

ಮುಂಬೈ: ನಟ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ ಚಿತ್ರ "ರಾಕಿ ಔರ್ ರಾಣೀಸ್ ಲವ್ ಸ್ಟೋರೀಸ್" ನಾಳೆ ಅಂದರೆ ಜುಲೈ 28 ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಇಡೀ ಬಾಲಿವುಡ್ ಭಾಗವಹಿಸಿತ್ತು. ಬಚ್ಚನ್ ಕುಟುಂಬ ಕೂಡ ಆಗಮಿಸಿತ್ತು. ಅಂದಹಾಗೆ, ಈ ಚಿತ್ರದಲ್ಲಿ ಜಯಾ ಬಚ್ಚನ್ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ಚಿತ್ರದ ಪ್ರದರ್ಶನಕ್ಕೆ ಆಗಮಿಸಿದ್ದು, ಸ್ಕ್ರೀನಿಂಗ್ ಸಮಯದಲ್ಲಿ ಪರಸ್ಪರ ಭೇಟಿಯಾದರು. ಈ ವೇಳೆ ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ಕೂಡ ರಣವೀರ್‌ಗೆ ಉಡುಗೊರೆಯನ್ನು ನೀಡಿದರು.
ಹೌದು, ಶ್ವೇತಾ ಬಚ್ಚನ್ ರಣವೀರ್‌ಗೆ ಪೆಂಡೆಂಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಶ್ವೇತಾ ರಣವೀರ್ ಕುತ್ತಿಗೆಗೆ ಪೆಂಡೆಂಟ್ ಹಾಕಿದ್ದಾರೆ. ಇದಾದ ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿರುವುದು ಕಂಡು ಬಂದಿದೆ. "ರಾಕಿ ಔರ್ ರಾಣೀಸ್ ಲವ್ ಸ್ಟೋರೀಸ್" ಚಿತ್ರ ಜುಲೈ 28 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ಕರಣ್ ಬಾಲಿವುಡ್‌ನಲ್ಲಿ ಚಲನಚಿತ್ರ ನಿರ್ಮಾಪಕರಾಗಿ 25 ವರ್ಷಗಳನ್ನು ಪೂರೈಸಲಿದ್ದಾರೆ.