ವೈಭವ್ ಸೂರ್ಯವಂಶಿ ಜೆರ್ಸಿ ಧರಿಸಿ ವರ್ಕೌಟ್​ ಮಾಡಿದ ಡ್ರೂ ಮ್ಯಾಕ್‌ಇಂಟೈರ್ 
IPL

WWE ನಲ್ಲಿ IPL ಕ್ರೇಜ್: ವೈಭವ್ ಸೂರ್ಯವಂಶಿ ಜೆರ್ಸಿ ಧರಿಸಿ ವರ್ಕೌಟ್​ ಮಾಡಿದ ಡ್ರೂ ಮ್ಯಾಕ್‌ಇಂಟೈರ್; ವಿಡಿಯೋ ವೈರಲ್​! Drew McIntyre on Vaibhav Suryavanshi

ಇನ್​ಸ್ಟಾಗ್ರಾಮ್​: ಈ ಭಾರಿಯ ಐಪಿಎಲ್​ನಲ್ಲಿ ಯಾರ ಹೆಸರು ಅತಿಹೆಚ್ಚು ಸೌಂಡ್​ ಮಾಡಿದೆ ಎಂದರೆ ಅದು ಖಂಡಿತವಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರದ್ದು ಎಂದರೆ ತಪ್ಪಾಗದು.
ಮೈದಾನದಲ್ಲಿ ತಮ್ಮ ಬ್ಯಾಟಿಂಗ್ ಚತುರತೆಯಿಂದ ಎಲ್ಲರ ಗಮನ ಸೆಳೆದಿದ್ದ ಈ ಯುವ ಆಟಗಾರ, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹ ಟ್ರೆಂಡ್ ಆಗುತ್ತಿದ್ದು, WWE ಸೂಪರ್‌ಸ್ಟಾರ್ ಒಬ್ಬರು ವೈಭವ್ ಸೂರ್ಯವಂಶಿ ಹೆಸರಿನ ಜರ್ಸಿ ಧರಿಸಿರುವ ವಿಡಿಯೋ ವೈರಲ್​ ಆಗುತ್ತಿದೆ.

ರಾಜಸ್ಥಾನ್ ಜೆರ್ಸಿ ಧರಿಸಿ ಡ್ರೂ ಮ್ಯಾಕ್‌ಇಂಟೈರ್ ವರ್ಕೌಟ್​!

ಮಾಜಿ ವರ್ಲ್ಡ್ ಹೆವಿವೇಯ್ಟ್ ಚಾಂಪಿಯನ್ ಡ್ರೂ ಮ್ಯಾಕ್‌ಇಂಟೈರ್ (Drew McIntyre on Vaibhav Suryavanshi) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದರು.
ವಿಡಿಯೋದಲ್ಲಿ ಅವರು ಕಠಿಣವಾದ ವರ್ಕೌಟ್ ಮಾಡುತ್ತಿದ್ದು, ಈ ಕಸರತ್ತಿನಲ್ಲಿ ತೊಡಗಿರುವ ಮ್ಯಾಕ್‌ಇಂಟೈರ್ ಧರಿಸಿರುವ ರಾಜಸ್ಥಾನ್ ರಾಯಲ್ಸ್​ನ ವೈಭವ್ ಸೂರ್ಯವಂಶಿ ಹೆಸರು ಎಲ್ಲರ ಕಣ್ಣನ್ನು ಕುಕ್ಕಿದೆ ಎಂದತೆ ಸುಳ್ಳಲ್ಲ. ಅಷ್ಟೇ ಅಲ್ಲದೆ ಮ್ಯಾಕ್‌ಇಂಟೈರ್, ಆ ವಿಡಿಯೋಗೆ ಕೆಳಗೆ ದ ಚೋಸನ್ ವನ್ ಎಂದು ಬರೆದುಕೊಂಡಿದ್ದು, ಜನ ಇದು ವೈಭವ್ ಸೂರ್ಯವಂಶಿಗೆ ಮ್ಯಾಕ್‌ಇಂಟೈರ್ ಸೂಚಿಸಿರುವ ಹಾರೈಕೆ ಬೆಂಬಲ ಎಂದು ಹೇಳುತ್ತಿದ್ದಾರೆ.

