ಐಶ್ವರ್ಯಾ ನಿಮ್ಮ ಮನೆಗೆ ಬಂದ್ರೆ ಕುಟುಂಬವೇ ನಾಶವಾಗುತ್ತೆ! ಬಚ್ಚನ್​ ಕಟುಂಬದ ಪತ್ರ ರಹಸ್ಯ ಬಯಲು

Aishwarya Rai
Published on

ಮುಂಬೈ: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಒಂದು ಕಾಲದಲ್ಲಿ ಹಿಂದಿ ಚಿತ್ರರಂಗವನ್ನು ಆಳಿದ ಸ್ಟಾರ್​ ನಟಿ ಇವರು. ಐಶ್ವರ್ಯಾ ಮೂಲತಃ ಕರ್ನಾಟಕದವರು. ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸುಂದರಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್​ ಬಚ್ಚನ್ ಅವರ ಸೊಸೆ ಎಂಬುದು ಎಲ್ಲರಿಗೂ ಗೊತ್ತು. ನಟ ಅಭಿಷೇಕ್​ ಬಚ್ಚನ್​ರನ್ನು ವರಿಸಿದ್ದಾರೆ.

ಐಶ್ವರ್ಯಾ ಮೊದಲು ಸಲ್ಮಾನ್ ಖಾನ್ ಜೊತೆ ಸಂಬಂಧ ಹೊಂದಿದ್ದರು ಎಂಬ ಸುದ್ದಿಯೂ ಇದೆ. ಭಿನ್ನಾಭಿಪ್ರಾಯಗಳಿಂದ ಇಬ್ಬರು ದೂರಾದ ಬಳಿಕ ಐಶ್ವರ್ಯಾ ಹೆಸರು ನಟ ವಿವೇಕ್​ ಒಬೆರಾಯ್​ ಜತೆಯೂ ತಳುಕು ಹಾಕಿಕೊಂಡಿತ್ತು. ವಿವೇಕ್​ ಜತೆಗಿನ ಸಂಬಂಧ ಸಹ ಹೆಚ್ಚು ದಿನ ಉಳಿಯಲಿಲ್ಲ. ಕೊನೆಗೆ ಅಭಿಷೇಕ್ ಬಚ್ಚನ್​ ಪ್ರೀತಿಯಲ್ಲಿ ಬಿದ್ದರು. ಧೂಮ್ 2 ಶೂಟಿಂಗ್ ಸಮಯದಲ್ಲಿ ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಅಭಿಷೇಕ್​ ಮತ್ತು ಐಶ್ವರ್ಯಾ ನಿಶ್ಚಿತಾರ್ಥವು 2007ರ ಜನವರಿ 14 ರಂದು ನಡೆಯಿತು. ಈ ಸಂದರ್ಭದಲ್ಲಿ ಅಮಿತಾಭ್​ ಬಚ್ಚನ್ ಈ ಸುದ್ದಿಯನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು. ಆದರೆ ಅದೇ ಸಮಯದಲ್ಲಿ ಅಮಿತಾಭ್​ಗೆ ಯಾರೋ ಒಬ್ಬರು ಆಘಾತಕಾರಿ ಪತ್ರ ಬರೆದಿದ್ದರು. ಅದರಲ್ಲಿ ಐಶ್ವರ್ಯಾ ರೈ ನಿಮ್ಮ ಮನೆಗೆ ಬಂದರೆ ನಿಮ್ಮ ಕುಟುಂಬವೇ ಸರ್ವನಾಶವಾಗುತ್ತೆ ಎಂದು ಬರೆದಿತ್ತು. ಈ ಪತ್ರ ಸಹಜವಾಗಿಯೇ ಬಚ್ಚನ್ ಕುಟುಂಬದಲ್ಲಿ ಕೊಂಚ ಆತಂಕ ಮೂಡಿಸಿತ್ತು. ಈ ಬಗ್ಗೆ ಸಾಕಷ್ಟು ಪ್ರಚಾರ ಸಹ ಆಯಿತು. ಆ ಸಂದರ್ಭದಲ್ಲಿ ನಕಾರಾತ್ಮಕತೆಯನ್ನು ಹೋಗಲಾಡಿಸಲು ಅಮಿತಾಭ್​ ಮನೆಯಲ್ಲಿ ಪೂಜೆಗಳು ಸಹ ನಡೆದವು ಎಂದು ಹೇಳಲಾಗಿದೆ.

ಇನ್ನು ಐಶ್ವರ್ಯಾ ವಿಚಾರದಲ್ಲಿ ಅಮಿತಾಭ್​ಗೆ ಬರೆದ ಪತ್ರದಲ್ಲಿ ಭಾವೋದ್ವೇಗ ಹೊರತು ತರ್ಕವೇನು ಇಲ್ಲ ಎಂಬುದನ್ನು ಜನರ ಮನಸಿನಲ್ಲೂ ಇತ್ತು. ಆದರೆ, ಅಮಿತಾಭ್​ ಕುಟುಂಬದ ಅಭಿಮಾನಿಗಳು, ಐಶ್ವರ್ಯಾ ಬಚ್ಚನ್ ಕುಟುಂಬವನ್ನು ನಾಶಮಾಡುತ್ತಾರೆ ಎಂದೂ ಭಾವಿಸಿದ್ದರು. ಆದರೆ, ಅಮಿತಾಭ್​ ಆ ಪತ್ರವನ್ನು ನಿರ್ಲಕ್ಷಿಸಿ, ವದಂತಿಯನ್ನು ಸಹ ತಳ್ಳಿಹಾಕಿದ್ದರು.

ಅಂತಿಮವಾಗಿ ತಮ್ಮ ಮಗನೊಂದಿಗೆ ಐಶ್ವರ್ಯಾ ರೈಗೆ ಮದುವೆ ಮಾಡಿದರು. 2007, ಏಪ್ರಿಲ್ 20ರಂದು ಹಿಂದು ಸಂಪ್ರದಾಯಗಳ ಪ್ರಕಾರ ಅಭಿಷೇಕ್​ ಮತ್ತು ಐಶ್ವರ್ಯಾ ವಿವಾಹವಾದರು. ಆದರೆ, ಇದೀಗ ಈ ಜೋಡಿ ಡಿವೋರ್ಸ್​ ಪಡೆದುಕೊಳ್ಳುತ್ತಿರುವುದಾಗಿ ಕೆಲವು ದಿನಗಳಿಂದ ಭಾರಿ ಸುದ್ದಿಯಾಗುತ್ತಿದೆ. ಅಂಬಾನಿ ಪುತ್ರ ಅನಂತ್​ ಅಂಬಾನಿ ಮದುವೆಯಲ್ಲೂ ಅಭಿಷೇಕ್​ ಐಶ್ವರ್ಯಾ ಒಟ್ಟಿಗೆ ಕಾಣಿಸಿಕೊಳ್ಳದಿದ್ದರಿಂದ ವದಂತಿ ಇನ್ನೂ ಬಲವಾಯಿತು. ಇತ್ತೀಚೆಗೆ ಇಬ್ಬರು ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಹೀಗಾಗಿ ಬಚ್ಚನ್​ ಕುಟುಂಬ ಮತ್ತು ಐಶ್ವರ್ಯಾ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ಎಲ್ಲರೂ ಭಾವಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net