿಯಲ್ ಎಸ್ಟೇಟ್ ಹೂಡಿಕೆಗೆ ಹಣ ಹೊಂದಿಸೋದು ಹೇಗೆ, ಹೀಗೆ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನೂ ಕಾಡುತ್ತಿರಬಹುದು. ಅವೆಲ್ಲದಕ್ಕೂ ಉತ್ತರ ರೂಪದಲ್ಲಿ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ರಿಯಲ್ ಎಸ್ಟೇಟ್ ಕೋರ್ಸ್ ರೂಪಿಸಲಾಗಿದೆ. ಸಾಕಷ್ಟು ಅಧ್ಯಯನ ಮಾಡಿ, ತಜ್ಞರ ನೆರವು ಪಡೆದು ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ ರಿಯಲ್ ಎಸ್ಟೇಟ್ ಹೂಡಿಕೆಯ ಬಗ್ಗೆ ಪಕ್ಕಾ ಮಾಹಿತಿ ಪಡೆದು ಮುನ್ನಡೆಯಿರಿ.
ರಿಯಲ್ ಎಸ್ಟೇಟ್ ಖರೀದಿಗೂ ಮುನ್ನ ಸಾಕಷ್ಟು ಅಧ್ಯಯನ ಮಾಡಿಕೊಂಡು ಮುನ್ನಡೆಯಬೇಕು. ಉತ್ತಮ ರಿಯಲ್ ಎಸ್ಟೇಟ್ ಖರೀದಿಗೆ ಈ ಅಂಶಗಳ ಚೆಕ್ ಲಿಸ್ಟ್ ನೋಡಿಕೊಳ್ಳಿ.