ಮಗಳೊಂದಿಗೆ ನಟಿಸಿದ 'ಬಿಗ್​ ಬಿ' ... ಯಾವ ಚಿತ್ರ?

Amitabh Bachchan Family 1
Published on

ಮುಂಬೈ: ಬಾಲಿವುಡ್​ನ 'ಬಿಗ್​ ಬಿ' ಅಮಿತಾಭ್​ ಬಚ್ಚನ್​ ಅವರು ಹೆಂಡತಿ ಜಯಾ ಬಚ್ಚನ್​, ಮಗ ಅಭಿಷೇಕ್​ ಬಚ್ಚನ್​ ಮತ್ತು ಸೊಸೆ ಐಶ್ವರ್ಯಾ ರೈ ಜತೆಗೆ ಕೆಲವು ಚಿತ್ರಗಳಲ್ಲಿ ನಟಿಸಿರಲಿಲ್ಲ. ಇದೀಗ ಅಮಿತಾಭ್​ ಬಚ್ಚನ್​ ಮತ್ತು ಅವರ ಮಗಳು ಶ್ವೇತಾ ನಂದ ತೆರೆ ಹಂಚಿಕೊಂಡಿದ್ದಾರೆ.

ಇಷ್ಟು ಕೇಳುತ್ತಿದ್ದಂತೆ ಯಾವ ಚಿತ್ರ? ಏನು ಕಥೆ? ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿಯೇ ಬರಬಹುದು. ಅಮಿತಾಭ್​ ಮತ್ತು ಅವರ ಮಗಳು ಶ್ವೇತಾ ಜತೆಯಾಗಿ ನಟಿಸಿರುವುದು ಸಿನಿಮಾದಲ್ಲ್ಲ, ಜಾಹೀರಾತೊಂದರಲ್ಲಿ. ಇದರಲ್ಲಿ ಅವರಿಬ್ಬರಷ್ಟೇ ಅಲ್ಲ, ಜಯಾ ಬಚ್ಚನ್​ ಸಹ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಈ ಜಾಹೀರಾತಿನ ಚಿತ್ರೀಕರಣ ನಡೆದಿದ್ದು, ಅಮಿತಾಭ್​, ಜಯಾ ಮತ್ತು ಶ್ವೇತಾ ಜತೆಯಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಈ ಮೂವರೂ ಎರಡೆರೆಡು ವಿಭಿನ್ನ ಕಾಸ್ಟ್ಯೂಮ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಅಮಿತಾಭ್​ ಬಚ್ಚನ್​ ಅವರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಪತ್ನಿ ಮತ್ತು ಮಗಳ ಜತೆಗಿರುವ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ಫೋಟೋಗಳಿಗೆ ಅವರು 'ಫ್ಯಾಮಿಲಿ ಅಟ್​ ವರ್ಕ್​' ಎಂಬ ಕ್ಯಾಪ್ಶನ್​ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕುಟುಂಬದವರು ಒಟ್ಟಿಗೆ ನಟಿಸುವಾಗ ಒಂದು ಹಿತವಾದ ಅನುಭವ ಸಿಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ಅಮಿತಾಭ್​ ತಮ್ಮ ಹೆಂಡತಿ ಮತ್ತು ಮಗಳ ಜತೆಗೆ ಕಾಣಿಸಿಕೊಂಡಿರುವ ಜಾಹೀರಾತು ಯಾವ ಬ್ರಾಂಡ್​ದು ಇರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಜಾಹೀರಾತು ಸದ್ಯದಲ್ಲೇ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net