ಕಾಲೇಜು ಸಮಾರಂಭದಲ್ಲಿ ನೃತ್ಯ ಮಾಡುವಾಗ ಟಾಪ್​ ತೆಗೆದ ವಿದ್ಯಾರ್ಥಿನಿ; ಇದು ಅಶ್ಲೀಲತೆಯ ಮಿತಿ ಎಂದ ನೆಟ್ಟಿಗರು | Viral Video

Untitled design - 2024-11-19T142751.381
Published on

ಲಖನೌ: ಭಾರತದಲ್ಲಿ ಅನೇಕ ಖಾಸಗಿ ವಿಶ್ವವಿದ್ಯಾಲಯಗಳಿವೆ, ಅದರಲ್ಲಿ ಒಂದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಪ್ರತಿದಿನ ಈ ಸಂಸ್ಥೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ಜನರ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಈ ಸಂಸ್ಥೆಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral Video) ಆಗುತ್ತಿದೆ. ಅದರಲ್ಲಿ ಹುಡುಗಿಯೊಬ್ಬಳು ಕಾಲೇಜು ಸಮಾರಂಭದಲ್ಲಿ ವೇದಿಕೆಯ ಮೇಲೆ ಡ್ಯಾನ್ಸ್​ ಮಾಡುವಾಗ ತನ್ನ ಟಿಶರ್ಟ್​​ ಅನ್ನು ತೆಗೆದಿದ್ದಾಳೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿದ್ಯಾರ್ಥಿನಿಯೊಬ್ಬಳು ನೃತ್ಯ ಮಾಡಲು ವೇದಿಕೆಯ ಮೇಲೆ ಬರುವುದನ್ನು ಕಾಣಬಹುದು. ಅವಳು ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಾ ತನ್ನ ಟಿಶರ್ಟ್​ ಅನ್ನು ತೆಗೆದಿದ್ದಾಳೆ. ವಿಡಿಯೋ ನೋಡಿದವರು ಇದು ಅಶ್ಲೀಲತೆ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದ್ದಾರೆ.

ವಿಡಿಯೋವನ್ನು ಇಲ್ಲಿಯವರೆಗೂ 88 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಅನೇಕರು ಕಾಮೆಂಟ್​ ಮಾಡಿದ್ದಾರೆ. ಈ ಕ್ಯಾಂಪಸ್‌ನ ಸಂಸ್ಕೃತಿ ತುಂಬಾ ಕೆಟ್ಟದಾಗಿದೆ, ಶಿಕ್ಷಣದ ಹೆಸರಲ್ಲಿ ಈ ಜನ ಅಶ್ಲೀಲತೆಯ ಗುಹೆ ತೆರೆದಿದ್ದಾರೆ, ಹುಡುಗಿಯ ವಿಡಿಯೋ ಶೇರ್ ಮಾಡುವ ಮುನ್ನ, ಫೋಟೋ ಬ್ಲರ್ ಮಾಡಿ, ಅಸಾಧಾರಣ ನೃತ್ಯಗಾರ್ತಿ ಮತ್ತು ಉತ್ತಮ ಸಮಯವನ್ನು ಕಳೆಯುತ್ತಿದ್ದೇನೆ, ನೀವು ಕೇವಲ ಅಸೂಯೆ ಹೊಂದಿದ್ದೀರಿ ಎಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net