ಗೇಮ್‌ನಲ್ಲಿ ನಿನ್ನದೇ ಫಿನಿಶಿಂಗ್ ಕಿಕ್ ಹೊಡೆದಿದ್ದೆ: ರಿಯಾನ್ ಪರಾಗ್

WWE ಸೂಪರ್‌ಸ್ಟಾರ್‌ನ ಈ ಪೋಸ್ಟ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರ ಗಮನ ಸೆಳೆಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಜಾಗತಿಕ ಕುಸ್ತಿ ವೇದಿಕೆಯ ಸ್ಟಾರ್ ಒಬ್ಬರು ತನ್ನ ತಂಡದ ಆಟಗಾರನ ಬಗ್ಗೆ ಪೋಸ್ಟ್ ಮಾಡಿರುವುದನ್ನು ನೋಡಿ ಪರಾಗ್ ಸಂಪೂರ್ಣ ಶಾಕ್ ಆಗಿದ್ದಾರೆ.
ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತಾ ಆ ಪೋಸ್ಟ್‌ನ ಕೆಳಗೆ ಕಮೆಂಟ್ ಮಾಡಿರುವ ರಿಯಾನ್ ಪರಾಗ್, "OMG... ನಾನು ವಿಡಿಯೋ ಗೇಮ್‌ನಲ್ಲಿ ನಿಮ್ಮ ಟ್ರೇಡ್‌ಮಾರ್ಕ್ ಫಿನಿಶಿಂಗ್ ಮೂವ್ ಆದ ಫ್ಯೂಚರ್ ಶಾಕ್ ಡಿಡಿಟಿ (Future Shock DDT) ಅನ್ನು ಎಷ್ಟು ಬಾರಿ ಹೊಡೆದಿದ್ದೇನೋ ನನಗೇ ನೆನಪಿಲ್ಲ! ಎಂದು ಬರೆದುಕೊಂಡಿದ್ದಾರೆ.
ಇನ್ನು ಇದೇ ಸಂದರ್ಭವನ್ನು ಬಳಸಿಕೊಂಡ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್, ಡ್ರೂ ಮ್ಯಾಕ್‌ಇಂಟೈರ್ ಹೇಳಿಕೆಗೆ ಡೆಫಿನೆಟ್ಲಿ (Definitely) ಎಂದು ಕಮೆಂಟ್ ಮಾಡಿ ತಮ್ಮ ಯುವ ಆಟಗಾರನಿಗೆ ಬೆಂಬಲ ಸೂಚಿಸಿದೆ.

ನಾಕೌಟ್ ಪಂದ್ಯದ ಮೇಲೆ ವೈಭವ್ ಕಣ್ಣು!

ಈ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಕಳೆದ ಗುಂಪು ಹಂತದ ಪಂದ್ಯದಲ್ಲಿ ಆದ ಸಣ್ಣ ತಾಂತ್ರಿಕ ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಲು ಅವರು ಸಜ್ಜಾಗಿದ್ದಾರೆ.
ಬುಧವಾರ (ಮೇ.27) ರಾತ್ರಿ ನಡೆಯಲಿರುವ ಹೈದರಾಬಾದ್ ವಿರುದ್ಧದ ಹೈ-ವೋಲ್ಟೇಜ್ ಎಲಿಮಿನೇಷನ್ ಪಂದ್ಯವು ಮಾಡು ಇಲ್ಲವೆ ಮಡಿ ಸ್ಥಿತಿಯದ್ದಾಗಿದ್ದು, ಇಲ್ಲಿ ಯಾವುದೇ ತಪ್ಪುಗಳಿಗೆ ಅವಕಾಶವಿಲ್ಲ. ಜಾಗತಿಕ ಸೂಪರ್‌ಸ್ಟಾರ್‌ನಿಂದಲೇ ಆಶೀರ್ವಾದ ಪಡೆದಿರುವ ವೈಭವ್, ಬುಧವಾರದ ಪಂದ್ಯದಲ್ಲಿ ಹೈದರಾಬಾದ್ ಬೌಲರ್‌ಗಳನ್ನು ಧೂಳೀಪಟ ಮಾಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ, (ಏಜನ್ಸೀಸ್).