More

    ವಿಚ್ಛೇದನ ವದಂತಿ ಬೆನ್ನಲ್ಲೇ ಸೊಸೆ ಐಶ್ವರ್ಯರನ್ನು ಅನ್​ಫಾಲೋ ಮಾಡಿದ ಬಿಗ್​ ಬಿ; ಸಾಮಾಜಿಕ ಜಾಲತಾಣದಲ್ಲಿ ರಹಸ್ಯ ಪೋಸ್ಟ್

    ಮುಂಬೈ: ಕಳೆದ ಕೆಲ ದಿನಗಳಿಂದ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ಅವರ ಕುಟುಂಬವು ಗಾಸಿಪ್​ ಮಾತ್ರವಲ್ಲದೆ ಚರ್ಚೆಯ ವಿಚಾರವಾಗಿ ಬದಲಾಗಿದ್ದು, ಐಶ್ವರ್ಯ ಹಾಗೂ ಅಭಿಷೇಕ್​ ನಡುವೆ ಎಲ್ಲವೂ ಸರಿ ಇಲ್ಲ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂದು ವದಂತಿ ಎಲ್ಲೆಡೆ ಹಬ್ಬಿದ್ದು, ಈ ಕುರಿತು ಬಚ್ಚನ್​ ಕುಟುಂಬದ ಸದಸ್ಯರು ಈವರೆಗೂ ಸ್ಪಷ್ಟನೆ ನೀಡಿಲ್ಲ.

    ಕೆಲವು ದಿನಗಳ ಹಿಂದೆ ಅಭಿಷೇಕ್​ ಬಚ್ಚನ್​ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅಭಿಷೇಕ್ ತಮ್ಮ ಮದುವೆ ಉಂಗುರವನ್ನು ಧರಿಸಿರಲಿಲ್ಲ. ಅಷ್ಟೇ ಅಲ್ಲದೆ, ಕೆಲ ದಿನಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಐಶ್ವರ್ಯಾ ಕೂಡ ವೆಡ್ಡಿಂಗ್ ರಿಂಗ್ ಧರಿಸಿರಲಿಲ್ಲ. ಈ ಎರಡು ಘಟನೆಗಳು ವದಂತಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.

    ಇದೀಗ ಹೊಸ ವಿಚಾರ ಒಂದರಲ್ಲಿ ಅಮಿತಾಬ್​ ಬಚ್ಚನ್​ ಸೊಸೆ ಐಶ್ವರ್ಯ ರೈ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅನ್​ಫಾಲೋ ಮಾಡಿದ್ದು, ಎದ್ದಿರುವ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ ಪೋಸ್ಟ್​ ಒಂದನ್ನು ಶೇರ್​ ಮಾಡಿರುವ ಬಿಗ್​ ಬಿ ಎಲ್ಲವೂ ಹೇಳಿದೆ ಎಲ್ಲವನ್ನೂ ಮಾಡಿದೆ. ಮಾಡುವುದನ್ನೂ ಮಾಡಿಯಾಗಿದೆ ಎಂದು ಬರೆದುಕೊಳ್ಳುವ ಮೂಲಕ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

    ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ವಿರಾಟ್​ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ: ಜಾಕ್​ ಕಾಲಿಸ್

    ಶ್ವೇತಾ ನಂದ ಪುತ್ರ ಅಭಿನಯಿಸಿರುವ ‘ದಿ ಆರ್ಚೀಸ್‌’ ಫಸ್ಟ್ ಶೋಗೆ ಇಡೀ ಬಚ್ಚನ್ ಕುಟುಂಬವು ರೆಡ್ ಕಾರ್ಪೆಟ್ಗೆ ಬಂದಿತ್ತು. ಈ ವೇಳೆ ಎಲ್ಲರ ಕಣ್ಣು ಐಶ್ವರ್ಯಾ ಮತ್ತು ಅಭಿಷೇಕ್ ಮೇಲೆ ನೆಟ್ಟಿತ್ತು. ಎಂದಿನಂತೆ ಅಭಿಷೇಕ್ ಮತ್ತು ಐಶ್ವರ್ಯಾ ನಡುವೆ ಇದ್ದ ಬಾಂಡಿಂಗ್ ಈ ಬಾರಿ ಕಾಣಲಿಲ್ಲ ಎಂದು ಅಭಿಮಾನಿಗಳು ಭಾವಿಸಿದ್ದಾರೆ.

    ಈ ವೇಳೆ ಐಶ್ವರ್ಯಾ ರೈ ಅಗಸ್ತ್ಯ ಅವರು ನಗುತ್ತಲೇ ಟೀಕೆ ಮಾಡಿದ್ದರು. ‘ನೀನು ಕ್ಯಾಮೆರಾ ಫೇಸ್ ಮಾಡೋದು ಕಲಿಯಬೇಕು’ ಎಂದು ಹೇಳಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.  ಈ ಕಾರಣದಿಂದಲೇ ಅಮಿತಾಭ್ ಅವರು ಐಶ್ವರ್ಯಾ ಅವರನ್ನು ಅನ್​ಫಾಲೋ ಮಾಡಿರಬಹುದು ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಬಚ್ಚನ್​ ಕುಟುಂಬ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts