More

    ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ವಿರಾಟ್​ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ: ಜಾಕ್​ ಕಾಲಿಸ್

    ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಅತಿಥೇಯರ ವಿರುದ್ಧ ಮೂರು ಮಾದರಿಯ​ ಸರಣಿಯನ್ನು ಆಡಲಿದೆ. ಟಿ-20 ಪಂದ್ಯದಿಂದ ಸರಣಿ ಆರಂಭವಾಗಿದ್ದು, ಇದಾದ ಬಳಿಕ ಟೀಂ ಇಂಡಿಯಾ ಏಕದಿನ ಹಾಗೂ ಟೆಸ್ಟ್​ ಪಂದ್ಯವನ್ನು ಆಡಲಿದೆ. ಏಕದಿನ ಹಾಗೂ ಟಿ-20ಯಿಂದ ವಿಶ್ರಾಂತಿ ಪಡೆದಿರುವ ವಿರಾಟ್​ ಕೊಹ್ಲಿ ಟೆಸ್ಟ್​ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.

    ಇತ್ತೀಚಿಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ವಿರಾಟ್​ ಕೊಹ್ಲಿ ದಕ್ಷಿಣ ಆಫ್ರಿಕಾರ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾರತವನ್ನು ಗೆಲ್ಲಿಸಿಕೊಡಬಹುದಾದ ಆಟಗಾರ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗರೊಬ್ಬರು ಭವಿಷ್ಯ ನುಡಿದಿದ್ದಾರೆ. ಡಿಸೆಂಬರ್ 26ರಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್​ ಸರಣಿ ಶುರುವಾಗಲಿದೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. ಎರಡು ಪಂದ್ಯಗಳಲ್ಲೂ ವಿರಾಟ್‌ ಮಿಂಚು ಹರಿಸಿದರೆ ಆಗ ಸರಣಿ ಗೆದ್ದು ಇತಿಹಾಸ ಸೃಷ್ಟಿಸಬಹುದು. ವಿರಾಟ್ ಕೊಹ್ಲಿ ಅದ್ಭುತ ಆಟಗಾರನಾಗಿದ್ದು, ಮುಂಬರುವ ಟೆಸ್ಟ್ ಸರಣಿಯಲ್ಲಿ ಮಿಂಚುವುದಲ್ಲದೆ, ತಮ್ಮ ಅನುಭವವನ್ನು ಯುವ ಆಟಗಾರರಿಗೆ ಹಂಚಿ ತಂಡದ ಗೆಲುವಿಗೆ ಸಹಕರಿಸಬಹುದು ಎಂದು ಹೇಳಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ವಿರಾಟ್​ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ: ಜಾಕ್​ ಕಾಲಿಸ್

    ಇದನ್ನೂ ಓದಿ: 4 ಲೀಟರ್​ ಪೆಟ್ರೋಲ್​ಗೆ 16 ಸಾವಿರ ರೂ.; ಇಷ್ಟೊಂದು ದುಬಾರಿನಾ ಎಂದ ಗ್ರಾಹಕರು

    ವಿರಾಟ್​ ಕೊಹ್ಲಿ ಒಬ್ಬ ದೊಡ್ಡ ಆಟಗಾರನಾಗಿದ್ದು, ಆತ ಎಲ್ಲಿ ನಿಂತು ಆಡುತ್ತಿದ್ದಾನೆ ಎಂಬುದು ಮುಖ್ಯವಾಗುವುದಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಆತ ಅತಿ ಹೆಚ್ಚು ರನ್​ ಗಳಿಸುವ ಮೂಲಕ ಯಶಸ್ಸನ್ನು ಸಾಧಿಸಬಹುದಾಗಿದೆ. ಈ ಮೂಲಕ ತನ್ನಲ್ಲಿರುವ ಯುವ ಆಟಗಾರರಿಗೆ ಅನುಭವವನ್ನು ಹಂಚಬಹುದಾಗಿದೆ.

    ದಕ್ಷಿಣ ಆಫ್ರಿಕಾದ ಬೌನ್ಸರ್​ ಪಿಚ್​ಗಳಲ್ಲಿ ಚೆಂಡನ್ನು ಹೇಗೆ ಎದುರಿಸಬೇಕೆಂದು ಎಂಬುದರ ಕುರಿತು ವಿರಾಟ್​ ಕೊಹ್ಲಿ ಅವರಿಗೆ ವಿಶೇಷ ಜ್ಞಾನ ಇದೇ. ಯಾವ ರೀತಿ ಬ್ಯಾಟಿಂಗ್ ನಡೆಸಬೇಕು ಮತ್ತು ಯುವ ಆಟಗಾರರಿಂದ ತಂಡ ಏನ್ನನ್ನು ಬಯಸುತ್ತದೆ ಎಂಬುದನ್ನು ತಿಳಿಸಿಕೊಡಬಹುದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದರೆ ವಿರಾಟ್ ಕೊಹ್ಲಿಗೆ ಅದ್ಭುತ ಟೆಸ್ಟ್ ಸರಣಿ ಆಗುತ್ತದೆ. ಮತ್ತು ಅವರು ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಕ್​ ಕಾಲಿಸ್​ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts