ಅಪ್ಪ-ಮಗಳಾಗ್ತಾರಾ ಅಮಿತಾಭ್-ಕತ್ರೀನಾ?: ‘ಸೂಪರ್ 30’ ನಿರ್ದೇಶಕನ ‘ಡೆಡ್ಲಿ’ ಕಾಂಬಿನೇಷನ್ ಚಿತ್ರ

Amitabh and Katrina 24 MAR 20
Published on

ಮುಂಬೈ: ಅಮಿತಾಭ್ ಬಚ್ಚನ್ ಮತ್ತು ಕತ್ರೀನಾ ಕೈಫ್ ಇದುವರೆಗೂ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಬೂಮ್’, ‘ಸರ್ಕಾರ್’, ‘ಥಗ್ಸ್ ಆಫ್ ಹಿಂದೋಸ್ಥಾನ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಹೊಸ ಚಿತ್ರವೊಂದರಲ್ಲಿ ಬಿಗ್ ಬಿ ಮತ್ತು ಕತ್ರೀನಾ, ಅಪ್ಪ-ಮಗಳಾಗಿ ನಟಿಸುತ್ತಿರುವ ಸುದ್ದಿ ಬಂದಿದೆ.

ಹೌದು, ‘ಸೂಪರ್ 30’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿಕಾಸ್ ಬಹ್ಲ್ ಹೊಸ ಚಿತ್ರವೊಂದರ ನಿರ್ದೇಶನಕ್ಕೆ ಕೈ ಹಾಕಿದ್ದು, ಅದರಲ್ಲಿ ಅಮಿತಾಭ್ ಮತ್ತು ಕತ್ರೀನಾ ನಟಿಸುವ ಸಾಧ್ಯತೆ ಇದೆ. ಈಗಾಗಲೇ ವಿಕಾಸ್, ಅವರಿಬ್ಬರೊಂದಿಗೂ ಮಾತನಾಡಿದ್ದಾರಂತೆ. ಕಥೆ ಕೇಳಿ ಥ್ರಿಲ್ ಆಗಿರುವ ಕತ್ರೀನಾ, ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದು, ಇನ್ನು ಅಮಿತಾಭ್ ಬಚ್ಚನ್ ಓಕೆ ಎಂದು ಹೇಳುವುದಷ್ಟೇ ಬಾಕಿ ಇದೆ. ಅಮಿತಾಭ್ ಸಹ ಕಥೆ ಕೇಳಿ ಚಿತ್ರದಲ್ಲಿ ನಟಿಸುವುದಕ್ಕೆ ಉತ್ಸುಕರಾಗಿದ್ದು, ಒಂದು ಪಕ್ಷ ಓಕೆ ಎಂದರೆ, ಚಿತ್ರ ಜೂನ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ, ಈ ಚಿತ್ರಕ್ಕೆ ಸದ್ಯಕ್ಕೆ ‘ಡೆಡ್ಲಿ’ ಎಂದು ಕರೆಯಲಾಗುತ್ತಿದೆ. ಇದೇನು ಆ್ಯಕ್ಷನ್, ಥ್ರಿಲ್ಲರ್ ಚಿತ್ರ ಇರಬಹುದಾ ಎಂಬ ಗುಮಾನಿ ಬರಬಹುದು. ಹಾಗೇನಿಲ್ಲ, ಇದೊಂದು ಅಂತ್ಯಸಂಸ್ಕಾರದ ಕುರಿತಾದಂತ ಕಾಮಿಡಿ ಚಿತ್ರವಂತೆ. ಅಂತ್ಯಸಂಸ್ಕಾರದ ಸುತ್ತ ಸುತ್ತುವ ಕಥೆಯಾದ್ದರಿಂದ, ಚಿತ್ರಕ್ಕೆ ‘ಡೆಡ್ಲಿ’ ಎಂಬ ಹೆಸರನ್ನು ಇಡಲಾಗಿದೆ. ಈ ಹೆಸರು ಮುಂದೆ ಬದಲಾದರೂ ಆಗಬಹುದು. ಸದ್ಯಕ್ಕೆ ಎಲ್ಲವೂ ಮಾತುಕಥೆಯ ಹಂತದಲ್ಲಿರುವುದರಿಂದ, ಮುಂದಿನ ದಿನಗಳಲ್ಲಿ ಎಲ್ಲವೂ ಪಕ್ಕಾ ಆಗಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net