ಕರೊನಾ ಬೆನ್ನು ಬಿಡಲೇ ಇಲ್ಲ ... ‘ಬ್ರೇಕಿಂಗ್ ನ್ಯೂಸ್’ ಕೊಟ್ಟ ಅಮಿತಾಭ್

Amitabh Final
Published on

ಅಮಿತಾಭ್ ಬಚ್ಚನ್ ತಮ್ಮ ಹಾಸ್ಯಮಯ ಟ್ವೀಟ್‌ಗಳಿಗೆ ಬಹಳ´ಫೇಮಸ್. ಅವರು ತಮ್ಮ ಟ್ವೀಟ್‌ಗಳ ಮೂಲಕ ಜನರನ್ನು ನಗಿಸುವುದಕ್ಕೆ ಪ್ರಯತ್ನಿಸುತ್ತಲೇ ಇರುತ್ತಾರೆ. ಈ ಬಾರಿ ಮತ್ತೊಮ್ಮೆ ಅಂಥದ್ದೊಂದು ಪ್ರಯತ್ನವನ್ನು ಮಾಡಿರುವುದಷ್ಟೇ ಅಲ್ಲ, ಈ ವಾರಿ ಸಾಕಷ್ಟು ಟೀಕೆಗಳಿಗೆ ಅವರು ಒಳಗಾಗಿದ್ದಾರೆ.

ಇಷ್ಟಕ್ಕೂ ಆಗಿದ್ದೇನೆಂದರೆ, ಮುಂಬೈನಲ್ಲಿ ‘ಜಲ್ಸಾ’ ಎಂಬ ಅಮಿತಾಭ್ ಅವರ ಬಂಗಲೆ ಇದೆಯಲ್ಲಾ, ಬಂಗಲೆಯ ಮೂರನೆಯ ಮಹಡಿಯಲ್ಲಿರುವ ಅವರ ಕೋಣೆಯೊಳಗೆ ಒಂದು ಬಾವಲಿ ಹೊಕ್ಕುಬಿಟ್ಟಿದೆ. ಅದನ್ನು ಹೊರಗೆ ಓಡಿಸುವುದಕ್ಕೆ ಅವರಿಗೆ ಸುಸ್ತಾಯಿತಂತೆ. ಕೊನೆಗೂ ಬಾವಲಿ ಹೇಗೋ ಹಾರಿ ಹೋಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಬ್ರೇಕಿಂಗ್ ನ್ಯೂಸ್ ... ನನ್ನ ರೂಮೊಳಗೆ ಒಂದು ಬಾವಲಿ ಬಂದಿತ್ತು. ಬಹಳ ಕಷ್ಟಪಟ್ಟು ಅದನ್ನು ಹೊರಗೆ ಓಡಿಸಿದೆ. ಕರೊನಾ ಬೆನ್ನು ಬಿಡ್ತಲೇ ಇಲ್ಲ ...’ ಎಂದು ನಗೆಚಟಾಕಿ ಹಾರಿಸಿದ್ದರು. ಆದರೆ, ಅವರ ಟ್ವೀಟು ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಬಾವಲಿಯನ್ನು ಕರೊನಾಗೆ ಹೋಲಿಸಿರುವುದರ ಬಗ್ಗೆ ಹಲವರು ಕಿಡಿಕಾರಿದ್ದಾರೆ. ಅಮಿತಾಭ್‌ರಂತಹ ಹಿರಿಯ ವ್ಯಕ್ತಿಗಳಿಂದ ಅಂಥದ್ದು ನಿರೀಕ್ಷಿಸಿರಲಿಲ್ಲ, ಬಾವಲಿಯನ್ನು ಕರೊನಾಗೆ ಹೋಲಿಸಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರೊನಾಗೆ ಎಂಬ ವೈರಸ್‌ಗೆ ಮೂಲ ಬಾವಲಿ ಎಂದು ಈಗಾಗಲೇ ಜಗತ್ತಿನಾದ್ಯಂತ ಸುದ್ದಿಯಾಗಿದೆ. ಹಾಗಾಗಿ, ಬಾವಲಿಯೊಂದು ತಮ್ಮ ಕೋಣೆಗೆ ಬಂದಾಗ, ಅದನ್ನು ಕರೊನಾ ಎಂದು ಕರೆದಿದ್ದಾರೆ ಅಮಿತಾಭ್. ಅದು ಈ ಮಟ್ಟಿಗೆ ಸುದ್ದಿಯಾಗುತ್ತದೆ ಎಂದು ಅವರು ನಿರೀಕ್ಷಿಸಿರಲಿಲ್ಲವೇನೋ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net